ದೇಹದ ತೂಕ ಹೆಚ್ಚಾಗಿದೆ ಎಂಬ ಚಿಂತೆಯೇ. ಹೊಟ್ಟೆಯ ಭಾಗದಲ್ಲಿರುವ ಬೊಜ್ಜು ಕರಗಿಸುವುದು ಹೇಗೆ ಎಂದು ಆಲೋಚಿಸುತ್ತಿದ್ದೀರ. ಊಟ ಬಿಟ್ಟು ಡಯಟ್ ಮಾಡಿ ತೂಕ ಇಳಿಸುತ್ತಿದ್ದೀರಾ. ಇಷ್ಟೆಲ್ಲಾ ಕಷ್ಟ ಪಡುವ ಬದಲು ಕಡಿಮೆ ಕ್ಯಾಲೊರಿ ಇರುವ ಪ್ರೋಟೀನ್ ಮತ್ತು ಫೈಬರ್ ಅಂಶವಿರುವ ಆಹಾರಪದ್ಧತಿಯನ್ನು ರೂಢಸಿಕೊಂಡರೆ ಸಾಕು. ಬೆಳಗ್ಗೆ ಸಮಯದಲ್ಲಿ ಟೇಸ್ಟಿ ಟಿಫನ್ ತಿನ್ನುವುದರ ಮೂಲಕವು ನಮ್ಮ ತೂಕವನ್ನು ಇಳಿಸಿಕೊಳ್ಳಬಹುದು. ರುಚಿಕರವಾದ ಆಹಾರದ ಜತೆಗೆ ಬೊಜ್ಜು ಕರಗಿಸಲು ಹಾಗೂ ತೂಕ ಇಳಿಸಲು ಇರುವ ಸಿಂಪಲ್ ಮಾರ್ಗ.ಪೋಷಕಾಂಶಗಳಿಂದ ಸಮೃದ್ಧವಾಗಿರುವ ಮತ್ತು ರುಚಿಯಲ್ಲೂ ಅತ್ಯುತ್ತಮವಾಗಿರುವ ಟಿಫನ್ಗಳ ಮಾಹಿತಿಯನ್ನು ನಾವು ನಿಮಗೆ ತಿಳಿಸುತ್ತಿದ್ದೇವೆ.
ಓಟ್ಸ್ ಉಪ್ಪಿಟ್ಟು: ತರಕಾರಿಗಳಿಂದ ಮಾಡಿದ ಓಟ್ಸ್ ಉಪ್ಪಿಟ್ಟಿನಲ್ಲಿ ಫೈಬರ್ ಜತೆಗೆ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಟೇಸ್ಟಿ ಫುಡ್ ಜತೆಗೆ ದಿನವನ್ನು ಆರಂಭಿಸುತ್ತೀರಿ. ಇದು ನಿಮ್ಮ ತೂಕ ಇಳಿಕೆಗೂ ಸಹಕಾರಿಯಾಗಲಿದೆ.
ರಾಗಿ ಇಡ್ಲಿ: ಪೌಷ್ಟಿಕಾಂಶ ಭರಿತ ರಾಗಿ ಇಡ್ಲಿಯನ್ನು ಸೇವಿಸಬಹುದು. ರಾಗಿ ಇಡ್ಲಿಯಲ್ಲಿ ಫೈಬರ್ ಕಂಡುಬರುತ್ತದೆ. ಇದು ತೂಕ ಇಳಿಸುವುದರ ಜತೆಗೆ ಬೊಜ್ಜು ಕರಗಿಸಲು ಸಹಾಯವಾಗುತ್ತದೆ.
ಹೆಸರು ಕಾಳಿನ ಪರೋಟ: ಹೆಸರು ಕಾಳಿನ ಪರೋಟಾ ರುಚಿಕರವಾಗಿರುತ್ತದೆ. ಅಲ್ಲದೆ ಅದರಲ್ಲಿ ಕ್ಯಾಲೋರಿಯು ಕಡಿಮೆ ಇರುತ್ತದೆ. ಇದರ ಸೇವನೆಯು ನಿಮ್ಮ ಹೆಚ್ಚುತ್ತಿರುವ ತೂಕವನ್ನು ಕಡಿಮೆ ಮಾಡುತ್ತದೆ.
ರವಾ ಉಪ್ಪಿಟ್ಟು: ತರಕಾರಿ, ನಿಂಬೆರಸ, ಕಡಿಲೆಕಾಯಿ ಸೇರಿಸಿ ಮಾಡುವ ರವಾ ಉಪ್ಪಿಟ್ಟು ಹೆಚ್ಚು ಪೌಷ್ಟಿಕವಾಗಿರುತ್ತದೆ ಜತೆಗೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ.
ಅಕ್ಕಿ ಮತ್ತು ಉದ್ದಿನಬೇಳೆ ದೋಸೆ: ಈ ದೋಸೆ ಬೆಳಗ್ಗಿನ ಟಿಫನ್ನಲ್ಲಿ ರಾಯಲ್ ಟೇಸ್ಟ್ ಕೊಡುತ್ತದೆ. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು ತೂಕ ಇಳಿಕೆಗೆ ಸಹಕಾರಿಯಾಗಿದೆ.
ರವಾ ದೋಸೆ: ರವಾ ದೋಸೆಯಲ್ಲಿ ಪ್ರೋಟೀನ್ ಮತ್ತು ಕಡಿಮೆ ಕ್ಯಾಲೋರಿ ಇರುವುದರಿಂದ ಆರೋಗ್ಯಕ್ಕೂ ಉತ್ತಮ ಆಹಾರ ಜತೆಗೆ ತೂಕ ಇಳಿಕೆಗೂ ಸಹಾಯ ಮಾಡುತ್ತದೆ.