ಲೈಫ್‌ಸ್ಟೈಲ್

ಚಳಿಗಾಲದಲ್ಲಿ ಸುಲಭವಾಗಿ ತೂಕ ಇಳಿಸಿಕೊಳ್ಳಲು ಈ 4 ಸರಳ ಟಿಪ್ಸ್ ಫಾಲೋ ಮಾಡಿ.. | Winter

ಬೆಂಗಳೂರು: ತೂಕ ಇಳಿಸಿಕೊಳೋಕೆ ಚಳಿಗಾಲ (Winter) ಅತ್ಯುತ್ತಮ ಸಮಯವಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಅನೇಕರಿಗೆ ಚಳಿಗಾಲ ತೂಕ ಇಳಿಸಲು ಯಾವುದೇ ಪ್ರೇರಣೆ ನೀಡುವುದಿಲ್ಲ. ಈ ಋತುವಿನಲ್ಲಿ ನಿಮ್ಮ ದೇಹದಲ್ಲಿ ಏನೇನಾಗುತ್ತದೆ? ಚಳಿಗಾಲದಲ್ಲಿ ತೂಕ ನಷ್ಟ ಮಾಡಿಕೊಳ್ಳುವುದು ಹೇಗೆ? ಎಲ್ಲಾ ಪ್ರಶ್ನೆಗಳಿಗೂ ಇಲ್ಲಿದೆ ಉತ್ತರ.

ಹೌದು, ಹೋಮಿಯೋಸ್ಟಾಸಿಸ್ ಎಂಬ ಪ್ರಕ್ರಿಯೆ ಮೂಲಕ ದೇಹ ನೈಸರ್ಗಿಕವಾಗಿ ಚಳಿಗಾಲದಲ್ಲಿ ತೂಕ ನಷ್ಟ ಮಾಡಲು ಸಹಾಯ ಮಾಡುತ್ತದೆ. ಸ್ಥಿರವಾದ ಆಂತರಿಕ ತಾಪಮಾನವನ್ನು ಕಾಪಾಡಿಕೊಳ್ಳಲು ದೇಹ ತನ್ನಲ್ಲಿರುವ ಕೊಬ್ಬನ್ನು ಕರಗಿಸುತ್ತದೆ. ಇದು ಶರೀರ ಅನೇಕ ಕ್ಯಾಲೊರಿಗಳನ್ನು ಸುಡುತ್ತದೆ. ಹೀಗಾಗಿ, ತೂಕ ಇಳಿಸಿಕೊಳ್ಳಲು ಇದು ಅತ್ಯುತ್ತಮ ಎಂದು ಹೇಳಲಾಗುತ್ತಿದೆ.

ವ್ಯಾಯಾಮ ಮಾಡಿ: ಚಳಿಯಿಂದ ಹೊರಗೆ ಹೊರಬರದಂತೆ ಯೋಗ, ಕಾರ್ಡಿಯೋ ಅಥವಾ ಹೋಮ್ ವರ್ಕ್‌ಔಟ್‌ಗಳನ್ನು ಮನೆಯಲ್ಲಿ ಮಾಡಿ. ಇದು ನಿಮ್ಮ ಚಯಾಪಚಯವನ್ನು ಹೆಚ್ಚಿಸಿ ತೂಕ ಇಳಿಸಲು ಸಹಾಯ ಮಾಡುತ್ತದೆ.

ಆರೋಗ್ಯಕರ ಬಿಸಿ ಆಹಾರಗಳು: ಸೂಪ್‌ಗಳು ಮತ್ತು ಬಿಸಿ ಟೀಗಳಂತಹ ಆಹಾರಗಳನ್ನು ಸೇವಿಸಿ. ಇವುಗಳು ತಂಪು ಭಾವನೆಯನ್ನು ದೂರಮಾಡುತ್ತದೆ.

ಹೈಡ್ರೇಟೆಡ್ ಆಗಿರಿ: ಚಳಿಯಲ್ಲಿ ನೀರು ಕುಡಿಯುವುದು ಕಡಿಮೆ ಆಗುತ್ತದೆ. ಆದರೆ, ಬಿಸಿ ನೀರು ಅಥವಾ ಹೆರ್ಬಲ್ ಟೀ ಕುಡಿಯಿರಿ.

ಸೂರ್ಯನ ಬೆಳಕು ಪಡೆಯಿರಿ: ದಿನಕ್ಕೆ 10-15 ನಿಮಿಷಗಳು ಹೊರಗೆ ನಡೆಯಿರಿ ಅಥವಾ ಜನವಿಲಿಗೆ ಬಳಿ ಕುಳಿತುಕೊಳ್ಳಿ. ಇದು ವಿಟಮಿನ್ D ಹೆಚ್ಚಿಸಿ ಮೂಡ್ ಅನ್ನು ಸುಧಾರಿಸುತ್ತದೆ. ಅಲ್ಲದೆ, ತೂಕ ನಿಯಂತ್ರಣಕ್ಕೆ ಸಹಾಯಕವಾಗಿದೆ. ಈ ಟಿಪ್ಸ್ ಅನ್ನು ಅನುಸರಿಸಿ, ನಿಮ್ಮ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಚಳಿಗಾಲವನ್ನು ಆನಂದಿಸಿ.

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.