ಬೆಂಗಳೂರು: ನಾವು ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಅನೇಕ ರೀತಿಯ ಪೌಷ್ಠಿಕಾಂಶಗಳು ಅಡಗಿರುತ್ತವೆ. ಮುಖ್ಯವಾಗಿ ತರಕಾರಿಯಲ್ಲಿ ಹೆಚ್ಚಿನ ಪೋಷಕಾಂಶ ಅಡಗಿದ್ದು, ವೈದ್ಯರು ಹಾಗೂ ಆಹಾರ ತಜ್ಞರು ಕೂಡ ನಿರಂತರವಾಗಿ ತರಕಾರಿಗಳನ್ನು ಸೇವಿಸುವಂತೆ ಸೂಚಿಸುತ್ತಾರೆ. ಆದರೆ, ನಾವು ನೋಡಿರುವಂತೆ ಸಾಮಾನ್ಯವಾಗಿ ಕ್ಯಾರಟ್, ಮೂಲಂಗಿ, ಬೀಟ್ರೂಟ್ ಹೆಚ್ಚು ಸೇವಿಸುವಂತೆ ಹೇಳಿರುವುದನ್ನು ನೋಡಿದ್ದೇವೆ. ಆದರೆ, ಎಲೆಕೋಸಿನಲ್ಲಿ (Cabbage) ಹೆಚ್ಚಿನ ಪೌಷ್ಠಿಕಾಂಶ ವ್ಯಾಪಕವಾಗಿ ಅಡಗಿದ್ದು, ಇದರಲ್ಲಿ ಅಡಗಿರುವ ಆರೋಗ್ಯಕಾರಿ ಅಂಶಗಳನ್ನು (Health Tips) ನಾವು ತಿಳಿಯೋಣ ಬನ್ನಿ.
ನೋಡಲು ಸ್ವಲ್ಪ ದಪ್ಪಗೆ ಇರುವ ಮತ್ತು ಹಸಿರು ಎಲೆ-ತರಕಾರಿಗಳ ಗುಂಪಿಗೆ ಸೇರಿದ ಎಲೆಕೋಸು ಅಥವಾ ಕ್ಯಾಬೇಜ್‌ನಲ್ಲಿ (Cabbage) ಸಾಕಷ್ಟು ಆರೋಗ್ಯ ಪ್ರಯೋಜನಗಳು ಇದೆ. ಹೌದು, ಕ್ಯಾಬೇಜ್‌ನಲ್ಲಿ (Cabbage) ಹಲವು ಆರೋಗ್ಯಕಾರಿ ಅಂಶಗಳು ಅಡಗಿದ್ದು, ಇದರಲ್ಲಿರುವ ಕೆಲವೊಂದು ಪೋಷಕಾಂಶಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗಿದೆ. ಹಾಗಾಗಿ ಆದಷ್ಟು ಇದನ್ನು ಸಾಂಬಾರ್ ಅಥವಾ ಪಲ್ಯ ರೂಪದಲ್ಲಿ ಸೇವಿಸುತ್ತಾರೆ.
ಎಲೆಕೋಸಿನಲ್ಲಿ ವಿಟಮಿನ್ ಬಿ6, ವಿಟಮಿನ್ ಸಿ, ವಿಟಮಿನ್ ಬಿ, ವಿಟಮಿನ್ ಬಿ1, ವಿಟಮಿನ್ ಕೆ , ಜೊತೆಗೆ ಪೊಟ್ಯಾಶಿಯಂ, ಮ್ಯಾಂಗನೀಸ್, ನಾರಿನಾಂಶ ಅಧಿಕ ಪ್ರಮಾಣದಲ್ಲಿ ಕಂಡು ಬರುತ್ತವೆ. ಮುಖ್ಯವಾಗಿ ಎಲೆಕೋಸಿನಲ್ಲಿ ಕಂಡುಬರುವ ಲೂಪಿಯೋಲ್ ಸೀನಿಗ್ರೋನ್ ಮತ್ತು ಸೇಲ್ಪಫಾನ್ ಅಂಶಗಳು ಕ್ಯಾನ್ಸ್ರ ಕಾಯಿಲೆ ಹೋಗಲಾಡಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಎಲೆಕೋಸಿನಲ್ಲಿ ಅಧಿಕ ಪ್ರಮಾಣದಲ್ಲಿ ಬೀಟಾ - ಕ್ಯಾರೋಟಿನ್ ಅಂಶ ಇರುವುದರಿಂದ, ಇದು ನಮ್ಮ ಕಣ್ಣಿನ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ಇದಲ್ಲದೆ ಕಣ್ಣಿನ ಪೊರೆಯಂತಹ ಸಮಸ್ಯೆಗೆ ಸುಲಭವಾಗಿ ನಿವಾರಣೆ ಮಾಡುತ್ತದೆ. ಇನ್ನು ಮುಂದೆಯೂ ಕೂಡ ಕಣ್ಣಿನ ಪೊರೆಯ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುತ್ತದೆ. ಇದಲ್ಲದೆ ಇದು ತೂಕ ಇಳಿಸಲು, ರಕ್ತದೊತ್ತಡ ಹಾಗೂ ಹೃದಯದ ಸಂಬಂಧಿ ಸಮಸ್ಯೆಗಳನ್ನು ದೂರು ಮಾಡಿಕೊಳ್ಳಲು ಎಲೆಕೋಸು ಸಹಕಾರಿಯಾಗಿದ್ದು, ಎಲಕೋಸು ಸೇವನೆಯಿಂದ ಹತ್ತಾರು ಆರೋಗ್ಯ ಪ್ರಯೋಜನಗಳಿವೆ.