ಚುಂಬನ ಅಥವಾ ಮುತ್ತು ಮೊಡವೆಗಳಿಗೆ ಕಾರಣವಾಗಬಹುದು ಎಂದು ಹೇಳಿದರೆ ನೀವು ನಂಬುತ್ತೀರಾ? ಹೌದು, ಕೆಲವು ಸಂಗತಿಗಳು ನಮಗೆ ವಿಚಿತ್ರ ಎನಿಸಿದರೂ ಅದರ ಹಿಂದೆ ಪ್ರತ್ಯಕ್ಷ ಅಥವಾ ಪರೋಕ್ಷ ಕಾರಣವೂ ಇರುತ್ತದೆ. ಹೀಗಾಗಿ ಅವುಗಳ ಬಗ್ಗೆ ನಾವು ಸಂಪೂರ್ಣವಾಗಿ ತಿಳಿದುಕೊಳ್ಳಬೇಕಾಗುತ್ತದೆ.
ಅಂದಹಾಗೆ ಚುಂಬನವು ಮಾನಸಿಕ ಆರೋಗ್ಯ ಮತ್ತು ವೈಯಕ್ತಿಕ ಜೀವನಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಕೆಲವರಿಗೆ ನೈರ್ಮಲ್ಯ ಅಥವಾ ಶುಚಿಯ ಕಳವಳವೂ ಇರುತ್ತದೆ. ಅನೇಕ ಜನರು ಬಾಯಿಯ ಆರೋಗ್ಯ ಅಥವಾ ಚರ್ಮದ ಸಮಸ್ಯೆಗಳು ಎದುರಾಗುವ ಭಯವನ್ನು ಹೊಂದಿರುತ್ತಾರೆ. ಚುಂಬನದಿಂದ ಉಂಟಾಗುವ ಕೆಲವು ಸಮಸ್ಯೆಗಳ ಬಗ್ಗೆ ಕೇಳಿದರೆ ನೀವು ಖಂಡಿತ ಆಶ್ಚರ್ಯ ಪಡುತ್ತೀರಿ. ಚುಂಬನವು ಮೊಡವೆಗಳಿಗೆ ಕಾರಣವಾಗಬಹುದು ಎಂದು ಅನೇಕರು ಹೇಳುತ್ತಾರೆ.
ತಜ್ಞರ ಪ್ರಕಾರ ಚುಂಬನವು ನೇರವಾಗಿ ಮೊಡವೆಗಳಿಗೆ ಕಾರಣವಾಗುವುದಿಲ್ಲ. ಆದರೆ, ಕೆಲವು ಪರೋಕ್ಷ ಅಂಶಗಳು ಮೊಡವೆಗಳ ರಚನೆಗೆ ಕಾರಣವಾಗಬಹುದು. ಒಬ್ಬರ ಚರ್ಮದೊಂದಿಗೆ ನಿಕಟ ಸಂಪರ್ಕ ಸಾಧಿಸಿದಾಗ, ಅದರಲ್ಲೂ ವಿಶೇಷವಾಗಿ ಎಣ್ಣೆಯುಕ್ತ, ಮೊಡವೆ ಪೀಡಿತ ಚರ್ಮವನ್ನು ಹೊಂದಿದ್ದರೆ, ಬ್ಯಾಕ್ಟೀರಿಯಾ ಮತ್ತು ಎಣ್ಣೆಯು ಒಂದು ಚರ್ಮದಿಂದ ಮತ್ತೊಂದು ಚರ್ಮಕ್ಕೆ ವರ್ಗಾವಣೆಯಾಗಬಹುದು. ಇದು ಚರ್ಮದ ಸಮಸ್ಯೆಗಳನ್ನು ಉಲ್ಬಣಗೊಳಿಸುತ್ತದೆ. ಅಲ್ಲದೆ, ನೀವು ದೀರ್ಘಕಾಲದವರೆಗೆ ಚುಂಬಿಸಿದರೆ, ಬಾಯಿಯ ಲಾಲಾರಸದ ಅತಿಯಾದ ವಿನಿಮಯದಿಂದ ಕೆಲವು ಸಂದರ್ಭಗಳಲ್ಲಿ ಚರ್ಮದ ಕಿರಿಕಿರಿ ಉಂಟುಮಾಡುತ್ತದೆ.
ಚುಂಬಿಸಿದ ನಂತರ ಮೊಡವೆಗಳು ಬರುವುದಿಲ್ಲ. ಹಾಗೆಯೇ ಮೊಡವೆಗಳು ಸಾಂಕ್ರಾಮಿಕವೂ ಅಲ್ಲ. ಆದರೆ ವ್ಯಕ್ತಿಯನ್ನು ಚುಂಬಿಸಿದ ನಂತರ ಚರ್ಮವು ಕಿರಿಕಿರಿಗೊಳ್ಳಬಹುದು ಮತ್ತು ಮೊಡವೆಗೆ ಕಾರಣವಾಗಬಹುದು. ಅಲ್ಲದೆ, ಚುಂಬನದಿಂದ ಮೊಡವೆಗಳು ಹರಡುವುದಿಲ್ಲ. ಆದರೆ, ಎಣ್ಣೆಯುಕ್ತ ಚರ್ಮವು ಮುಖ್ಯವಾಗಿ ಸತ್ತ ಚರ್ಮದ ಜೀವಕೋಶಗಳು ಮತ್ತು ಬ್ಯಾಕ್ಟೀರಿಯಾದೊಂದಿಗೆ ಮುಚ್ಚಿಹೋಗಿರುವ ರಂಧ್ರಗಳಿಂದ ಉಂಟಾಗುತ್ತದೆ. ಇದರಿಂದ ಮೊಡವೆಗಳು ಉಂಟಾಗುತ್ತದೆ. ಆದರೆ, ಚುಂಬಿಸುವುದರಿಂದ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ತಜ್ಞರು ತಿಳಿಸಿದ್ದಾರೆ. (ಏಜೆನ್ಸೀಸ್)