ಲೈಫ್‌ಸ್ಟೈಲ್

ಕ್ಯಾನ್ಸರ್​ ಅಪಾಯ ಕಡಿಮೆ ಮಾಡುವ ಶಕ್ತಿ ಈ ಹಣ್ಣುಗಳಲ್ಲಿದೆ; ಯಾವೆಲ್ಲಾ ಫ್ರೂಟ್ಸ್​​.. ಇಲ್ಲಿದೆ ಮಾಹಿತಿ

ಕ್ಯಾನ್ಸರ್​​​ ಎಂಬುದು ಗಂಭೀರ ಮತ್ತು ಅಪಾಯಕಾರಿ ಕಾಯಿಲೆಯಾಗಿದೆ. ಈ ಕಾಯಿಲೆಯನ್ನು ತಡೆಗಟ್ಟುವುದು ಅಥವಾ ನಿರ್ನಾಮ ಮಾಡುವುದು ಅಸಾಧ್ಯ. ಆದರೆ ಉತ್ತಮ ಜೀವನಶೈಲಿ ಮತ್ತು ಆಹಾರಕ್ರಮದ ಮೂಲಕ ಅಪಾಯದ ಮಟ್ಟವನ್ನು ಕಡಿಮೆ ಮಾಡಬಹುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮತ್ತು ಸ್ವತಂತ್ರ ರಾಡಿಕಲ್​​ಗಳಿಂದ ಉಂಟಾಗುವ ಹಾನಿಯಿಂದ ನಿಮ್ಮನ್ನು ರಕ್ಷಿಸುವಂತ ಆಹಾರಕ್ರಮವನ್ನು ಅಳವಡಿಸಿಕೊಳ್ಳಬೇಕು.

ಹಣ್ಣುಗಳು ರುಚಿಕರ ಹಾಗೂ ಆರೋಗ್ಯಕರ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಕೆಲವು ಹಣ್ಣುಗಳು ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡುವ ಶಕ್ತಿ ಹೊಂದಿದೆ ಎಂಬುದು ಎಷ್ಟು ಮಂದಿಗೆ ತಿಳಿದಿದೆ... ಹೇಗೆ ಎಂದರೆ ಹಣ್ಣುಗಳು ಆಂಟಿಆಕ್ಸಿಡೆಂಟ್‌ಗಳು, ಫೈಬರ್ ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುತ್ತವೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಹಾಗಾದ್ರೆ ಯಾವೆಲ್ಲಾ ಹಣ್ಣನ್ನು ತಿನ್ನುವುದರಿಂದ ಕ್ಯಾನ್ಸರ್​ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು.. ಇಲ್ಲಿದೆ ಅದರ ಮಾಹಿತಿ

  • ಸೀಬೆಹಣ್ಣು: ಸೀಬೆಹಣ್ಣು ಹೆಚ್ಚಿನ ಪ್ರಮಾಣದಲ್ಲಿ ಲೈಕೋಪೀನ್ ಎಂಬ ಸಂಯುಕ್ತವನ್ನು ಹೊಂದಿದೆ. ಇದು ದೇಹವನ್ನು ಸ್ವತಂತ್ರ ರಾಡಿಕಲ್​ಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಲೈಕೋಪೀನ್ ಪ್ರಾಸ್ಟೇಟ್ ಕ್ಯಾನ್ಸರ್​ ಸೇರಿ ಇತರ ರೀತಿಯ ಕಾಯಿಲೆ ಅಪಾಯವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.
  • ಬೆರ್ರಿ: ಬೆರ್ರಿಯು ಫೈಬರ್, ಫೋಲೇಟ್, ಸಾಕಷ್ಟು ವಿಟಮಿನ್ ಸಿ ಅನ್ನು ಹೊಂದಿದೆ. ಅವು ಕ್ಯಾನ್ಸರ್ ಬೆಳವಣಿಗೆಗೆ ಅಡ್ಡಿಪಡಿಸುವ ಪಾಲಿಫಿನಾಲ್​​ಗಳನ್ನು ಹೊಂದಿರುತ್ತವೆ.
  • ಕಿತ್ತಳೆ: ಕಿತ್ತಳೆ ಹಣ್ಣಿನಲ್ಲಿ ಕಂಡುಬರುವ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಇದು ಕ್ಯಾನ್ಸರ್​​​ನಂತಹ ಗಂಭೀರ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.
  • ಬಾಳೆಹಣ್ಣು: ಬಾಳೆಹಣ್ಣಿನಲ್ಲಿ ಉತ್ತಮ ಪ್ರಮಾಣದ ಪೊಟ್ಯಾಸಿಯಮ್ ಮತ್ತು ವಿಟಮಿನ್ ಬಿ6 ಜತೆಗೆ ಫೈಬರ್​​​ ಅನ್ನು ಸಹ ಹೊಂದಿದೆ. ಇದು ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ಮತ್ತು ಕರುಳಿನ ಕ್ಯಾನ್ಸರ್​​​ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
  • ದ್ರಾಕ್ಷಿ: ದ್ರಾಕ್ಷಿಯು ರೆಸ್ವೆರಾಟ್ರೊಲ್ ಎಂಬ ಪಾಲಿಫಿನಾಲ್ ಸಂಯುಕ್ತವನ್ನು ಹೊಂದಿದೆ. ಇದು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿದೆ. ಸೀಮಿತ ಪ್ರಮಾಣದಲ್ಲಿ ಸೇವಿಸುವುದರಿಂದ ಚರ್ಮದ ಕ್ಯಾನ್ಸರ್, ಸ್ತನ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್​​ ಹೆಚ್ಚಾಗುವ ಅಪಾಯವನ್ನು ಕಡಿಮೆ ಮಾಡಬಹುದು.