

Heart health : ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಒತ್ತಡ ಜೀವನಶೈಲಿಯಲ್ಲಿ ಹೃದಯಘಾತದ ಅಪಾಯಗಳು ಹದಿಹರೆಯರಲ್ಲಿಯೇ ಹೆಚ್ಚಾಗುತ್ತಿದೆ. ಇದು ಪ್ರತಿನಿತ್ಯ ನಾವು ಸೇವಿಸುವ ಕಳಪೆ ಆಹಾರ, ವ್ಯಾಯಾಮದ ಕೊರತೆ, ಧೂಮಪಾನ, ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳು ಹಠಾತ್ ಹೃದಯಘಾತಕ್ಕೆ ಕಾರಣವಾಗಬಹುದು. ನೀವೇನಾದರೂ ಈ ಅಪಘಾತದಿಂದ ಪಾರಾಗಲು ಬಯಸಿದ್ದರೆ , ನಿಮ್ಮ ಆಹಾರವನ್ನು ನಿಯಂತ್ರಿಸುವುದು ಅತ್ಯಗತ್ಯವಾಗಿದೆ.
ಹೃದಯಘಾತ ಅಪಾಯವನ್ನು ಹೆಚ್ಚಿಸುವ ಕೆಲವು ಅನಾರೋಗ್ಯದ ಅಭ್ಯಾಸಗಳನ್ನು ನಾವಿಲ್ಲಿ ತಿಳಿಸಿಕೊಡಲಿದ್ದೇವೆ...
ಯಾವುದೇ ಮನುಷ್ಯನು ಶೇಖರಿಸಿಟ್ಟ ಆಹಾರದಲ್ಲಿ ಅನಾರೋಗ್ಯಕರ ಸ್ಯಾಚುರೇಟೆಡ್ಗಳು, ಟ್ರಾನ್ಸ್ ಫ್ಯಾಟ್ಗಳು, ಅತಿಯಾದ ಟೇಸ್ಟಿಂಗ್ ಪೌಡರ್ಗಳ ಬಳಕೆ ಇದೆಲ್ಲವೂ ದೇಹದಲ್ಲಿ ತೂಕ ಹೆಚ್ಚಳ ಮಾಡುತ್ತದೆ. ಇದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಜಾಸ್ತಿಯಾಗಿ ಹೃದಯಕ್ಕೆ ಅಪಾಯವನ್ನು ತರುತ್ತದೆ. ಇದರಿಂದ ಬೇಗನೆ ಹೃದಯಘಾತ ಸಂಭವಿಸಬಹುದು.
ಯಾವ ವ್ಯಕ್ತಿ ಆಹಾರವನ್ನು ಸೇವಿಸುವಾಗ ಅತಿಯಾದ ಉಪ್ಪನ್ನು ಸೇವಿಸುತ್ತಾರೋ ಅವರ ದೇಹದಲ್ಲಿ ದ್ರವದ ಶೇಖರಣೆಯಾಗುತ್ತದೆ. ಇದು ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಹೆಚ್ಚು ಕೆಲಸವನ್ನು ಮಾಡಲು ಪ್ರಾರಂಭಿಸಿ ಹೃದಯಘಾತಕ್ಕೆ ಸಂಭವಿಸುವಂತೆ ಮಾಡುತ್ತದೆ.
ಯಾವುದೇ ಆಹಾರವನ್ನು ಸೇವಿಸಿದಾಗ ಅದರಲ್ಲಿ ಅತಿಯಾದ ಸಕ್ಕರೆಯನ್ನು ಬಳಸುವುದರಿಂದ ಇದು ದೇಹದಲ್ಲಿ ಇನ್ಸುಲಿನ್ ಅಸಮತೋಲನವನ್ನು ಉಂಟುಮಾಡುತ್ತದೆ. ಇದು ದೇಹದಲ್ಲಿ ಅತಿಯಾದ ಬೊಜ್ಜು ಮತ್ತು ಹೃದಯದ ಅಪಾಯವನ್ನು ಉಂಟು ಮಾಡುತ್ತದೆ. ಸಕ್ಕರೆಯು ಉರಿಯೂತ, ಅಧಿಕ ರಕ್ತದೊತ್ತಡ ಮತ್ತು ಗ್ಲೂಕೋಸ್ ಮಟ್ಟವನ್ನು ಹೆಚ್ಚಿಸುವ ಮೂಲಕ ಹೃದಯದ ಕಾಯಿಲೆಗೆ ಅಪಾಯ ಉಂಟುಮಾಡುತ್ತದೆ.
ಯಾವ ವ್ಯಕ್ತಿ ದೀರ್ಘಕಾಲ ಕುಳಿತುಕೊಳ್ಳುವುದು, ಮಲಗುವುದು, ದೈಹಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳದೇ ಇರುತ್ತಾನೋ ಆತನ ದೇಹದಲ್ಲಿ ಹೃದಯದ ಸ್ನಾಯುಗಳು ದುರ್ಬಲಗೊಳ್ಳುತ್ತವೆ. ಇದು ರಕ್ತದ ಹರಿವನ್ನು ಕಡಿಮೆ ಮಾಡಿ, ಬೊಜ್ಜು, ಕೊಲೆಸ್ಟ್ರಾಲ್ ನಂತಹ ಅಪಾಯವನ್ನು ಹೆಚ್ಚಿಸುತ್ತದೆ. ಆದರಿಂದ ಪ್ರತಿನಿತ್ಯ ಕನಿಷ್ಟ 30 ನಿಮಿಷಗಳ ವ್ಯಾಯಾಮವನ್ನು ಮಾಡುವುದು ಹೃದಯದ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುತ್ತದೆ.
ಅತಿಯಾಗಿ ಧೂಮಪಾನ ಮಾಡುವುದರಿಂದ ಹೃದಯ ಮತ್ತು ರಕ್ತನಾಳಗಳಿಗೆ ರಾಸಾಯನಿಕಗಳ ಮೂಲಕ ದೇಹವನ್ನು ಹಾನಿ ಮಾಡುತ್ತದೆ. ಹಾಗೇ ರಕ್ತನಾಳಗನ್ನು ಬಂಧಿಸುತ್ತದೆ. ಇದರಿಂದ ಹೃದಯಘಾತದ ಅಪಾಯ 2-4 ಪಟ್ಟು ಹೆಚ್ಚುತ್ತದೆ. ಆದರಿಂದ ಧೂಮಪಾನದ ಸೇವನೆಯನ್ನು ಕಡಿಮೆ ಮಾಡಿ.
ಮಾನವನು ಪ್ರತಿನಿತ್ಯ ಅತಿಯಾಗಿ ಮದ್ಯವನ್ನು ಸೇವನೆ ಮಾಡುವುದರಿಂದ ಇದು ದೇಹದಲ್ಲಿ ರಕ್ತದೊತ್ತಡವನ್ನು ಹೆಚ್ಚಿಸುತ್ತದೆ. ಹಾಗೇ ರಕ್ತದಲ್ಲಿರುವ ಟ್ರೈಗ್ಲಿಸರೈಡ್ ಮಟ್ಟವನ್ನು ಹೆಚ್ಚಿಸಿ, ಹೃದಯ ಬಡಿತವನ್ನು ಹೆಚ್ಚಿಸುವುದರ ಜೊತೆಗೆ ಹೃದಯೀ ಸಂಬಂಧಿ ಕಾಯಿಲೆಗೆ ತುತ್ತಾಗುವಂತೆ ಮಾಡುತ್ತದೆ. (ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ