ಕಬ್ಬಿಣಾಂಶವು ದೇಹಕ್ಕೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ಹಿಮೋಗ್ಲೋಬಿನ್ ಅನ್ನು ಹೆಚ್ಚಿಸಲು ಕಬ್ಬಿಣದ ಅಂಶವು ಸಹಾಯ ಮಾಡುತ್ತದೆ. ಹಿಮೋಗ್ಲೋಬಿನ್ ಕೆಂಪು ರಕ್ತ ಕಣಗಳಲ್ಲಿ ಕಂಡುಬರುವ ಪ್ರಾಥಮಿಕ ಪ್ರೋಟೀನ್ ಆಗಿದೆ. ಇದು ನಮ್ಮ ರಕ್ತ ಕಣಗಳಲ್ಲಿ ಆಮ್ಲಜನಕವನ್ನು ಸಾಗಿಸಲು ಅವಶ್ಯಕವಾಗಿದೆ. ದೇಹವು ಕಬ್ಬಿಣದ ಕೊರತೆಯನ್ನು ಹೊಂದಿದ್ದರೆ ರಕ್ತಹೀನತೆಗೆ ಕಾರಣವಾಗಬಹುದು. ರಕ್ತಹೀನತೆಯಿಂದ ದೌರ್ಬಲ್ಯ, ಆಯಾಸ ಮತ್ತು ಇತರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ನಮ್ಮ ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ಹೋಗಲಾಡಿಸಲು ಇರುವ ಮನೆಮದ್ದು ಯಾವುದು..? ಯಾವ ಆಹಾರವೂ ರಕ್ತಹೀನತೆಯಿಂದ ಬಚಾವ್ ಆಗಲು ಸಹಕರಿಸುತ್ತದೆ.. ಇಲ್ಲಿದೆ ಅದರ ಮಾಹಿತಿ
- ಬೀಟ್ರೂಟ್: ನೈಸರ್ಗಿಕ ಕಬ್ಬಿಣದಿಂದ ಸಮೃದ್ಧವಾಗಿರುವ ಬೀಟ್ರೂಟ್ ರಕ್ತದಲ್ಲಿನ ಹಿಮೋಗ್ಲೋಬಿನ್ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
- ಸಿಟ್ರಸ್ ಹಣ್ಣುಗಳು: ವಿಟಮಿನ್ ಸಿ ಅನ್ನು ನಿಯಮಿತವಾಗಿ ಸೇವಿಸುವುದರಿಂದ ರಕ್ತಹೀನತೆಯಿಂದ ಬಳಲುತ್ತಿರುವ ರೋಗಿಗಳ ಸ್ಥಿತಿಯನ್ನು ಸುಧಾರಿಸುತ್ತದೆ. ವಿಟಮಿನ್ ಸಿ ರಕ್ತವು ಹೆಚ್ಚಿನ ಪ್ರಮಾಣದ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
- ಪಾಲಕ್ ಮತ್ತು ಸೇಬಿನ ರಸ: ಪಾಲಕ್ ಸೊಪ್ಪಿನಲ್ಲಿ ಕಬ್ಬಿಣಾಂಶ ಹೇರಳವಾಗಿದೆ ಮತ್ತು ಸೇಬಿನಲ್ಲಿ ಹಲವು ವಿಧದ ವಿಟಮಿನ್ಗಳು ಇದ್ದು, ಅದು ಕಬ್ಬಿಣಾಂಶವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ.
- ದಾಳಿಂಬೆ ರಸ: ದಾಳಿಂಬೆ ಕಬ್ಬಿಣಾಂಶದ ಉತ್ತಮ ಮೂಲವಾಗಿದೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಇದಕ್ಕಾಗಿ ದಾಳಿಂಬೆ ರಸವನ್ನು ಕುಡಿಯಿರಿ.
- ಬಾಳೆಹಣ್ಣು: ಬಾಳೆಹಣ್ಣುಗಳು ಅಗತ್ಯವಾದ ಪೋಷಕಾಂಶಗಳಾದ ವಿಟಮಿನ್ ಸಿ, ಫೋಲೇಟ್, ಪೊಟ್ಯಾಸಿಯಮ್ ಮತ್ತು ಕಬ್ಬಿಣದಿಂದ ತುಂಬಿವೆ. ಹಸಿರು ಅಥವಾ ಮಾಗಿದ ಬಾಳೆಹಣ್ಣುಗಳನ್ನು ಸೇವಿಸುವುದರಿಂದ ಕಬ್ಬಿಣಾಂಶದ ಮಟ್ಟವನ್ನು ಗಣನೀಯ ಪ್ರಮಾಣದಲ್ಲಿ ಸುಧಾರಿಸಲು ಸಹಾಯ ಮಾಡುತ್ತದೆ.
- ಕಪ್ಪು ಎಳ್ಳು: ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣಾಂಶ ಸಮೃದ್ಧವಾಗಿರುವ ಕಪ್ಪು ಎಳ್ಳು ಕಬ್ಬಿಣದ ಮಟ್ಟವನ್ನು ಹೆಚ್ಚಿಸಲು ಹೆಚ್ಚು ಅವಶ್ಯಕವಾಗಿದೆ.