ಲೈಫ್‌ಸ್ಟೈಲ್

ಹಸಿ ಪನೀರ್ ಹಾಗೂ ಬೇಯಿಸಿದ ಪನೀರ್​; ಆರೋಗ್ಯಕ್ಕೆ ಯಾವುದು ಹೆಚ್ಚು ಪ್ರಯೋಜನಕಾರಿ| Paneer

Paneer: ಪನೀರ್ ಹಾಲಿನಿಂದ ತಯಾರಿಸಿದ ಡೈರಿ ಉತ್ಪನ್ನವಾಗಿದ್ದು, ಹೆಚ್ಚಿನ ಜನರು ಇದನ್ನು ಇಷ್ಟಪಡುತ್ತಾರೆ. ಇದು ಪೌಷ್ಟಿಕ ಆಹಾರವಾಗಿದ್ದು, ಹೆಚ್ಚಿನ ಪ್ರೋಟೀನ್, ಕ್ಯಾಲ್ಸಿಯಂ ಮತ್ತು ಇತರ ಖನಿಜಗಳನ್ನು ಹೊಂದಿದೆ. ಪನೀರ್ ಅನ್ನು ತರಕಾರಿಯಾಗಿ ಮಾತ್ರವಲ್ಲದೆ ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ. ಅನೇಕ ಜನರು ಪನೀರ್ ಅನ್ನು ಹಸಿಯಾಗಿ ತಿನ್ನಲು ಬಯಸುತ್ತಾರೆ. ಆದರೆ ಉಳಿದವರು ಇದನ್ನು ಚೆನ್ನಾಗಿ ಮಸಾಲೆಯೊಂದಿಗೆ ಬೇಯಿಸಿಕೊಂಡು ತಿನ್ನಲು ಇಷ್ಟಪಡುತ್ತಾರೆ. ಆದರೆ ಈ ಎರಡರಲ್ಲಿ ಯಾವ ವಿಧಾನ ಸೂಕ್ತ ಎಂಬುದನ್ನು ನೋಡೋಣ.

ಪನೀರ್ ಟಿಕ್ಕಾ ಅಥವಾ ಪನೀರ್ ಬಟರ್ ಮಸಾಲಾದಂತಹ ಬೇಯಿಸಿದ ಪನೀರ್ ಎಷ್ಟು ರುಚಿಕರವಾಗಿರುತ್ತದೋ ಅಷ್ಟೇ ಕ್ಯಾಲೋರಿಗಳು ಮತ್ತು ಕೊಬ್ಬು ಅಧಿಕವಾಗಿರುತ್ತದೆ. ಹಾಗಾಗಿ ಅದನ್ನು ಸೇವಿಸುವಾಗ ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಏಕೆಂದರೆ ಬೇಯಿಸಿದ ಪನೀರ್​ ನಿಮ್ಮ ದೇಹದ ತೂಕ ಹೆಚ್ಚಾಗಲು ಕಾರಣವಾಗಬಹುದು. ಇದು ಹೃದಯ ಕಾಯಿಲೆಗೆ ಕಾರಣವಾಗಬಹುದು. ಬೇಯಿಸಿದ ಪನೀರ್ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಅಜೀರ್ಣ ಹಾಗೂ ಗ್ಯಾಸ್ಟ್ರಿಕ್​ನಂತಹ ಸಮಸ್ಯೆಯನ್ನು ಹೊತ್ತು ತರಬಹುದು. ತಜ್ಞರು ಹೇಳುವಂತೆ ಬೆಳಗ್ಗೆ ಹಸಿ ಪನೀರ್ ತಿನ್ನುವುದು ಉತ್ತಮವಾದ ವಿಧಾನವಾಗಿದೆ. ರುಚಿಯನ್ನು ಹೆಚ್ಚಿಸಲು, ನೀವು ಸ್ವಲ್ಪ ಕಲ್ಲು ಉಪ್ಪು, ಕರಿಮೆಣಸು ಮತ್ತು ನಿಂಬೆ ರಸವನ್ನು ಸೇರಿಸಬಹುದಾಗಿದೆ. ಒಟ್ಟಿನಲ್ಲಿ ಮಸಾಲೆಯೊಂದಿಗೆ ಬೇಯಿಸಿದ ಪನೀರ್​ಗಿಂತ ಹಸಿ ಪನೀರ್​ ಹೆಚ್ಚು ಪ್ರಯೋಜನಕಾರಿಯಾಗಿದೆ.

ಆರೋಗ್ಯ ತಜ್ಞರ ಪ್ರಕಾರ, ಪನೀರ್ ಮೂಳೆಗಳು ಮತ್ತು ಸ್ನಾಯುಗಳಿಗೆ ಅಗತ್ಯವಾದ ಪ್ರೋಟೀನ್ ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಪನೀರ್ ಹೆಚ್ಚಿನ ಪ್ರೋಟೀನ್ ಅನ್ನು ಹೊಂದಿದೆ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಸಿ ಪನೀರ್ ಜೀರ್ಣಕ್ರಿಯೆಯನ್ನು ಸುಧಾರಿಸಿ, ಮಲಬದ್ಧತೆಯನ್ನು ನಿವಾರಿಸುತ್ತದೆ ಎನ್ನಲಾಗಿದೆ. ಇದು ಚರ್ಮ ಮತ್ತು ಕೂದಲನ್ನು ಪೋಷಿಸುವ ಜೊತೆಗೆ ಹೃದಯದ ಆರೋಗ್ಯ ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಪನೀರ್ ತಿನ್ನುವುದರ ಪ್ರಯೋಜನಗಳು

1.ಹೈಪ್ರೋಟೀನ್: ಪನೀರ್ ಹೆಚ್ಚಿನ ಪ್ರೋಟೀನ್ ಹೊಂದಿದ್ದು, ದೇಹದ ಮಾಂಸಖಂಡಗಳನ್ನು ನಿರ್ಮಾಣ ಮಾಡಲು ಸಹಾಯ ಮಾಡುತ್ತದೆ. ಪ್ರತಿದಿನ ತಿನ್ನುವುದರಿಂದ ಮಾಂಸಖಂಡ ಬೆಳವಣಿಗೆಗೆ ಉತ್ತಮ.

2.ಹೃದಯ ಮತ್ತು ಮೂಳೆಗಳಿಗೆ ಒಳ್ಳೆಯದು: ಕ್ಯಾಲ್ಸಿಯಂ ಮತ್ತು ಫಾಸ್ಫರಸ್ ಸಮೃದ್ಧವಾಗಿದ್ದು, ಮೂಳೆಗಳು ಮತ್ತು ಹಲ್ಲುಗಳನ್ನು ಬಲಪಡಿಸುತ್ತದೆ. ಇದು ಹಲ್ಲುಗಳ ಕೊಳಕು ತಡೆಯುತ್ತದೆ.

3.ಖನಿಜಗಳ ಸರಬರಾಜು: ಪೊಟ್ಯಾಷಿಯಂ, ಮ್ಯಾಗ್ನೀಷಿಯಂ ಇತ್ಯಾದಿ ಖನಿಜಗಳು ದೇಹದ ವಿವಿಧ ಕಾರ್ಯಗಳನ್ನು ಸುಗಮಗೊಳಿಸುತ್ತವೆ.

ಈ ಮೇಲೆ ಉಲ್ಲೇಖಿಸಲಾದ ಎಲ್ಲಾ ಮಾಹಿತಿಗಳನ್ನು ವಿವಿಧ ಮಾಧ್ಯಮಗಳು ಹಾಗೂ ವಿವಿಧ ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.

(ಏಜೆನ್ಸೀಸ್)

4.ಸಾಮಾನ್ಯ ಆರೋಗ್ಯ: ಇದು ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ನೀಡಿ, ಶಕ್ತಿ ಮತ್ತು ಆರೋಗ್ಯವನ್ನು ಹೆಚ್ಚಿಸುತ್ತದೆ.