ಲೈಫ್‌ಸ್ಟೈಲ್

ಊಟಕ್ಕೂ ಮುನ್ನ ಇದನ್ನು ಕುಡಿದರೆ ದೇಹದ ತೂಕ ಬೇಗ ಕಡಿಮೆಯಾಗುತ್ತೆ! ನೀವು ಫಿಟ್​ ಆಗಿರುತ್ತೀರಿ

ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಮಂದಿ ಫಿಟ್ ಆಗಿರಲು ಬಯಸುತ್ತಾರೆ. ಹೀಗಾಗಿ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳಲು ಸಾಕಷ್ಟು ಪ್ರಯತ್ನಗಳನ್ನು ಸಹ ಮಾಡುತ್ತಾರೆ. ಆದರೆ, ತೂಕ ಇಳಿಸಿಕೊಳ್ಳುವುದು ಸುಲಭವಲ್ಲ, ಅದಕ್ಕಾಗಿ ಕೆಲವೊಂದು ಅಭ್ಯಾಸಗಳ ಜತೆಗೆ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲೇಬೇಕು. ಹಾಗಾದಾಗ ಮಾತ್ರ ಸುಲಭವಾಗಿ ತೂಕ ಕಳೆದುಕೊಳ್ಳುತ್ತೀರಿ. ಊಟಕ್ಕೂ ಮುನ್ನ ಇದನ್ನು ಸೇವಿಸಿದರೆ ಹೆಚ್ಚಿನ ಲಾಭಗಳಿವೆ ಎನ್ನುತ್ತಾರೆ ತಜ್ಞರು.

ಊಟಕ್ಕೂ ಮುನ್ನ ಸೂಪ್ ಕುಡಿಯುವುದರಿಂದ ಹಲವಾರು ಪ್ರಯೋಜನಗಳಿವೆ ಎಂದು ಹೇಳಲಾಗುತ್ತದೆ. ಏಕೆಂದರೆ ಈ ಸೂಪ್ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತದೆ. ಊಟದ ಮೊದಲು ಸೂಪ್ ಸೇವಿಸಿದ ಜನರು ಊಟದ ಸಮಯದಲ್ಲಿ ಅಥವಾ ರಾತ್ರಿಯ ಊಟದ ಸಮಯದಲ್ಲಿ ಶೇ. 20 ರಷ್ಟು ಕಡಿಮೆ ಕ್ಯಾಲೋರಿಗಳನ್ನು ಸೇವಿಸುತ್ತಾರೆ ಎಂದು ಅಧ್ಯಯನವೊಂದು ಕಂಡುಹಿಡಿದಿದೆ. ಅದರಲ್ಲೂ ತರಕಾರಿ ಸೂಪ್​ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಸೂಪ್​ ಬದಲಿಗೆ ಪ್ರೊಟೀನ್ ಹೆಚ್ಚಿರುವ ಆಹಾರ ಪದಾರ್ಥಗಳನ್ನು ಮಿತಿಯಾಗಿ ಸೇವಿಸುವುದರಿಂದ ತೂಕ ಇಳಿಸಿಕೊಳ್ಳಬಹುದು. ಕೋಳಿ, ಮೀನು, ಮೊಟ್ಟೆ ಹಾಗೂ ಬೀನ್ಸ್ ಅನ್ನು ಅಗತ್ಯಕ್ಕೆ ತಕ್ಕಂತೆ ಸೇವಿಸದರೆ ಮೆಟಾಬಾಲಿಸಂ ಹೆಚ್ಚುತ್ತದೆ. ಕಾರ್ಬೋಹೈಡ್ರೇಟ್​ಗಳು ಮತ್ತು ಕೊಬ್ಬುಗಳಿಗೆ ಹೋಲಿಸಿದರೆ, ಪ್ರೋಟೀನ್ ಜೀರ್ಣಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ.

ಗ್ರೀನ್​ ಟೀ ಸೇವಿಸುವುದರಿಂದಲೂ ತೂಕ ಇಳಿಸಿಕೊಳ್ಳಬಹುದು. ಗ್ರೀನ್ ಟೀಯಲ್ಲಿರುವ ಕ್ಯಾಟೆಚಿನ್ ಮತ್ತು ಕೆಫೀಮ್​ನಂತಹ ಸಂಯುಕ್ತಗಳು ಥರ್ಮೋಜೆನಿಕ್ ಪರಿಣಾಮವನ್ನು ಹೊಂದಿವೆ. ಇದು ಹೆಚ್ಚುವರಿ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ಆಹಾರದಲ್ಲಿ ಪ್ರೋಟೀನ್ ಇರಲೇಬೇಕು. ಅವಕಾಡೊ, ನಟ್ಸ್, ಆಲಿವ್ ಎಣ್ಣೆಯಂತಹ ಆರೋಗ್ಯಕರ ಕೊಬ್ಬನ್ನು ತೆಗೆದುಕೊಳ್ಳಬೇಕು. ಪ್ರೋಟಿನ್​​ ಹೆಚ್ಚಿರುವ ಆಹಾರವನ್ನು ಸ್ವಲ್ಪ ತಿಂದರೆ ಹೊಟ್ಟೆ ತುಂಬಿದಂತಾಗುತ್ತದೆ. ಹಾಗಾಗಿ ಹೆಚ್ಚು ಆಹಾರ ತೆಗೆದುಕೊಳ್ಳುವುದಿಲ್ಲ. ಇದರಿಂದ ಕ್ಯಾಲೋರಿಗಳು ಬೇಗ ಕರಗುತ್ತವೆ. ಊಟಕ್ಕೂ ಮುನ್ನ ಈ ರೀತಿ ಸೇವಿಸಿದರೆ ಸುಲಭವಾಗಿ ತೂಕ ಕಡಿಮೆಯಾಗುತ್ತದೆ ಎನ್ನುತ್ತಾರೆ ತಜ್ಞರು.

ಹಕ್ಕು ನಿರಾಕರಣೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿಗಾಗಿ ಮಾತ್ರ . ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.