ಬೆಂಗಳೂರು: ಅಮೆರಿಕ ಮೂಲದ ಆಫ್ ರೋಡ್ ಆಫ್-ರೋಡ್ ಎಸ್‍ಯುವಿಗಳ ತಯಾರಕರಾದ ಜೀಪ್ ಕಂಪನಿಯು ಭಾರತದಲ್ಲಿ ಹೆಚ್ಚು ಖ್ಯಾತಿ ಗಳಿಸಿದ್ದು, ವಾಹನ ಪ್ರಿಯರಿಗೆ ಅಚ್ಚುಮೆಚ್ಚು ಎಂದು ಹೇಳಬಹುದಾಗಿದೆ. ಇತ್ತೀಚಿಗೆ ಬಿಡುಗಡೆಗೊಂಡ 2024ನೇ ಆವೃತ್ತಿಯ ಜೀಪ್ ರಾಂಗ್ಲರ್ ಎಸ್ಯುವಿಗೆ ಬೇಡಿಕೆ ಹೆಚ್ಚುತ್ತಿದ್ದು, ಇದೀಗ ಕಂಪನಿ ಮತ್ತೊಂದು ಹೆಜ್ಜೆ ಮುಂದಿಟ್ಟಿದೆ.
2024ನೇ ಆವೃತ್ತಿಯ ಜೀಪ್ ರಾಂಗ್ಲರ್ಅನ್ನು ಜನರಿಗೆ ಹೆಚ್ಚು ಪರಿಚಯಿಸುವ ನಿಟ್ಟಿನಲ್ಲಿ ಕಂಪನಿಯು ಬಾಲಿವುಡ್ ನಟ ಹೃತಿಕ್ ರೋಷನ್ ಒಳಗೊಂಡ ದಿ ಒನ್ ಅಂಡ್ ಓನ್ಲಿ ಜಾಹೀರಾತನ್ನು ಸಿದ್ದಪಡ್ಡಿಸಿದ್ದು, ಈ ಬಗ್ಗೆ ಕಂಪನಿ ಅಧಿಕೃತವಾಗಿ ತಿಳಿಸಿದೆ.
ತಮ್ಮ ನಟನೆಯಿಂದಲೇ ಹೆಚ್ಚು ಹೆಸರುವಾಸಿಯಾಗಿರುವ ಹೃತಿಕ್ ರೋಷನ್ ಅವರು ಜೀಪ್ನ ಉತ್ಸಾಹಕ್ಕೆ ಸಂಪೂರ್ಣವಾಗಿ ಹೊಂದಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಜೀಪ್ ಕೇವಲ ವಾಹನವಲ್ಲ ಬದಲಾಗಿ ಸಾಟಿಯಿಲ್ಲದ ಕಾರ್ಯಕ್ಷಮತೆ ಮತ್ತು ಪ್ರತಿಷ್ಠೆಯ ಸಂಕೇತವಾಗಿದೆ. ಜೀಪ್ ಇಂಡಿಯಾ ಬಾಲಿವುಡ್ ನಟ ಹೃತಿಕ್ ರೋಷನ್ ಅವರನ್ನು 'ದ ಜೀಪ್ ಲೈಫ್' ಗೆ ಸ್ವಾಗತಿಸುತ್ತದೆ.
ಕಂಪನಿಯು ಹೃತಿಕ್ ರೋಷನ್ ಅವರನ್ನು ಒಳಗೊಂಡ 'ದಿ ಒನ್ ಅಂಡ್ ಓನ್ಲಿ' ಎಂಬ ಹೊಸ ಅಭಿಯಾನವನ್ನು ಪ್ರಾರಂಭಿಸಿದೆ. ಹೊಸದಾಗಿ ಬಿಡುಗಡೆಯಾದ 2024ರ ಜೀಪ್ ರಾಂಗ್ಲರ್‌ನ ಸುತ್ತ ಮಾರ್ಕೆಟಿಂಗ್ ಅನ್ನು ತಳ್ಳಲು ಇದು ಸೆಲೆಬ್ರಿಟಿಗಳ ಅನುಮೋದನೆಯಾಗಿದೆ ಎಂದು ತೋರುತ್ತದೆ. 2024ರ ಜೀಪ್ ರಾಂಗ್ಲರ್ ನವೀಕರಿಸಿದ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು ಅನ್ಲಿಮಿಟೆಡ್ ಮತ್ತು ರೂಬಿಕಾನ್ ಎಂಬ ಎರಡೂ ರೂಪಾಂತರಗಳಲ್ಲಿ ಲಭ್ಯವಿದೆ ಎಂದು ಕಂಪನಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.