More

    ಪಾರುಲ್, ಅನ್ನುರಾಣಿ ಸ್ವರ್ಣ ಸಂಭ್ರಮ: ಏಷ್ಯಾಡ್‌ನಲ್ಲಿ 10ನೇ ದಿನ ಭಾರತಕ್ಕೆ 9 ಪದಕ

    ಹಾಂಗ್‌ರೆೌ: ಭಾರತದ ಕ್ರೀಡಾಪಟುಗಳು ಏಷ್ಯನ್ ಗೇಮ್ಸ್‌ನಲ್ಲಿ 10ನೇ ದಿನವೂ ಭರ್ಜರಿ ಪದಕ ಬೇಟೆ ಮುಂದುವರಿಸಿದ್ದಾರೆ. ಅಥ್ಲೀಟ್ ಪಾರುಲ್ ಚೌಧರಿAdd New Post ಮಹಿಳೆಯರ 5 ಸಾವಿರ ಮೀ. ಓಟದಲ್ಲಿ ಮತ್ತು ಅನ್ನು ರಾಣಿ ಜಾವೆಲಿನ್ ಎಸೆತದಲ್ಲಿ ಚಿನ್ನದ ಪದಕ ಗೆದ್ದು ಬೀಗಿದರೆ, ಪುರುಷರ 800 ಮೀ. ಓಟದಲ್ಲಿ ಮೊಹಮದ್ ಅ್ಸಲ್ ಮತ್ತು ಡೆಕಾಥ್ಲಾನ್ ಸ್ಪರ್ಧೆಯಲ್ಲಿ ತೇಜಸ್ವಿನ್ ಶಂಕರ್ ರಜತ ಪದಕ ಒಲಿಸಿಕೊಂಡರು. ವಿದ್ಯಾ ರಾಮರಾಜ್ ಮಹಿಳೆಯರ 400 ಮೀ. ಹರ್ಡಲ್ಸ್ ಮತ್ತು ಪ್ರವೀಣ್ ಚಿತ್ರವೇಲ್ ಪುರುಷರ ಟ್ರಿಪಲ್ ಜಂಪ್‌ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿದರು.

    https://x.com/SonySportsNetwk/status/1709220097200623704?s=20

    ಬುಧವಾರ ಭಾರತ ಗೆದ್ದ ಒಟ್ಟು 9 ಪದಕಗಳಲ್ಲಿ (2 ಚಿನ್ನ, 2 ಬೆಳ್ಳಿ, 5 ಕಂಚು) 6 ಪದಕಗಳು ಅಥ್ಲೆಟಿಕ್ಸ್‌ನಲ್ಲೇ (2 ಚಿನ್ನ, 2 ಬೆಳ್ಳಿ, 2 ಕಂಚು) ಬಂದವು. ಇದರೊಂದಿಗೆ ಅಥ್ಲೆಟಿಕ್ಸ್‌ನಲ್ಲಿ ಇದುವರೆಗೆ 22 ಪದಕ ಗೆದ್ದಿರುವ ಭಾರತ, ಶೂಟಿಂಗ್ ವಿಭಾಗದ ಗರಿಷ್ಠ ಪದಕ ಸಾಧನೆ ಸರಿಗಟ್ಟಿದೆ. ಆರ್ಚರಿಯ ಕಂಪೌಂಡ್ ವಿಭಾಗದ ೈನಲ್‌ನಲ್ಲಿ ಅಭಿಷೇಕ್ ವರ್ಮ ಮತ್ತು ಓಜಸ್ ಡಿಯೋಟಾಲ್ ಪರಸ್ಪರ ಮುಖಾಮುಖಿ ಆಗಲಿದ್ದು, ಚಿನ್ನ-ಬೆಳ್ಳಿ ಎರಡೂ ಪದಕಗಳು ಭಾರತಕ್ಕೆ ಖಚಿತಗೊಂಡಿವೆ. ಮಹಿಳೆಯರ ವಿಭಾಗದಲ್ಲಿ ಜ್ಯೋತಿ ಸುರೇಖಾ ೈನಲ್‌ಗೇರಿದ್ದಾರೆ. ಬಾಕ್ಸಿಂಗ್‌ನಲ್ಲಿ ಪ್ರೀತಿ ಪವಾರ್, ನರೇಂದರ್ ಕಂಚಿಗೆ ತೃಪ್ತಿಪಟ್ಟರೆ, ಲವ್ಲಿನಾ ಬೋರ್ಗೋಹೈನ್ ೈನಲ್‌ಗೇರಿ ಚಿನ್ನದ ನಿರೀಕ್ಷೆ ಮೂಡಿಸಿದ್ದಾರೆ. ಕನೋಯಿಂಗ್‌ನಲ್ಲಿ ಅರ್ಜುನ್-ಸುನೀಲ್ ಸಿಂಗ್ ಜೋಡಿ ಐತಿಹಾಸಿಕ ಕಂಚಿನ ಪದಕ ಒಲಿಸಿಕೊಂಡರೆ, ಸ್ಕ್ವಾಷ್‌ನಲ್ಲಿ ಭಾರತಕ್ಕೆ 3 ಪದಕ ಖಾತ್ರಿಯಾಗಿವೆ. ಇನ್ನೂ 5 ದಿನಗಳ ಪದಕ ಸ್ಪರ್ಧೆ ಬಾಕಿ ಇರುವ ಕ್ರೀಡಾಕೂಟದಲ್ಲಿ ಭಾರತ ಇದುವರೆಗೆ 15 ಚಿನ್ನ, 26 ಬೆಳ್ಳಿ, 28 ಕಂಚಿನ ಸಹಿತ ಒಟ್ಟು 69 ಪದಕ ಗೆದ್ದಿದ್ದು, ಪದಕ ಪಟ್ಟಿಯಲ್ಲಿ 4ನೇ ಸ್ಥಾನ ಕಾಯ್ದುಕೊಂಡಿದೆ.

    https://x.com/SonySportsNetwk/status/1709215148995751995?s=20

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts