More

    ಮೊದಲ ಬಾರಿಗೆ ಬೆಂ.ನಗರ ವಿವಿ ಪಿಎಚ್.ಡಿ. ಪ್ರವೇಶಾತಿಗೆ ಒಪ್ಪಿಗೆ: ಎಷ್ಟು ಅಭ್ಯರ್ಥಿಗಳಿಗೆ ಅವಕಾಶ? ಇಲ್ಲಿದೆ ಮಾಹಿತಿ…

    ಬೆಂಗಳೂರು ಬೆಂಗಳೂರು ನಗರ ವಿಶ್ವವಿದ್ಯಾಲಯವು ಇದೇ ಮೊದಲ ಬಾರಿಗೆ ಪಿಎಚ್.ಡಿ. ಪ್ರವೇಶಾತಿಯನ್ನು ಆರಂಭಿಸುತ್ತಿದೆ.

    ಸೆ.27ರಂದು ನಡೆದ ವಿವಿ ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದ್ದು, ಸದ್ಯದಲ್ಲಿಯೇ ಆಕಾಂಕ್ಷಿಗಳಿಂದ ಅರ್ಜಿ ಅಹ್ವಾನಿಸಲಿದೆ.

    ಬೆಂಗಳೂರು ವಿಶ್ವವಿದ್ಯಾಲಯವನ್ನು 2017-18ರಲ್ಲಿ ಮೂರು ಭಾಗವಾಗಿ ವಿಂಗಡಣೆ ಮಾಡಲಾಯಿತು. ಬಳಿಕ ಬೆಂ.ನಗರ ವಿವಿಯು ಅಧಿಕೃತವಾಗಿ 2018-19ರಿಂದ ಕಾರ್ಯಾರಂಭ ಮಾಡಿದೆ. ವಿವಿ ಆರಂಭವಾಗಿ 5 ವರ್ಷ ಕಳೆದ ಬಳಿಕ ಇದೇ ಮೊದಲ ಬಾರಿಗೆ ಪಿಎಚ್.ಡಿ. ಪ್ರವೇಶಾತಿ ಆರಂಭಿಸುತ್ತಿದೆ. ಕಳೆದ ವರ್ಷ ಕೂಡ ಅರ್ಜಿ ಕರೆದು ಕೊನೇಸಮಯದಲ್ಲಿ ರದ್ದುಗೊಳಿಸಲಾಗಿತ್ತು.

    33 ವಿಭಾಗ, 300 ಅಭ್ಯರ್ಥಿಗಳಿಗೆ ಸೀಟು:

    ವಿಶ್ವವಿದ್ಯಾಲಯದಲ್ಲಿ ಕಲಾ, ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳು ಸೇರಿ ವಿವಿಧ 33 ವಿಭಾಗಗಳಿವೆ. ಈ ವಿಭಾಗಗಳಲ್ಲಿ ಸಂಶೋಧನಾ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಲಾಗುತ್ತದೆ. ಅಂದಾಜು 120ಕ್ಕೂ ಹೆಚ್ಚಿನ ಮಾರ್ಗದರ್ಶಕರಿದ್ದು, 300ಕ್ಕೂ ಹೆಚ್ಚಿನ ಸಂಶೋಧನಾ ಅಭ್ಯರ್ಥಿಗಳಾಗಿ ಅವಕಾಶ ಪಡೆಯುವ ಸಾಧ್ಯತೆಗಳಿವೆ. ಅಂತಿಮವಾಗಿ ಪ್ರಕಟಣೆ ಹೊರಡಿಸಿದ ಬಳಿಕ ನಿಖರವಾಗಿ ಎಷ್ಟು ಸೀಟುಗಳು ದೊರೆಯಲಿವೆ ಎಂಬ ಮಾಹಿತಿ ಲಭ್ಯವಾಗಲಿದೆ.

    ಪಿಎಚ್.ಡಿ. ಪ್ರವೇಶಾತಿ ಆರಂಭಿಸಲು ಸಿಂಡಿಕೇಟ್ ಸಭೆಯಲ್ಲಿ ಒಪ್ಪಿಗೆ ಸೂಚಿಸಿದ್ದು, ಸದ್ಯದಲ್ಲಿಯೇ ಅರ್ಜಿ ಆಹ್ವಾನಿಸಲಾಗುತ್ತದೆ. ಸಂಶೋಧನೆಯಲ್ಲಿ ಆಸಕ್ತಿ ಇರುವ ಅಭ್ಯರ್ಥಿಗಳು ಸಲ್ಲಿಸಬಹುದು.
    – ಪ್ರೊ. ಲಿಂಗರಾಜ ಗಾಂಧಿ, ಬೆಂ. ನಗರ ವಿವಿ ಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts