ಲೈಫ್‌ಸ್ಟೈಲ್

ಚಳಿಗಾಲದಲ್ಲಿ ಎಳನೀರು ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದೇ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ | Tender coconut

Tender coconut : ನೈಸರ್ಗಿಕವಾಗಿ ಹೇರಳವಾಗಿ ದೊರೆಯುವ ಎಳನೀರು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಎಲೆಕ್ಟ್ರೋಲೈಟ್ಸ್​, ವಿಟಮಿನ್ಸ್​, ಮಿನರಲ್ಸ್ ಸೇರಿದಂತೆ ಸಾಕಷ್ಟು ಪೋಷಕಾಂಶಗಳಿಂದ ತುಂಬಿದೆ. ಎಳನೀರು ಸೇವನೆಯು ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ಅನೇಕ ರೋಗಗಳಿಂದ ನಮ್ಮನ್ನು ರಕ್ಷಣೆ ಮಾಡುತ್ತದೆ.

ಇನ್ನು ಚಳಿಗಾಲದಲ್ಲಿ ಎಳನೀರು ಕುಡಿದರೆ ಆರೋಗ್ಯ ಸಮಸ್ಯೆ ಉಂಟಾಗುತ್ತದೆ ಎಂದು ಕೆಲವರು ನಂಬಿದ್ದಾರೆ. ಆದರೆ, ಎಳನೀರು ಯಾವುದೇ ತೊಂದರೆಯನ್ನು ಉಂಟು ಮಾಡುವುದಿಲ್ಲ ಎನ್ನುತ್ತಾರೆ ಆರೋಗ್ಯ ತಜ್ಞರು. ಹಾಗಾದರೆ, ಚಳಿಗಾಲದಲ್ಲಿ ಎಳನೀರು ಕುಡಿದರೆ ಏನಾಗುತ್ತದೆ ಎಂಬದನ್ನು ನಾವೀಗ ತಿಳಿದುಕೊಳ್ಳೋಣ.

ದೇಹದ ಹೈಡ್ರೇಟ್​

ಚಳಿಗಾಲದಲ್ಲಿಯೂ ನಿಯಮಿತವಾಗಿ ಎಳನೀರನ್ನು ಕುಡಿಯಿರಿ. ಆದರೆ, ಅಗತ್ಯಕ್ಕಿಂತ ಹೆಚ್ಚಿಗೆ ಕುಡಿಯಬಾರದು. ಎಳನೀರು ಕುಡಿಯುವುದರಿಂದ ದೇಹವನ್ನು ಹೈಡ್ರೇಟ್​ ಆಗಿ ಇಡುತ್ತದೆ. ಇದರಿಂದ ಚರ್ಮವು ಆರೋಗ್ಯಕರವಾಗಿರುತ್ತದೆ. ಇದರ ಜೊತೆಗೆ ಚಳಿಗಾಲದಲ್ಲಿ ಸಾಮಾನ್ಯವಾಗಿ ಕಾಡುವ ಚರ್ಮದ ಬಿರುಕು, ನೆಗಡಿ ಹಾಗೂ ಕೆಮ್ಮಿನಂತಹ ಸಮಸ್ಯೆಗಳನ್ನೂ ಎಳನೀರು ದೂರ ಮಾಡುತ್ತದೆ.

ಜೀರ್ಣಕ್ರಿಯೆಗೆ ಸಹಕಾರಿ

ಎಳನೀರಿನಿಂದ ಅನೇಕ ಆರೋಗ್ಯ ಸಮಸ್ಯೆಗಳನ್ನು ಹೋಗಲಾಡಿಸಬಹುದು. ಎಳನೀರು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅಸಿಡಿಟಿ ಹಾಗೂ ಹೊಟ್ಟೆನೋವು ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ. ಚಳಿಗಾಲದಲ್ಲಿ ಎಳನೀರು ಕುಡಿಯುವುದರಿಂದ ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಿಸಬಹುದು.

ರೋಗನಿರೋಧಕ ಶಕ್ತಿ ಹೆಚ್ಚಳ

ಚಳಿಗಾಲದಲ್ಲಿ ತೆಂಗಿನ ನೀರು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಎಳನೀರಿನಲ್ಲಿರುವ ಲಾರಿಕ್ ಆಮ್ಲವು ಆ್ಯಂಟಿಫಂಗಲ್, ಆ್ಯಂಟಿಬ್ಯಾಕ್ಟೀರಿಯಲ್ ಮತ್ತು ಆ್ಯಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಹೆಚ್ಚಿಸುತ್ತದೆ. ಇದರಿಂದ ನೆಗಡಿ, ಕೆಮ್ಮು ಮುಂತಾದ ಸಮಸ್ಯೆಗಳು ದೂರವಾಗುತ್ತವೆ ಎಂದು ಪೌಷ್ಟಿಕತಜ್ಞರು ಸಲಹೆ ನೀಡುತ್ತಾರೆ.

ದೇಹವನ್ನು ಶುದ್ಧೀಕರಿಸುತ್ತದೆ

ಎಳನೀರಿನಲ್ಲಿ ಇರುವ ಮೆಗ್ನಿಶಿಯಂ ಮತ್ತು ಕಿಣ್ವಗಳು ದೇಹದಿಂದ ವಿಷವನ್ನು ತೆಗೆದುಹಾಕುತ್ತದೆ ಮತ್ತು ದೇಹವನ್ನು ಶುದ್ಧೀಕರಿಸುತ್ತದೆ. ಆದಾಗ್ಯೂ, ಅನೇಕ ಜನರು ಚಳಿಗಾಲದಲ್ಲಿ ಒಣ ಹಾಗೂ ಒರಟು ಚರ್ಮದ ಸಮಸ್ಯೆಯನ್ನು ಎದುರಿಸುತ್ತಾರೆ. ಎಳನೀರನ್ನು ನೀರನ್ನು ಕುಡಿಯುವುದರಿಂದ ಚರ್ಮವು ಸಾಕಷ್ಟು ಹೈಡ್ರೇಟ್ ಆಗಿ ಈ ಸಮಸ್ಯೆಗಳು ದೂರವಾಗುತ್ತದೆ.

ಹಿಮೋಗ್ಲೋಬಿನ್​ಗೆ ಒಳ್ಳೆಯದು

ತೆಂಗಿನ ನೀರು ಕುಡಿಯುವುದರಿಂದ ಹಿಮೋಗ್ಲೋಬಿನ್ ಮಟ್ಟ ಹೆಚ್ಚುತ್ತದೆ. ರಕ್ತದ ಕೊರತೆಯು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಹೀಗಾಗಿ ಎಳನೀರನ್ನು ಕುಡಿಯಿರಿ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.