ಪ್ರಸಕ್ತ ಜೀವನಶೈಲಿಯಲ್ಲಿ ಪ್ರತಿಯೊಬ್ಬರು ಒಂದಲ್ಲಾ ಒಂದು ಸಮಸ್ಯೆ ಎದುರಿಸುತ್ತಿರುತ್ತಾರೆ. ಅದರಲ್ಲಿ ಒಂದು ಇದ್ದಕ್ಕಿದ್ದಂತೆ ದಪ್ಪವಾಗುವುದು. ಆರೋಗ್ಯಕರವಾಗೋ ಅಥವಾ ಬೊಜ್ಜಿನಿಂದಲೋ ದೇಹದ ಆಕಾರ ಬದಲಾದಾಗ ಸ್ಲಿಮ್ ಆಗಲು ಸಾಕಷ್ಟು ಪ್ರಯತ್ನ ಮಾಡುತ್ತೇವೆ. ಇದು ಸೌಂದರ್ಯದ ಸಮಸ್ಯೆ ಮಾತ್ರವಲ್ಲ, ಅನೇಕ ಗಂಭೀರ ಆರೋಗ್ಯ ಸಮಸ್ಯೆಯನ್ನು ಉಂಟುಮಾಡುತ್ತದೆ. ಅಧಿಕ ಬಿಪಿ, ಕೊಲೆಸ್ಟ್ರಾಲ್, ಮಧುಮೇಹ, ಕೀಲು ನೋವು, ಉಸಿರಾಟದ ತೊಂದರೆ, ಕ್ಯಾನ್ಸರ್ ಮತ್ತು ಜೀರ್ಣಕಾರಿ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾದ್ರೆ ತೂಕು ಇಳಿಸಲು ಏನು ಮಾಡಬೇಕು..? ಕಡಿಮೆ ಕಾರ್ಬೊಹೈಡ್ರೆಟ್ ಇರುವ ಆಹಾರಗಳನ್ನು ಸೇವಿಸುವುದು ತೂಕ ಇಳಿಸಿಕೊಳ್ಳಲು ಉತ್ತಮ ಮಾರ್ಗವಾಗಿದೆ ಎಂಬುದು ನಿಮಗೆ ಗೊತ್ತೆ.. ಯಾವೆಲ್ಲಾ ಆಹಾರ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಿದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.
- ತರಕಾರಿಗಳು ನೈಸರ್ಗಿಕವಾಗಿ ಕಡಿಮೆ ಕಾರ್ಬ್ ಮತ್ತು ಫೈಬರ್, ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿವೆ. ಕೆಲವು ಉತ್ತಮ ಕಡಿಮೆ ಕಾರ್ಬ್ ಆಯ್ಕೆಯೆಂದರೆ ಪಾಲಕ್, ಹೂಕೋಸು, ಕೋಸುಗಡ್ಡೆ, ಹಾಗಲಕಾಯಿ ಮತ್ತು ಎಲೆಕೋಸು.
- ಮೊಟ್ಟೆ ಜತೆಗೆ ಈರುಳ್ಳಿ, ಟೊಮ್ಯಾಟೊ, ಹಸಿರು ಮೆಣಸಿನಕಾಯಿ ಸೇರಿಸಿ ತಯಾರಿಸಿದ ಮಸಾಲಾ ಮೊಟ್ಟೆ ಕರ್ರಿ ಅನಗತ್ಯ ಬೊಜ್ಜು ಕರಗಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಪ್ರೋಟೀನ್ ಸಮೃದ್ಧವಾಗಿರುತ್ತದೆ ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತವೆ.
- ಬೇಳೆಕಾಳುಗಳು ಮತ್ತು ಬೀನ್ಸ್ ಸ್ವಲ್ಪ ಕಾರ್ಬೋಹೈಡ್ರೇಟ್ ಹೊಂದಿದ್ದರೂ, ಫೈಬರ್ ಮತ್ತು ಪ್ರೋಟೀನ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿರುತ್ತವೆ. ಇದು ತೂಕ ಕಡಿಮೆಯಾಗಲು ಸಹಾಯ ಮಾಡುತ್ತದೆ. ಇದಕ್ಕಾಗಿ ನೀವು ಎಲ್ಲ ರೀತಿಯ ಬೇಳೆಕಾಳು, ಕಡಲೆ, ಬೀನ್ಸ್, ಕರಿಬೇವು ಇತ್ಯಾದಿಗಳನ್ನು ದೈನಂದಿನ ಆಹಾರದಲ್ಲಿ ಸೇವಿಸಿದರ ತೂಕ ಇಳಿಕೆ ಮಾಡಬಹುದು.
- ಸೌತೆಕಾಯಿ, ಟೊಮೆಟೊ ಮತ್ತು ಈರುಳ್ಳಿ ಬಳಸಿ ಮಾಡುವಂತಹ ಕಡಲೆಕಾಳಿನ ಚಾಟ್ ಕೂಡ ತೂಕ ಇಳಿಕೆಗೆ ಉತ್ತಮ ಆಹಾರ ಮಾರ್ಗವಾಗಿದೆ. ತೆಂಗಿನಕಾಯಿ ಚಟ್ನಿಯು ಕಡಿಮೆ ಕಾರ್ಬೊಹೈಡ್ರೆಟ್ ಆಹಾರವಾಗಿದ್ದು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಬಹುದು.
- ಪ್ರೋಟೀನ್ ಆಹಾರ ಸೇವಿಸುವುದರಿಂದ ನೀವು ದೀರ್ಘಕಾಲದವರೆಗೆ ಹೊಟ್ಟೆ ತುಂಬಿರುವಂತೆ ಅನುಭವಿಸಲು ಸಹಾಯ ಮಾಡುತ್ತದೆ. ಬೊಜ್ಜು ಕಡಿಮೆ ಮಾಡುವುದರ ಜತೆಗೆ ಸ್ನಾಯುಗಳ ಶಕ್ತಿ ಕಾಪಾಡುವಲ್ಲಿ ಸಹಾಯ ಮಾಡುತ್ತದೆ. ಪ್ರೋಟೀನ್ಯುಕ್ತ ಪದಾರ್ಥಗಳೆಂದರೆ ಚೀಸ್, ಮೊಟ್ಟೆ, ಚಿಕನ್, ಮೀನು, ಇತ್ಯಾದಿಗಳನ್ನು ಸೇವಿಸಬಹುದು.