ಲೈಫ್‌ಸ್ಟೈಲ್

ಯಾವುದೇ ಕಾರಣಕ್ಕೂ ರಾತ್ರಿ ಹೊತ್ತು ಈ ಆಹಾರಗಳನ್ನು ಸೇವಿಸಬೇಡಿ... ಸೇವಿಸಿದ್ರೆ ಆರೋಗ್ಯಕ್ಕೆ ಅಪಾಯ ಫಿಕ್ಸ್​! Foods to Avoid at Night

Foods to Avoid at Night : ಅರ್ಧಕ್ಕಿಂತ ಹೆಚ್ಚು ರೋಗಗಳಿಗೆ ಮೂಲ ಕಾರಣ ತಪ್ಪು ಆಹಾರ ಪದ್ಧತಿ. ನೀವು ಆರೋಗ್ಯಕರ ಆಹಾರವನ್ನು ಸೇವಿಸುತ್ತಿದ್ದರೂ ಅನಾರೋಗ್ಯ ಅಥವಾ ಜೀರ್ಣಕಾರಿ ಸಮಸ್ಯೆಗಳಿಂದ ಬಳಲುತ್ತಿದ್ದರೆ ಅದಕ್ಕೆ ಕಾರಣ ನೀವು ಸರಿಯಾದ ಸಮಯದಲ್ಲಿ ಆಹಾರವನ್ನು ಸೇವಿಸದೇ ಇರುವುದು. ನೀವು ತಪ್ಪು ಸಮಯದಲ್ಲಿ ಪೌಷ್ಟಿಕಾಂಶಭರಿತ ಆಹಾರ ತೆಗೆದುಕೊಂಡರೂ ಯಾವುದೇ ಪ್ರಯೋಜನವಿಲ್ಲ.

ಕೆಲವರು ರಾತ್ರಿಯಲ್ಲಿ ಬಹಳಷ್ಟು ಆಹಾರವನ್ನು ತಿನ್ನುತ್ತಾರೆ. ಚೆನ್ನಾಗಿ ನಿದ್ರೆ ಮಾಡಿದರೂ ಸಹ, ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿಯಲ್ಲಿ ಮಸಾಲೆಯುಕ್ತ ಮತ್ತು ಕೆಫೀನ್ ಭರಿತ ಆಹಾರವನ್ನು ಸೇವಿಸುವುದರಿಂದ ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ, ರಾತ್ರಿಯಲ್ಲಿ ಯಾವ ಆಹಾರ ಪದಾರ್ಥಗಳನ್ನು ತಿನ್ನಬಾರದು ಎಂಬುದನ್ನು ನಾವೀಗ ತಿಳಿದುಕೊಳ್ಳೋಣ.

ಮಾಂಸಾಹಾರ

ರಾತ್ರಿ ಹೊಟ್ಟೆ ತುಂಬಾ ಚಿಕನ್ ಬಿರಿಯಾನಿ ಅಥವಾ ಮಟನ್ ಫ್ರೈ ತಿಂದು ಮಲಗಿದರೆ ಖಂಡಿತ ಹೊಟ್ಟೆ ನೋವು ಬರುತ್ತದೆ. ಏಕೆಂದರೆ ಅವು ಬೇಗನೆ ಜೀರ್ಣವಾಗದೆ ಕೊಬ್ಬಿನ ರೂಪದಲ್ಲಿ ಸಂಗ್ರಹವಾಗುತ್ತವೆ. ನಿಮಗೆ ಹೆಚ್ಚು ಮಾಂಸಾಹಾರಿ ಆಹಾರ ತಿನ್ನಬೇಕೆಂದು ಅನಿಸಿದರೆ, ಸಂಜೆ 7 ಗಂಟೆ ಒಳಗೆ ತಿನ್ನಿ. ಬಳಿಕ ರಾತ್ರಿ 10 ಗಂಟೆಯವರೆಗೆ ಮಲಗಬೇಡಿ. ಅಲ್ಲದೆ, ನಡುವೆ ಅರ್ಧ ಗಂಟೆ ನಡೆಯಿರಿ.

ಕಿತ್ತಳೆ ಹಣ್ಣಿ ಜ್ಯೂಸ್​

ಸಾಮಾನ್ಯವಾಗಿ, ರಾತ್ರಿಯಲ್ಲಿ ಸಿಟ್ರಿಕ್ ಆಮ್ಲ ಹೆಚ್ಚಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ತಪ್ಪಿಸುವುದು ನಿಮ್ಮ ಕರುಳಿನ ಚಲನೆಗೆ ಒಳ್ಳೆಯದು. ವಿಶೇಷವಾಗಿ ಕಿತ್ತಳೆ ಜ್ಯೂಸ್​, ಹಣ್ಣುಗಳಿಗಿಂತ ಹೆಚ್ಚಿನ ಕ್ಯಾಲೊರಿಗಳಿರುವುದರಿಂದ, ರಾತ್ರಿಯಲ್ಲಿ ಅದನ್ನು ಕುಡಿಯುವುದನ್ನು ತಪ್ಪಿಸುವುದು ಉತ್ತಮ. ಏಕೆಂದರೆ ಇದು ತೂಕ ಹೆಚ್ಚಾಗಲು ಕಾರಣವಾಗಬಹುದು.

ಬೀಟ್ರೂಟ್

ಬೀಟ್ರೂಟ್ ತುಂಬಾ ಪೌಷ್ಟಿಕ ತರಕಾರಿ. ಆದರೆ, ರಾತ್ರಿಯಲ್ಲಿ ಇದನ್ನು ತಿನ್ನುವುದು ಒಳ್ಳೆಯದಲ್ಲ. ಏಕೆಂದರೆ ರಾತ್ರಿಯಲ್ಲಿ ಬೀಟ್ರೂಟ್ ತಿನ್ನುವುದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟ ತೀವ್ರವಾಗಿ ಹೆಚ್ಚಾಗುತ್ತದೆ.

ಎಲೆಕೋಸು, ಹೂಕೋಸು

ಇವುಗಳಲ್ಲಿ ನಾರಿನಂಶ ಹೆಚ್ಚಿರುತ್ತದೆ. ನೀವು ಇವುಗಳನ್ನು ತಿಂದರೂ ಬೇಗನೆ ಜೀರ್ಣವಾಗುವುದಿಲ್ಲ. ಆದ್ದರಿಂದ, ಈ ತರಕಾರಿಗಳನ್ನು ಮಧ್ಯಾಹ್ನ ಬೇಯಿಸಬೇಕು. ರಾತ್ರಿಯಲ್ಲಿ ಇವುಗಳನ್ನು ತಿನ್ನುವುದರಿಂದ ಜೀರ್ಣಕ್ರಿಯೆಗೆ ಖಂಡಿತವಾಗಿಯೂ ತೊಂದರೆಯಾಗುತ್ತದೆ. ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ, ಅದು ಕೊಬ್ಬಾಗಿ ಬದಲಾಗುತ್ತದೆ. ಆದ್ದರಿಂದ, ನೀವು ಬೇಗನೆ ತೂಕ ಹೆಚ್ಚಿಸಿಕೊಳ್ಳುತ್ತೀರಿ.

ಮದ್ಯಪಾನ

ರಾತ್ರಿ ಹೊತ್ತಿನಲ್ಲಿ ಮದ್ಯಪಾನ ಮಾಡುವವರ ಸಂಖ್ಯೆ ತುಂಬಾ ಹೆಚ್ಚಾಗಿದೆ. ಆದರೆ, ರಾತ್ರಿಯಲ್ಲಿ ಮದ್ಯಪಾನ ಮಾಡುವುದನ್ನು ತಪ್ಪಿಸಬೇಕು. ಏಕೆಂದರೆ, ಆಲ್ಕೋಹಾಲ್​ ಅಂಶ ದೇಹದ ಮೇಲೆ ಪರಿಣಾಮ ಬೀರುತ್ತದೆ.

ಚಹಾ ಮತ್ತು ಕಾಫಿ

ಕೆಲವರಿಗೆ ಯಾವಾಗ ಚಹಾ ಮತ್ತು ಕಾಫಿ ಕುಡಿಯಬೇಕೆಂದು ತಿಳಿದಿರುವುದಿಲ್ಲ. ಅವರು ಪ್ರತಿ ಮೂರು ನಾಲ್ಕು ಗಂಟೆಗಳಿಗೊಮ್ಮೆ ಕಾಫಿ ಮತ್ತು ಟೀ ಕುಡಿಯುತ್ತಾರೆ. ಕೇವಲ ಒಂದು ಸಿಪ್ ಟೀ ಎಂದು ಭಾವಿಸಬಹುದು ಆದರೆ, ಆ ಸಿಪ್ ತೂಕ ಹೆಚ್ಚಿಸಲು ಸಹಾಯ ಮಾಡುತ್ತದೆ. ಚಹಾ ಮತ್ತು ಕಾಫಿಯಲ್ಲಿ ಕ್ಯಾಲೋರಿಗಳು ಮತ್ತು ಕೆಫೀನ್ ಅಧಿಕವಾಗಿರುತ್ತದೆ. ರಾತ್ರಿಯಲ್ಲಿ ಅವುಗಳನ್ನು ಕುಡಿಯುವುದರಿಂದ ಆ ಎಲ್ಲಾ ಕ್ಯಾಲೋರಿಗಳು ದೇಹವನ್ನು ಪ್ರವೇಶಿಸುತ್ತವೆ. ಇದಲ್ಲದೆ, ಕೆಫೀನ್ ನಿದ್ರೆಯನ್ನು ಅಡ್ಡಿಪಡಿಸುತ್ತದೆ ಮತ್ತು ತೂಕ ಹೆಚ್ಚಾಗಲು ಕಾರಣವಾಗಬಹುದು. ಆದ್ದರಿಂದ, ಸಂಜೆ ನಾಲ್ಕು ಗಂಟೆಯ ನಂತರ ಚಹಾ ಮತ್ತು ಕಾಫಿ ಕುಡಿಯದಿರುವುದು ಉತ್ತಮ.

ಮಾವು

ಮಾವಿನಹಣ್ಣು ಪೋಷಕಾಂಶಗಳು ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿದೆ. ಆದರೆ, ನೀವು ರಾತ್ರಿಯಲ್ಲಿ ಮಾವಿನಹಣ್ಣು ತಿಂದಾಗ, ಅದರಲ್ಲಿರುವ ಫೈಬರ್ ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ದೀರ್ಘಕಾಲದವರೆಗೆ ಕೆಲಸ ಮಾಡುವಂತೆ ಮಾಡುತ್ತದೆ. ಇದು ನಿಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್​ ನೆಟ್​” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.