ಲೈಫ್‌ಸ್ಟೈಲ್

ಈ 4 ಆಹಾರಗಳ ಜತೆ ಅಪ್ಪಿತಪ್ಪಿಯೂ ನಿಂಬೆ ರಸ ಮಿಕ್ಸ್​ ಮಾಡ್ಬೇಡಿ! ಮಾಡಿದ್ರೆ ಆರೋಗ್ಯಕ್ಕೆ ಡೇಂಜರ್​! Lemon

ನಿಂಬೆ ಹಣ್ಣು ( Lemon ) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ನಿಂಬೆಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದು ತೂಕ ನಿಯಂತ್ರಣ ಮತ್ತು ಚರ್ಮದ ಆರೋಗ್ಯಕ್ಕೆ ತುಂಬಾ ಸಹಾಯ ಮಾಡುತ್ತದೆ. ಆದರೆ, ಕೆಲವು ಆಹಾರದೊಂದಿಗೆ ನಿಂಬೆಹಣ್ಣನ್ನು ಬಳಸುವುದು ಆರೋಗ್ಯಕ್ಕೆ ತುಂಬಾನೇ ಹಾನಿಕರಕ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಹಾಗಾದರೆ ಯಾವುವು ಆ ಆಹಾರಗಳು ಎಂಬುದನ್ನು ನಾವೀಗ ತಿಳಿಯೋಣ.

ಹಾಲು

ಹಾಲಿಗೆ ನಿಂಬೆ ರಸವನ್ನು ಸೇರಿಸಿ ಸೇವಿಸಬಾರದು. ಇದರಿಂದ ಹೊಟ್ಟೆಯ ತೊಂದರೆ ಉಂಟಾಗುತ್ತದೆ. ಗ್ಯಾಸ್, ಅಜೀರ್ಣ ಮತ್ತು ಅತಿಸಾರಕ್ಕೆ ಇದು ಕಾರಣವಾಗಬಹುದು. ನಿಂಬೆ ರಸದ ಆಮ್ಲೀಯತೆಯು ಹಾಲಿನಲ್ಲಿರುವ ಪ್ರೋಟೀನ್‌ಗಳನ್ನು ಮೊಸರು ಮಾಡುವುದರಿಂದ ಕೆಲವರಿಗೆ ಜೀರ್ಣಕಾರಿ ಅಸ್ವಸ್ಥತೆ ಉಂಟಾಗುತ್ತದೆ.

ಮೊಸರು

ನಿಂಬೆಯಲ್ಲಿರುವ ಆಮ್ಲೀಯ ಅಂಶಗಳು ಮೊಸರಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ನಾಶಪಡಿಸುತ್ತದೆ. ಹಾಗಾಗಿ ನಿಂಬೆಯೊಂದಿಗೆ ಮೊಸರು ತಿಂದರೆ ಮೊಸರಿನ ಲಾಭ ದೇಹಕ್ಕೆ ಸಿಗುವುದಿಲ್ಲ. ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ದ್ರಾಕ್ಷಿ ಮತ್ತು ನಿಂಬೆಹಣ್ಣುಗಳು ಹೆಚ್ಚಿನ ಆಮ್ಲೀಯತೆಯನ್ನು ಹೊಂದಿರುತ್ತವೆ. ಇವುಗಳನ್ನು ಮೊಸರಿನೊಂದಿಗೆ ಸಂಯೋಜಿಸಿದರೆ, ಹೊಟ್ಟೆಯಲ್ಲಿನ ಪಿಹೆಚ್ ಮಟ್ಟದಲ್ಲಿ ಅಸಮತೋಲನಕ್ಕೆ ಕಾರಣವಾಗಬಹುದು. ಅಲ್ಲದೆ, ಜೀರ್ಣಕ್ರಿಯೆ ಸಮಸ್ಯೆ ಕಾಡಬಹುದು.

ಮೀನು

ನಿಂಬೆಯಲ್ಲಿರುವ ಆಮ್ಲೀಯ ಅಂಶಗಳು ಮೀನಿನಲ್ಲಿರುವ ಪೋಷಕಾಂಶಗಳನ್ನು ನಾಶಮಾಡುತ್ತವೆ. ಹೀಗಾಗಿ ನೀವು ಮೀನು ತಿಂದರೂ ದೇಹಕ್ಕೆ ಸಿಗುವ ಪ್ರಯೋಜನಗಳು ಸಿಗುವುದಿಲ್ಲ. ಹೀಗಾಗಿ ಮೀನು ತಿನ್ನುವಾಗ ನಿಂಬೆ ರಸ ಮಿಶ್ರಣವನ್ನು ತಪ್ಪಿಸುವುದು ಒಳ್ಳೆಯದು.

ಮೊಟ್ಟೆ

ಮೊಟ್ಟೆ ಮತ್ತು ನಿಂಬೆ ರಸವನ್ನು ಒಟ್ಟಿಗೆ ಸೇವಿಸಿದರೆ ಹೊಟ್ಟೆ ಭಾರವಾಗುವಂತೆ ಮಾಡುತ್ತದೆ ಮತ್ತು ಅಜೀರ್ಣತೆಯನ್ನು ಉಂಟುಮಾಡುತ್ತದೆ. ನಿಂಬೆಯಲ್ಲಿರುವ ಆಮ್ಲ ಕಣಗಳು ಮೊಟ್ಟೆಯಲ್ಲಿರುವ ಪೋಷಕಾಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಇದು ಹೊಟ್ಟೆಯ ಅಸ್ವಸ್ಥತೆಯನ್ನು ಉಂಟುಮಾಡುತ್ತದೆ.

ಅಂದಹಾಗೆ ನಿಂಬೆಹಣ್ಣಿನ ಅತಿಯಾದ ಸೇವನೆ ಕೂಡ ಒಳ್ಳೆಯದಲ್ಲ. ಇದರಿಂದ ಎದೆಯುರಿ, ಆಮ್ಲೀಯತೆ ಮತ್ತು ಬಾಯಿ ಹುಣ್ಣುಗಳಿಗೆ ಕಾರಣವಾಗಬಹುದು. ನಿಂಬೆಯಲ್ಲಿರುವ ಆಮ್ಲೀಯ ಕಣಗಳೇ ಇದಕ್ಕೆ ಕಾರಣ. ಹಾಗಾಗಿ ನಿಂಬೆಹಣ್ಣನ್ನು ಮಿತವಾಗಿ ಸೇವಿಸ ಬೇಕು.

ನಿಂಬೆಯ 3 ಮುಖ್ಯ ಪ್ರಯೋಜನ

ನಿಯಮಿತವವಾಗಿ ನಿಂಬೆ ರಸವನ್ನು ಬೆಳಗಿನ ಸಮಯದಲ್ಲಿ ನೀರಿನೊಂದಿಗೆ ಮಿಶ್ರಣ ಮಾಡಿ ಕುಡಿಯುವುದರಿಂದ ನಾವು ಮೂರು ಮುಖ್ಯ ಪ್ರಯೋಜನಗಳನ್ನು ಪಡೆಯಬಹುದು. ಮೊದಲನೆಯದಾಗಿ ಇದು ಜೀರ್ಣಕ್ರಿಯೆಗೆ ಅಗತ್ಯವಾದ ಆಮ್ಲವನ್ನು ಕರುಳು ಮತ್ತು ಹೊಟ್ಟೆಗೆ ಒದಗಿಸುತ್ತದೆ. ಎರಡನೆಯದಾಗಿ ಇಡೀ ದಿನಕ್ಕಾಗಿ ನಿಮ್ಮನ್ನು ಹ್ರೈಡ್ರೇಟ್​ ಆಗಿ ಇರಿಸುತ್ತದೆ. ಮೂರನೇಯದಾಗಿ ಸ್ನಾಯುಗಳನ್ನು ಸಕ್ರಿಯಗೊಳಿಸಲು ಮತ್ತು ಮೂತ್ರಜನಕಾಂಗದ ವ್ಯವಸ್ಥೆಯನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ಜನರು ನಿದ್ರೆಯಿಂದ ಎಚ್ಚರಗೊಂಡಾಗ ಅವರ ದೇಹವು ನಿರ್ಜಲೀಕರಣಗೊಳ್ಳುತ್ತದೆ. ಹೀಗಾಗಿ ನಿಮ್ಮ ದಿನವನ್ನು ಸರಿಯಾಗಿ ಪ್ರಾರಂಭಿಸಲು ಇರುವ ಉತ್ತಮ ಮಾರ್ಗ ಯಾವುದೆಂದರೆ ಬೆಳಗ್ಗೆ ನಿಂಬೆ ರಸವನ್ನು ಕುಡಿಯುವುದು. ನಿಂಬೆ ರಸದೊಂದಿಗೆ ನಿಮ್ಮ ದಿನವನ್ನು ಪ್ರಾರಂಭಿಸಿದರೆ, ಹೆಚ್ಚಿನ ಪ್ರಯೋಜನಗಳನ್ನು ನೀವು ಪಡೆಯುತ್ತೀರಿ. ಇದರಲ್ಲಿ ಸಾಕಷ್ಟು ಪ್ರೋಟೀನ್​ಗಳು, ಕಾರ್ಬೋಹೈಡ್ರೇಟ್​ಗಳು, ವಿಟಮಿನ್​​ಗಳು ಮತ್ತು ಖನಿಜಗಳು ಸಮೃದ್ಧವಾಗಿವೆ. ಇದು ಚರ್ಮದ ಕಾಂತಿಯ ಜತೆಗೆ ಅನೇಕ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಅಲ್ಲದೆ, ನಿಮ್ಮ ದೇಹವನ್ನು ನಿರ್ವಿಷಗೊಳಿಸಲು ಕೆಲಸ ಮಾಡುತ್ತದೆ ಮತ್ತು ದೇಹದಿಂದ ವಿಷಕಾರಿ ತ್ಯಾಜ್ಯವನ್ನು ತೆಗೆದುಹಾಕುತ್ತದೆ.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.