ಉತ್ತರ: ನಿಮ್ಮ ಸಮಸ್ಯೆ ಸಮಸ್ಯೆಯೇ ಅಲ್ಲ. ನೀವೇ ತುಂಬ ಚಿಂತೆ ಮಾಡುತ್ತ ಕೀಳರಿಮೆ ಬೆಳೆಸಿಕೊಂಡಿದ್ದೀರಿ. ಪ್ರತಿದಿನ ನಿಯಮಿತ ವ್ಯಾಯಾಮ ಮಾಡುತ್ತ ಸೊಪ್ಪು, ತರಕಾರಿ, ಹಣ್ಣುಗಳನ್ನು ಯಥೇಚ್ಛವಾಗಿ ಸೇವಿಸಿರಿ. ದಿನಕ್ಕೆ ಮೂರು ಲೀಟರ್ ನೀರು ಕುಡಿಯಿರಿ. ಬೊಜ್ಜು ಕರಗುತ್ತದೆ. ಚರ್ಮವೂ ಕಾಂತಿಯುತವಾಗುತ್ತದೆ.
ಚೆನ್ನಾಗಿ ನಿದ್ರೆ ಮಾಡಿ. ದಿನಕ್ಕೆ ಎಂಟು ಗಂಟೆ ಕಾಲ ನಿದ್ರಿಸಿ. ಬಿಳಿಗೂದಲಿಗೆ ಮೆಹೆಂದಿ ಬಳಸಿ. ಮನಸ್ಸು, ದೇಹವನ್ನು ಚಟುವಟಿಕೆಯಿಂದ ಇರಿಸಿಕೊಂಡಲ್ಲಿ ನೀವೂ ಚಿಕ್ಕವರಾಗಿಯೇ ಕಾಣುವಿರಿ.
ಒಣಚರ್ಮದ ತೊಂದರೆಗೆ ವಾರಕ್ಕೊಮ್ಮೆ ಎಳ್ಳೆಣ್ಣೆಯನ್ನು ಬಿಸಿ ಮಾಡಿ ಮೈಗೆ ಹಚ್ಚಿ ಒಂದು ಗಂಟೆ ಬಿಟ್ಟು ಸ್ನಾನ ಮಾಡಿ. ಅಲರ್ಜಿ ಸಮಸ್ಯೆಗೆ ಚಿಕಿತ್ಸೆ ಪಡೆಯಿರಿ. ಅಲ್ಲದೆ, ಪುಸ್ತಕ ಓದುವುದು, ಸಂಗೀತ ಕೇಳುವುದು, ಯೋಗ ಮುಂತಾದವುಗಳಲ್ಲಿ ನಿಮಗಿಷ್ಟವಾದ ಹವ್ಯಾಸ ಬೆಳೆಸಿಕೊಳ್ಳಿ. ಅನವಶ್ಯಕ ಚಿಂತೆ ಬಿಡಿ.