Home remedies: ಇಂದಿನ ದಿನಗಳಲ್ಲಿ ತಲೆಯ ಹೊಟ್ಟು ಒಂದು ಸಾಮಾನ್ಯ ಸಮಸ್ಯೆಯಾಗಿದೆ. ಇದು ತಲೆಯ ಒಣಗುವಿಕೆ, ತುರಿಕೆ ಮತ್ತು ಕಿರಿಕಿರಿಯನ್ನು ಉಂಟುಮಾಡುತ್ತದೆ. ಇದಕ್ಕೆ ಅನೇಕ ಕಾರಣಗಳಿವೆ, ಉದಾಹರಣೆಗೆ ಒಣ ಚರ್ಮ, ಶಿಲೀಂಧ್ರಗಳ ಸೋಂಕು, ತೈಲಗ್ರಂಥಿಗಳ ಅತಿಯಾದ ಕಾರ್ಯ ಅಥವಾ ತಪ್ಪಾದ ಆಹಾರ ಪದ್ಧತಿಗಳು ತಲೆಹೊಟ್ಟಿಗೆ ಕಾರಣವಾಗುತ್ತದೆ. ಈ ಸಮಸ್ಯೆಗೆ ರಾಸಾಯನಿಕ ಉತ್ಪನ್ನಗಳ ಬದಲಿಗೆ ಮನೆಯಲ್ಲಿಯೇ ರಾಸಾಯನಿಕ ಪದಾರ್ಥಗಳಿಂದ ತಯಾರಿಸಿದ ಮದ್ದುಗಳನ್ಉ ಬಳಸುವುದರಿಂದ ನಿಮ್ಮ ತಲೆಯ ಹೊಟ್ಟು ಕಡಿಮೆಯಾಗುತ್ತದೆ.
ಅಧಿಕ ಜನರಲ್ಲಿ ಈ ಸಮಸ್ಯೆ ಬೇರೂರಿದ್ದು, ಕೊಬ್ಬರಿ ಎಣ್ಣೆ ಮತ್ತು ನಿಂಬೆ ರಸವನ್ನು ಮಿಶ್ರಣ ಮ,ಆಡಿ ತಲೆಗೆ ಹಚ್ಚುವುದರಿಂದ ತಲೆಯ ಹೊಟ್ಟು ಕಡಿಮೆಯಾಗುತ್ತದೆ. ಕೊಬ್ಬರಿ ಎಣ್ಣೆಯು ತಲೆಯ ಚರ್ಮವನ್ನು ತೇವಗೊಳಿಸುತ್ತದೆ ಮತ್ತು ನಿಂಬೆ ರಸ ಶಿಲೀಂಧ್ರ ವಿರೋಧಿ ಗುಣಗಳನ್ನು ಹೊಂದಿದೆ. ಆದರಿಂದ 2 ಚಮಚ ಕೊಬ್ಬರಿ ಎಣ್ಣೆಗೆ 1 ಚಮಚ ನಿಂಬೆ ರಸ ಬೆರೆಸಿ ಮಿಶ್ರಣ ಮಾಡಿ ತಲೆಗೆ ಹಚ್ಚಿ 15 ನಿಮಿಷ ಮಸಾಜ್ ಮಾಡಿ ನಂತರ 30 ನಿಮಿಷಗಳ ಕಾಲ ಹಾಗೆ ಬಿಟ್ಟು ಬೆಚ್ಚಗಿನ ನೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದ ತಲೆಯ ಹೊಟ್ಟು ಕಡಿಮೆಯಾಗುತ್ತದೆ.
ಮೊಸರು ತಲೆಯ ಚರ್ಮವನ್ನು ಆರಾಮಗೊಳಿಸುತ್ತದೆ. ಹಾಗೂ ಜೇನುತುಪ್ಪ ಬ್ಯಾಕ್ಟೀರಿಯಾ ವಿರೋಧಿ ಗುಣವನ್ನು ಹೊಂದಿದೆ. ಆದರಿಂದ ಅರ್ಧ ಕಪ್ ಮೊಸರಿಗೆ 1 ಚಮಚ ಜೇನುತುಪ್ಪವನ್ನು ಬೆರೆಸಿ. ಈ ಮಿಶ್ರಣವನ್ನು ತಲೆಗೆ ಲೇಪಿಸಿ, 20-30 ನಿಮಿಷಗಳ ಕಾಲ ಬಿಟ್ಟು, ತಣ್ಣೀರಿನಿಂದ ತೊಳೆಯಿರಿ. ಇದು ತುರಿಕೆಯನ್ನು ಕಡಿಮೆ ಮಾಡಿ, ತಲೆಯ ಚರ್ಮವನ್ನು ಆರೋಗ್ಯಕರವಾಗಿರಿಸಲು ಸಹಾಯ ಮಾಡುತ್ತದೆ.
ತುಳಸಿ ಎಲೆಗಳು ಆರೋಗ್ಯಕ್ಕೆ ಒಳ್ಳೆಯದು. ಇವು ಆಂಟಿಮೈಕ್ರೊಬಿಯಲ್ ಗುಣಗಳು ಶಿಲೀಂಧ್ರ ಸೋಂಕನ್ನು ತಡೆಯುತ್ತವೆ. ತುಳಸಿ ಎಲೆಯನ್ನು ಮಿಕ್ಸಿ ಮಾಡಿ. ತಲೆಗೆ ಹಚ್ಚಿ 30 ನಿಮಿಷ ಬಿಟ್ಟು ಬೆಚ್ಚಗಿನ ನೀರಿನಲ್ಲಿ ತೊಳೆಯಿರಿ. ಇದು ತಲೆಯ ಹೊಟ್ಟನ್ನು ಕಡಿಮೆ ಮಾಡುತ್ತದೆ.
ಆಪಲ್ ಸೈಡರ್ ವಿನೆಗರ್ ತಲೆಯ pH ಮಟ್ಟವನ್ನು ಸಮತೋಲನಗೊಳಿಸುತ್ತದೆ. ಆದರಿಂದ 2 ಚಮಚ ವಿನೆಗರ್‌ಗೆ 4 ಚಮಚ ನೀರನ್ನು ಬೆರೆಸಿ. ಈ ಮಿಶ್ರಣವನ್ನು ತಲೆಗೆ ಸಿಂಪಡಿಸಿ, 15 ನಿಮಿಷಗಳ ಕಾಲ ಬಿಟ್ಟು, ತೊಳೆಯಿರಿ. ಹೀಗೆ ವಾರಕ್ಕೆ ಎರಡು ಬಾರಿ ಮಾಡಿ ಇದು ನಿಮಮ ತಲೆಯಲ್ಲಿರುವ ಹೊಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಇದನ್ನೂ ಮಾಡಿ: ಪ್ರತಿ ವರ್ಷ ನೂರು ಮಕ್ಕಳಿಗೆ ಉಚಿತ ಶಿಕ್ಷಣ, ಪಂಚಮಸಾಲಿ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮಾಜಿ ಸಚಿವ ನಿರಾಣಿ ಹೇಳಿಕೆ
ಅಲೊವೆರಾವನ್ನು ಸಾಮಾನ್ಯವಾಗಿ ಎಲ್ಲಾ ಆರೋಗ್ಯ ಸಮಸ್ಯೆಗಳಿಗೆ ಔಷಧವಾಗಿ ಬಳಸಲಾಗುತ್ತದೆ. ಹಾಗೆಯೇ ಅಲೊವೆರಾ ಜೆಲ್ನ್ನು ತಲೆಗೆ ಹಚ್ಚಿ 20 ನಿಮಿಷಗಳ ಕಾಲ ಚೆನ್ನಾಗಿ ಮಸಾಜ್ ಮಾಡಿ ನಂತರ 1 ಗಂಟೆ ಬಿಟ್ಟು ತೊಳೆಯಿರಿ. ಹೀಗೆ ವಾರಕ್ಕೆ 2 ಬಾರಿ ಮಾಡುವುದರಿಂದ ನಿಮ್ಮ ತಲೆಯಲ್ಲಿರುವ ಹೊಟ್ಟನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಎಚ್ಚರಿಕೆ: ಈ ಮನೆಮದ್ದುಗಳನ್ನು ಬಳಸುವ ಮೊದಲು ಚರ್ಮದ ಸೂಕ್ಷ್ಮತೆಯನ್ನು ಪರೀಕ್ಷಿಸಿ. ಒಂದು ವೇಳೆ ಸಮಸ್ಯೆ ತೀವ್ರವಾಗಿದ್ದರೆ, ಚರ್ಮತಜ್ಞರನ್ನು ಸಂಪರ್ಕಿಸಿಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ