ಉತ್ತರ: ನೀವು ಒಮ್ಮೆ ರಕ್ತಪರೀಕ್ಷೆ ಮಾಡಿಸಿಕೊಳ್ಳಿ (ಟಿ3, ಟಿ4, ಟಿಎಸ್‍ಎಚ್). ಥೈರಾಯ್ಡ್ ತೊಂದರೆ ಮತ್ತು ಸಕ್ಕರೆ ಕಾಯಿಲೆ ಇದೆಯಾ ನೋಡಿಕೊಳ್ಳಿ. ಅಲ್ಲದೆ, ಕ್ಯಾಲ್ಸಿಯಂ, ವಿಟಮಿನ್ ಬಿ ಕಾಂಪ್ಲೆಕ್ಸ್ ನ್ಯೂನ್ಯತೆಯಿಂದಲೂ ಸುಸ್ತು ಕಾಣಿಸಿಕೊಳ್ಳುತ್ತದೆ.
ಕೆಲವೊಮ್ಮೆ ಮಾನಸಿಕ ಸುಸ್ತು ದೈಹಿಕ ಸುಸ್ತಾಗಿ ಪರಿಣಮಿಸುತ್ತದೆ. ಆಹಾರದಲ್ಲಿ ಹಾಲು, ಮೊಸರು, ತುಪ್ಪ, ಮೊಳಕೆಕಾಳು, ಸೊಪ್ಪುಗಳನ್ನು ಯಥೇಚ್ಛವಾಗಿ ಸೇವಿಸಿ. ಅಶ್ವಗಂಧಾರಿಷ್ಟ ಮತ್ತು ಬಲಾರಿಷ್ಟವನ್ನು ದಿನಕ್ಕೆರಡು ಬಾರಿ ಮೂರು ಚಮಚೆಯಷ್ಟನ್ನು ನೀರು ಬೆರೆಸಿ ಊಟದ ನಂತರ ಸೇವಿಸಿ. ಮಾನಸಿಕ ಸುಸ್ತು ಕಡಿಮೆ ಮಾಡಿಕೊಳ್ಳಲು ಸಂಗೀತ, ಸಾಹಿತ್ಯ, ಗಿಡ ಬೆಳೆಸುವುದು ಮುಂತಾದ ಹವ್ಯಾಸಗಳನ್ನು ರೂಢಿಸಿಕೊಳ್ಳಿ.
ಆರೋಗ್ಯಕ್ಕೆ ಸಂಬಂಧಿಸಿದ ಇತರ ಲೇಖನಗಳಿಗೆ ಇಲ್ಲಿ ಕ್ಲಿಕ್ ಮಾಡಿ: