ಪ್ರಾಚೀನ ದೇವಾಲಯಗಳ ಹೊರತಾಗಿ ಧಾರ್ಮಿಕ ನಗರವಾದ ಬನಾರಸ್ ಕೂಡ ತನ್ನ ವಿಶೇಷ ರುಚಿಗೆ ಹೆಸರುವಾಸಿಯಾಗಿದೆ. ಉತ್ತರ ಪ್ರದೇಶದಲ್ಲಿರುವ ಈ ನಗರವನ್ನು ವಾರಣಾಸಿ ಎಂದೂ ಕರೆಯುತ್ತಾರೆ. ಇಲ್ಲಿಗೆ ಪ್ರತಿಯೊಬ್ಬರು ಭೇಟಿ ನೀಡಲು ಬಯಸುತ್ತಾರೆ. ಬನಾರಸ್ ತನ್ನ ಸ್ಟ್ರೀಟ್ ಫುಡ್‌ಗೆ ಹೆಸರುವಾಸಿಯಾಗಿದೆ. ಇಲ್ಲಿಯ ಟೊಮೆಟೊ ಚಾಟ್ ಯಾರಿಗಾದರೂ ಬಾಯಲ್ಲಿ ನೀರೂರಿಸುತ್ತದೆ.(Recipe)
ನೀವು ಆಹಾರಪ್ರಿಯರಾಗಿದ್ದರೆ ಈ ಟೊಮೆಟೊ ಚಾಟ್ ಅನ್ನು ಇಷ್ಟಪಡುತ್ತಿರಿ. ಆದರೆ ಬನಾರಸ್‌ಗೆ ಹೋಗಲು ಸಮಯ ಸಿಗುತ್ತಿಲ್ಲ ಎಂದಾದರೆ ನಿಮಗಾಗಿಯೇ ಉತ್ತರಪ್ರದೇಶದ ಬನಾರಸ್‌ನ ಪ್ರಸಿದ್ಧ ಟೊಮೆಟೊ ಚಾಟ್‌ನ ಮಾಡವುದೇಗೆ ಎಂದು ಇಲ್ಲಿ ತಿಳಿಸಲಾಗಿದೆ.
ಬಾಣಲೆಯಲ್ಲಿ ತುಪ್ಪ ಬಿಸಿ ಮಾಡಿದ ನಂತರ ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿರು ಮೆಣಸಿನಕಾಯಿಯನ್ನು ಸೇರಿಸಿ ಲಘುವಾಗಿ ಹುರಿಯಿರಿ. ಈಗ ಕತ್ತರಿಸಿದ ಟೊಮೆಟೊಗಳನ್ನು ಸೇರಿಸಿ ಜತೆಗೆ ಸ್ವಲ್ಪ ಅರಿಶಿನ, ಚಿಲ್ಲಿ ಪೌಡರ್, ಚಾಟ್ ಮಸಾಲಾ ಸೇರಿಸಿ ಟೊಮೆಟೊ ಮೃದುವಾಗುವವರೆಗೆ ಬೇಯಿಸಿ. ಇದರ ನಂತರ ಸ್ಮ್ಯಾಶ್ ಆಲೂಗಡ್ಡೆ, ಗೋಡಂಬಿ, ಒಣದ್ರಾಕ್ಷಿ ಸೇರಿಸಿ ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ, ಇದಕ್ಕೆ ಹುಣಸೆಹಣ್ಣಿನ ಚಟ್ನಿ ಮತ್ತು ಸ್ವಲ್ಪ ನೀರು ಸೇರಿಸಿ ಕೆಲವು ನಿಮಿಷ ಬೇಯಿಸಲು ಬಿಡಿ.
ನಂತರ ಸರ್ವಿಂಗ್ ಪ್ಲೇಟ್‌ಗೆ ತಯಾರಾಗಿರುವ ಮಿಶ್ರಣವನ್ನು ಹಾಕಿ ಹಸಿರು ಚಟ್ನಿ, ನಿಂಬೆ ರಸ ಮತ್ತು ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಈಗ ಗರಿಗರಿಯಾದ ಪಾಪ್ಡಿಯನ್ನು ಟೊಮೆಟೊ ಚಾಟ್ ಮೇಲೆ ಹಾಕಿ. ಅಲಂಕರಿಸಲು ನಿಮ್ಮ ಆಯ್ಕೆಯ ವಸ್ತುಗಳನ್ನು ಸಹ ನೀವು ಬಳಸಬಹುದು. ಒಮ್ಮೆ ತಿಂದ ನಂತರ ಮತ್ತೊಮ್ಮೆ ಮಾಡಬೇಕೆಂದು ಅನಿಸುತ್ತದೆ. ಈ ರುಚಿಕರವಾದ ಟೊಮೆಟೊ ಚಾಟ್ ಪ್ರತಿಯೊಬ್ಬ ಆಹಾರ ಪ್ರಿಯರಿಗೂ ಇಷ್ಟವಾಗುತ್ತದೆ.