Weight Loss : ತೂಕ ಇಳಿಸಿಕೊಳ್ಳುವುದೆಂದರೆ ಸುಲಭದ ಮಾತಲ್ಲ. ಅದಕ್ಕಾಗಿ ದೃಢಸಂಕಲ್ಪ ಬೇಕು ಮತ್ತು ಇಷ್ಟದ ಆಹಾರಗಳನ್ನು ತ್ಯಾಗ ಮಾಡಬೇಕು. ಅಲ್ಲದೆ, ಸಾಕಷ್ಟು ಸವಾಲುಗಳನ್ನೂ ಎದುರಿಸಬೇಕು.
ಒಂದೇ ಕಡೆ ಕುಳಿತು ಮಾಡುವ ಕೆಲಸಗಳಿಂದಾಗಿ ನೂರರಲ್ಲಿ ತೊಂಬತ್ತೊಂಬತ್ತು ಜನರು ಅಧಿಕ ತೂಕದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತಿನ್ನುವುದರಲ್ಲಿ ನಾವು ಮಾಡುವ ಮಿಸ್ಟೇಕ್ಸ್ ಕೂಡ ಅಧಿಕ ತೂಕದ ಸಮಸ್ಯೆಯನ್ನು ಉಂಟುಮಾಡುತ್ತದೆ. ಆದರೆ, ಉತ್ತಮ ಆಹಾರ ಪದ್ಧತಿಯಿಂದ ಮಾತ್ರ ತೂಕವನ್ನು ನಿಯಂತ್ರಣ ಮಾಡಬಹುದು ಎಂದು ತಜ್ಞರು ಯಾವಾಗಲೂ ಹೇಳುತ್ತಲೇ ಇರುತ್ತಾರೆ.
ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಅನೇಕ ಆಹಾರಗಳು ನಮ್ಮ ನಡುವೆ ಇದೆ. ಅವುಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಸಾಕು ತೂಕ ಇಳಿಕೆ ಒಂದು ಸವಾಲೇ ಅಲ್ಲ. ಅಂಥದ್ದೇ ಆಹಾರದ ಬಗ್ಗೆ ನಾವಿಂದು ನಿಮಗೆ ತಿಳಿಸಿಕೊಡುತ್ತಿದ್ದೇವೆ. ಅದನ್ನು ಪ್ರತಿದಿನ ತಪ್ಪದೇ ಸೇವನೆ ಮಾಡಿದರೆ ಸಾಕು ನಿಮ್ಮ ದೇಹದಲ್ಲಿರುವ ಕೊಬ್ಬು ಬೆಣ್ಣೆಯಂತೆ ಕರಗಿ ಹೋಗುತ್ತದೆ. ಯಾವುದು ಆ ಆಹಾರ ಅಂತೀರಾ ಅದುವೇ ಬೀಟ್ರೂಟ್. ತೂಕ ಇಳಿಸಿಕೊಳ್ಳಲು ಸಹಾಯ ಮಾಡುವ ಅತ್ಯುತ್ತಮ ಆಹಾರಗಳಲ್ಲಿ ಬೀಟ್ರೂಟ್ ಕೂಡ ಒಂದೆಂದು ಪರಿಗಣಿಸಲಾಗಿದೆ.
ನೆಲದಡಿಯಲ್ಲಿ ಬೆಳೆಯುವ ಈ ಗೆಡ್ಡೆಗಳು ದೇಹದ ತೂಕಕ್ಕೆ ಕಾರಣವಾಗುವ ಕ್ಯಾಲೊರಿಗಳನ್ನು ಸುಡುವ ಶಕ್ತಿಯನ್ನು ಹೊಂದಿವೆ. ಇದರ ಜೊತೆಗೆ, ಬೀಟ್ರೂಟ್ ಫೈಬರ್ ಭರಿತ ಆಹಾರವಾಗಿದೆ. ಆದ್ದರಿಂದ ಇದನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳುವುದು ತುಂಬಾನೇ ಉತ್ತಮ.
ಸಂಶೋಧನೆಯ ಪ್ರಕಾರ, ಬೀಟ್‌ರೂಟ್ ಜ್ಯೂಸ್ ದೇಹದ ತೂಕವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಬೀಟ್‌ರೂಟ್ ಅನ್ನು ಸೇರಿಸಲು ಸಹಾಯ ಮಾಡುವ ಆಹಾರಗಳ ಪ್ರಕಾರಗಳನ್ನು ನೀವೀಗ ತಿಳಿದುಕೊಳ್ಳಬಹುದು.
ಒಂದು ಬೀಟ್ರೂಟ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿಕೊಳ್ಳಿ, ಅವುಗಳನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ, ಅದಕ್ಕೆ ಸ್ಟ್ರಾಬೆರಿ, ಅರ್ಧ ಬಾಳೆಹಣ್ಣು, ಅರ್ಧ ಕಪ್ ಪಾಲಕ್ ಮತ್ತು ಒಂದು ಕಪ್ ಹಾಲು, ಒಂದು ಚಮಚ ನಿಂಬೆ ರಸ ಮತ್ತು ಒಂದು ತುಂಡು ಶುಂಠಿಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದನ್ನು ಸೋಸಿಕೊಳ್ಳಿ. ಅಗತ್ಯವಿದ್ದರೆ ಹಾಲು ಅಥವಾ ನೀರು ಸೇರಿಸಿಕೊಳ್ಳಿ. ಬಳಿಕ ಒಂದು ಲೋಟಕ್ಕೆ ಸುರಿದುಕೊಂಡು ಕುಡಿಯಿರಿ. ನೀವು ಬೆಳಗ್ಗೆ ಅಥವಾ ರಾತ್ರಿಯಲ್ಲಿ ಇದನ್ನು ಕುಡಿಯಬಹುದು. ಇದು ನಿಮ್ಮ ಹಸಿವನ್ನು ನಿಯಂತ್ರಿಸುತ್ತದೆ ಮತ್ತು ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.
ಒಂದು ಪ್ಯಾನ್‌ನಲ್ಲಿ ಒಂದು ಚಮಚ ಆಲಿವ್ ಎಣ್ಣೆಯನ್ನು ಬಿಸಿ ಮಾಡಿಕೊಳ್ಳಿ, 1 ಕತ್ತರಿಸಿದ ಈರುಳ್ಳಿ ಮತ್ತು 2 ಬೆಳ್ಳುಳ್ಳಿ ಎಸಳುಗಳನ್ನು ಹಾಕಿ ಹುರಿಯಿರಿ. ಇದಾದ ಬಳಿಕ ಸಿಪ್ಪೆ ಸುಲಿದು ಕತ್ತರಿಸಿದ ಬೀಟ್‌ರೂಟ್ ಮತ್ತು 1 ಇಂಚು ಶುಂಠಿಯನ್ನು ಸೇರಿಸಿ ಮತ್ತೆ ಹುರಿಯಿರಿ. ಬೀಟ್‌ರೂಟ್ ಚೆನ್ನಾಗಿ ಬೆಂದ ನಂತರ, ಅದಕ್ಕೆ 4 ಕಪ್ ನೀರು ಸೇರಿಸಿ 20 ರಿಂದ 25 ನಿಮಿಷಗಳ ಕಾಲ ಚೆನ್ನಾಗಿ ಕುದಿಯಲು ಬಿಡಿ. ಮಿಶ್ರಣ ಒಣಗಿದ ನಂತರ, ಅದನ್ನು ಮಿಕ್ಸಿ ಜಾರ್‌ನಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿ. ಬಳಿಕ ಆ ಮಿಶ್ರಣಕ್ಕೆ ಸ್ವಲ್ಪ ಮೆಣಸಿನ ಪುಡಿ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮತ್ತೆ ಕುದಿಯಲು ಬಿಡಿ. ಹಸಿರು ಎಲೆ ತರಕಾರಿಗಳು ಅಥವಾ ಪಾರ್ಸ್ಲಿ ಎಲೆಗಳನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಒಟ್ಟಿಗೆ ಬೆರೆಸಿದರೆ ರುಚಿಕರವಾದ ಬೀಟ್‌ರೂಟ್ ಸೂಪ್ ರೆಡಿ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.