Licorice Decoction : ಹವಾಮಾನ ಬದಲಾವಣೆಯೊಂದಿಗೆ ರೋಗನಿರೋಧಕ ಶಕ್ತಿಯು ಕೂಡ ನಮ್ಮ ದೇಹದಲ್ಲಿ ಕಡಿಮೆಯಾಗುತ್ತದೆ ಮತ್ತು ಗಂಭೀರ ಆರೋಗ್ಯ ಸಮಸ್ಯೆಗಳು ಸಹ ಉಂಟಾಗುತ್ತವೆ. ಶೀತ, ಕೆಮ್ಮು, ಗಂಟಲು ನೋವು ಮತ್ತು ಜ್ವರ ಅತ್ಯಂತ ಸಾಮಾನ್ಯವಾದ ಸೀಸನಲ್ ಕಾಯಿಲೆಗಳು. ಇದಕ್ಕೆ ಇನ್ಫ್ಲುಯೆನ್ಸ್ ವೈರಸ್ ಕಾರಣ. ಈ ವೈರಸ್ ಸೋಂಕಿಗೆ ಒಳಗಾದವರಲ್ಲಿ ತೀವ್ರ ತಲೆನೋವು, ಅಧಿಕ ಜ್ವರ ಮತ್ತು ದೇಹದ ದೌರ್ಬಲ್ಯ ಉಂಟಾಗುತ್ತದೆ. ದುರ್ಬಲ ರೋಗನಿರೋಧಕ ಶಕ್ತಿ ಹೊಂದಿರುವ ಜನರು ಈ ವೈರಸ್ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚು.
ಅಂದಹಾಗೆ ಬದಲಾಗುತ್ತಿರುವ ವಾತಾವರಣದಲ್ಲಿ ವೈರಲ್ ಸೋಂಕನ್ನು ತಡೆಗಟ್ಟಲು ಲೈಕೋರಿಸ್ ಸೇವನೆಯು ತುಂಬಾ ಪರಿಣಾಮಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಇದರ ರುಚಿ ಸಕ್ಕರೆಯಂತೆ ಸಿಹಿಯಾಗಿರುತ್ತದೆ. ಇದನ್ನು ಮಿಠಾಯಿ ಮತ್ತು ಡೈರಿ ಉತ್ಪನ್ನಗಳಲ್ಲಿ ಬಳಸಲಾಗುತ್ತದೆ. ಇದಲ್ಲದೆ, ಇದನ್ನು ತಂಬಾಕು ಉದ್ಯಮದಲ್ಲಿಯೂ ಬಳಸಲಾಗುತ್ತದೆ. ಈ ಲೈಕೋರಿಸ್, ಸುಕ್ರೋಸ್, ಪಿಷ್ಟ, ಪ್ರೋಟೀನ್, ಫ್ಲೇವನಾಯ್ಡ್ಗಳು, ಸಪೋನಿನ್ಗಳನ್ನು ಹೊಂದಿರುತ್ತದೆ. ನೆಗಡಿ, ಕೆಮ್ಮು ಬಂದಾಗ ಇದರ ಕಷಾಯ ಮಾಡಿ ಕುಡಿದರೆ ಗಂಟಲು ನೋವು ಶಮನವಾಗುತ್ತದೆ. ಅಲ್ಲದೆ, ಜ್ವರವನ್ನು ನಿಯಂತ್ರಿಸುತ್ತದೆ. ಇದು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಹ ಬಲಪಡಿಸುತ್ತದೆ.
ಇನ್ನು ಲೈಕೋರಿಸ್ ಸೇವನೆಯಿಂದ ಕೆಮ್ಮು ಮತ್ತು ನೆಗಡಿ ಹೇಗೆ ನಿವಾರಣೆಯಾಗುತ್ತದೆ? ಇದರ ಕಷಾಯ ಮಾಡುವುದು ಹೇಗೆ? ಎಂಬುದನ್ನು ನಾವೀಗ ತಿಳಿಯೋಣ. ಈ ಲೈಕೋರಿಸ್ ಆಯುರ್ವೇದ ಗುಣಗಳನ್ನು ಹೊಂದಿರುವ ಗಿಡಮೂಲಿಕೆಯಾಗಿದೆ. ಅನೇಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಇದನ್ನು ಶತಮಾನಗಳಿಂದ ಬಳಸಲಾಗುತ್ತದೆ. ಇದು ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿ, ಆಂಟಿವೈರಲ್ ಮತ್ತು ಉರಿಯೂತ ನಿವಾರಣೆಯ ಗುಣಲಕ್ಷಣಗಳನ್ನು ಹೊಂದಿದೆ. ಅನೇಕ ರೋಗಗಳಿಗೆ ಚಿಕಿತ್ಸೆ ನೀಡಲು ಇದನ್ನು ಬಳಸಬಹುದು. ನೆಗಡಿ, ಕೆಮ್ಮು ಮತ್ತು ಗಂಟಲು ನೋವನ್ನು ನಿವಾರಿಸಲು ಲೈಕೋರಿಸ್ ಸೇವನೆಯು ತುಂಬಾ ಉಪಯುಕ್ತವಾಗಿದೆ. ಲೈಕೋರಿಸ್‌ನಲ್ಲಿರುವ ಉರಿಯೂತದ ಗುಣಲಕ್ಷಣಗಳು ನೋಯುತ್ತಿರುವ ಗಂಟಲನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಮ್ಮಿನಿಂದ ಪರಿಹಾರ ನೀಡುತ್ತದೆ.
* ಅರ್ಧ ಚಮಚ ಲೈಕೋರಿಸ್ ಪೌಡರ್
* 2 ಕಪ್ ನೀರು
* ಅರ್ಧ ಚಮಚ ಜೇನುತುಪ್ಪ
* ಶುಂಠಿ
* ಕಷಾಯ ತಯಾರಿಸಲು ಮೊದಲು ನೀರನ್ನು ಕುದಿಸಿ.
* ಕುದಿಯುವ ನೀರಿಗೆ ಲೈಕೋರಿಸ್ ಪುಡಿ ಮತ್ತು ಶುಂಠಿ ಹಾಕಿ.
* ಈ ನೀರನ್ನು ಮತ್ತೆ 10-15 ನಿಮಿಷಗಳ ಕಾಲ ಕುದಿಸಿ.
* 15 ನಿಮಿಷಗಳ ನಂತರ, ನೀರನ್ನು ಸೋಸಿಕೊಂಡು ಜೇನುತುಪ್ಪದೊಂದಿಗೆ ಕುಡಿಯಿರಿ.
* ಈ ಮಿಶ್ರಣವನ್ನು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯುವುದರಿಂದ ಶೀತ ಮತ್ತು ಕೆಮ್ಮು ನಿವಾರಣೆಯಾಗುತ್ತದೆ.