ಲೈಫ್‌ಸ್ಟೈಲ್

ರಾತ್ರಿ ಉಳಿದ ಅನ್ನದಿಂದ 15 ನಿಮಿಷದಲ್ಲಿ ಮಾಡಿ ಫ್ರೈಡ್​ ರೈಸ್​​; ರೆಸ್ಟೋರೆಂಟ್​​ ಶೈಲಿಯ ಸಿಂಪಲ್​ ವಿಧಾನ ನಿಮಗಾಗಿ.. | Recipe

ಫ್ರೈಡ್ ರೈಸ್ ಯಾರಿಗೆ ಇಷ್ಟವಿಲ್ಲ ಹೇಳಿ. ಹೋಟೆಲ್​​ ಹೋದರೆ ಮೊದಲು ನೆನಪಿಗೆ ಬರುವುದೇ ಫ್ರೈಡ್​ರೈಸ್​​. ಎಲ್ಲರು ಇಷ್ಟಪಟ್ಟು ಸೇವಿಸುವ ಆಹಾರ ಎಂದರೆ ತಪ್ಪಾಗುವುದಿಲ್ಲ. ಈಗ ಫ್ರೈಡ್​ರೈಸ್​ ಅನ್ನು ರೆಸ್ಟೋರೆಂಟ್​​​ ಸ್ಟೈಲ್ ನಲ್ಲಿ ಮನೆಯಲ್ಲೇ ತಯಾರಿಸಬಹುದು. ರಾತ್ರಿ ಅನ್ನ ಉಳಿದಿದ್ದರೆ ಚಿಂತಿಸುವ ಅಗತ್ಯವೆ ಇಲ್ಲ. ಅದನ್ನು ಬೆಳಗ್ಗೆಯ ತಿಂಡಿಯಾಗಿ ಫ್ರೈಡ್​ರೈಸ್​ ಮಾಡಿ ಬಡಿಸಬಹುದು. 10 ನಿಮಿಷದಲ್ಲಿ ಫ್ರೈಡ್​ ರೈಸ್​ ಮಾಡುವ ವಿಧಾನವನ್ನು(Recipe) ಇಲ್ಲಿ ತಿಳಿಸಲಾಗಿದೆ.

ಫ್ರೈಡ್ ರೈಸ್ ಮಾಡಲು ಬೇಕಾಗುವ ಪದಾರ್ಥ

  • 1 ಕಪ್ ಅನ್ನ
  • 1 ಕಪ್ ಹೆಚ್ಚಿದ ಈರುಳ್ಳಿ
  • 1 ಕಪ್ ಹೆಚ್ಚಿದ ಹುರುಳಿ
  • ಅಗತ್ಯವಿರುವಷ್ಟು ಬೆಳ್ಳುಳ್ಳಿ
  • 1/2 ಕಪ್ ಕ್ಯಾರೆಟ್
  • ರುಚಿಗೆ ತಕ್ಕಷ್ಟು ಉಪ್ಪು
  • 1/2 ಟೀಸ್ಪೂನ್ ಮೆಣಸಿನ ಪುಡಿ
  • ಕೊತ್ತಂಬರಿ ಸೊಪ್ಪು
  • 1 ಟೀಚಮಚ ಚಿಲ್ಲಿ ಫ್ಲೇಕ್ಸ್
  • ಟೊಮಾಟೊ ಕೆಚಪ್
  • ವಿನೆಗರ್

ಫ್ರೈಡ್ ರೈಸ್ ಮಾಡುವ ವಿಧಾನ

ಮೊದಲು ಬಾಣಲೆಯನ್ನು ತೆಗೆದುಕೊಂಡು ಅದರಲ್ಲಿ ಎಣ್ಣೆ ಹಾಕಿ ಬಿಸಿ ಮಾಡಿ. ಅದಕ್ಕೆ ತುರಿದ ಬೆಳ್ಳುಳ್ಳಿ, ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಹಸಿ ವಾಸನೆ ಹೋದ ಬಳಿಕ ಅದಕ್ಕೆ ಕತ್ತರಿಸಿದ ಕ್ಯಾರೆಟ್ ಮತ್ತು ಬೀನ್ಸ್ ಅನ್ನು ಸೇರಿಸಿ ಎರಡರಿಂದ 3 ನಿಮಿಷ ಫ್ರೈ ಮಾಡಿ. ಈಗ ಉಪ್ಪು, ಮೆಣಸಿನ ಪುಡಿ, ಚಿಲ್ಲಿ ಫ್ಲೇಕ್ಸ್, ಮೆಣಸಿನ ಪುಡಿ, ಕೆಚಪ್ ಮತ್ತು ವಿನೆಗರ್ ಸೇರಿಸಿ ಎಲ್ಲವನ್ನು ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಮುಚ್ಚಳ ಮುಚ್ಚಿ ಒಂದು ಅಥವಾ 2 ನಿಮಿಷಗಳ ಕಾಲ ಬಿಸಿ ಮಾಡಿ. ಇದರಿಂದ ಮಸಾಲೆಗಳ ಸುವಾಸನೆಯು ಅನ್ನಕ್ಕೆ ಚೆನ್ನಾಗಿ ಸೇರಿಕೊಳ್ಳುತ್ತದೆ. ಈಗ ಬಿಸಿಯಾದ ಫ್ರೈಡ್ ರೈಸ್ ಸೇವಿಸಲು ಸಿದ್ಧವಾಗಿದೆ. ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ ಬಿಸಿಯಾಗಿರುವಾಗಲೆ ಬಡಿಸಿ.