ಎಂಪಾಕ್ಸ್ ಎಂದು ಕರೆಯಲ್ಪಡುವ ಮಂಕಿಪಾಕ್ಸ್ ನಿಧಾನವಾಗಿ ಹರಡುತ್ತಿದೆ. ಈ ಹಿಂದೆ ಕರೊನಾ ಇಡೀ ಜಗತ್ತೆ ಬೆಚ್ಚಿಬೀಳುವಂತೆ ಮಾಡಿತ್ತು. ಮಂಕಿಪಾಕ್ಸ್ ಕೂಡ ವೈರಲ್ ಸೋಂಕು. ಈ ರೋಗವು 17 ಆಫ್ರಿಕನ್ ದೇಶಗಳಿಗೆ ಮತ್ತು ಖಂಡದ ಹೊರಗಿನ ಅನೇಕ ದೇಶಗಳಿಗೆ ಹರಡಿದೆ. ಹೆಚ್ಚುತ್ತಿರುವ ಮಂಗನ ಕಾಯಿಲೆಯ ದೃಷ್ಟಿಯಿಂದ ಲಾಕ್‌ಡೌನ್‌ನ ಪರಿಸ್ಥಿತಿ ಮತ್ತೆ ಬರಬಹುದು ಎಂಬ ಆತಂಕ ಮೂಡಿದೆ. ಮಂಕಿಪಾಕ್ಸ್ ಎಷ್ಟು ಅಪಾಯಕಾರಿ..? ಅದನ್ನು ತಡೆಯಲು ಏನು ಮಾಡಬಹುದು ಎಂಬುದರ ಮಾಹಿತಿ ಇಲ್ಲಿ ನೀಡಲಾಗಿದೆ.
ಎಂಪಾಕ್ಸ್ ಸೋಂಕಿನ ಲಕ್ಷಣಗಳು: ಸೋಂಕು ಬಂದ 3 ರಿಂದ 17ದಿನಗಳ ನಂತರ ಪರಿಣಾಮಗಳು ಕಾಣಿಸಿಕೊಳ್ಳುತ್ತದೆ. ಜ್ವರ, ಚರ್ಮದ ದದ್ದುಗಳು, ಉಬ್ಬಿರುವ ರಕ್ತನಾಳಗಳು, ತಲೆನೋವು, ದೇಹದ ಸೆಳೆತ, ಬೆನ್ನು ನೋವು, ಶೀತ ಮತ್ತು ಆಯಾಸ, ಕೀವು ತುಂಬಿದ ಗಾಯಗಳೂ ಮಂಕಿಪಾಕ್ಸ್ನ ಲಕ್ಷಣಗಳಾಗಿವೆ. ಚರ್ಮದ ದದ್ದುಗಳ ಜತೆಗೆ ಮುಖ್ಯವಾಗಿ ಬಾಯಿ, ಕೈ ಮತ್ತು ಕಾಲುಗಳಲ್ಲಿಯೂ ದದ್ದುಗಳು ಸಂಭವಿಸುತ್ತವೆ. ಮಂಕಿಪಾಕ್ಸ್ ದೇಹದ ಬಾಹ್ಯ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ.
ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದೇನು: ಇತ್ತೀಚೆಗೆ ವಿಶ್ವಸಂಸ್ಥೆಯು ಎಂಪಾಕ್ಸ್ ಸೋಂಕನ್ನು ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿ ಎಂದು ಘೋಷಿಸಿದೆ. ಆದರೆ ಇದು ಹೊಸ ಕೋವಿಡ್ ಅಲ್ಲ, ಅನಗತ್ಯವಾಗಿ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದೆ. ಈ ವೈರಸ್ ವಿರುದ್ಧ ಹೋರಾಡಲು ಅಂತಾರಾಷ್ಟ್ರೀಯ ಸಹಕಾರ ಬಹಳ ಮುಖ್ಯ ಎಂದು ಹೇಳಿದೆ.
ಎಂಪಾಕ್ಸ್ ಹರಡುವುದು ಹೇಗೆ: ಮಂಕಿಪಾಕ್ಸ್ ವೈರಸ್ ಮುಖ್ಯವಾಗಿ ಸೋಂಕಿತ ವ್ಯಕ್ತಿಯ ಗಾಯಗಳು, ದ್ರವಗಳು ಅಥವಾ ಸೋಂಕಿತ ವಸ್ತುಗಳ ನೇರ ಸಂಪರ್ಕದ ಮೂಲಕ, ಸೋಂಕಿತ ತಾಯಿಯಿಂದ ಮಗುವಿಗೆ ಗರ್ಭಾವಸ್ಥೆಯಲ್ಲಿ ಅಥವಾ ಹೆರಿಗೆಯ ಸಮಯದಲ್ಲಿ, ಲೈಂಗಿಕ ಸಂಬಂಧಗಳ ಸಮಯದಲ್ಲಿಯೂ ಹರಡಬಹುದು.
ಅಪಾಯ ತಪ್ಪಿಸುವುದು ಹೇಗೆ: