Fermented Curd Rice : ಕಾಲ ಬದಲಾದಂತೆ ಊಟದ ಟ್ರೆಂಡ್ ಕೂಡ ಈಗ ಬದಲಾಗಿದೆ. ಇಂದು ಬೆಳಗಿನ ಟಿಫಿನ್ ಮಾಡಲು ಸಹ ಕೆಲವರಿಗೆ ಸಮಯವಿಲ್ಲ. ಹೀಗಾಗಿ ಫಾಸ್ಟ್ ಫುಡ್ಗಳ ಮೊರೆ ಹೋಗುತ್ತಿದ್ದಾರೆ. ಆದರೆ, ಈ ಹಿಂದೆ, ನಮ್ಮ ಹಿರಿಯರು ಬೆಳಗಿನ ಜಾವ ಮೊಸರನ್ನ ತಿನ್ನುತ್ತಿದ್ದರು. ರಾತ್ರಿ ಬೇಯಿಸಿದ ಅನ್ನವನ್ನು ಈರುಳ್ಳಿಯೊಂದಿಗೆ ಬೆರೆಸಿ, ಮೊಸರು ಅಥವಾ ನೀರಿನಲ್ಲಿ ನೆನೆಸಿ ಬೆಳಿಗ್ಗೆ ತಿನ್ನುತ್ತಿದ್ದರು. ಇದನ್ನು ಹುದುಗಿಸಿದ ಮೊಸರನ್ನ ಎಂದು ಕರೆಯಲಾಗುತ್ತದೆ.
ಈ ಹುದುಗಿಸಿದ ಮೊಸರನ್ನ ದೇಹದಲ್ಲಿನ ಶಾಖವನ್ನು ಕಡಿಮೆ ಮಾಡುತ್ತದೆ ಮತ್ತು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ನಮ್ಮ ಪೂರ್ವಜರು ಹಲವು ವರ್ಷಗಳ ಕಾಲ ಪರಿಪೂರ್ಣ ಆರೋಗ್ಯದಿಂದ ಬದುಕಿದ್ದರು. ಬೆಳಿಗ್ಗೆ ಮೊಸರನ್ನ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ. ಅವು ಯಾವುವು ಎಂಬುದನ್ನು ನಾವೀಗ ತಿಳಿಯೋಣ.
ಅನ್ನ ಮತ್ತು ಚಪಾತಿ ಮುಂತಾದ ಆಹಾರಗಳು ತಣ್ಣಗಾದಾಗ, ಅವುಗಳ ಪಿಷ್ಟದಲ್ಲಿರುವ ಅಣುಗಳು ಹತ್ತಿರ ಬಂದು ಒಟ್ಟಿಗೆ ಅಂಟಿಕೊಳ್ಳುತ್ತವೆ. ಈ ಪ್ರತಿಕ್ರಿಯೆಯು ಪಿಷ್ಟವು ಗಟ್ಟಿಯಾಗಲು ಸಹಾಯ ಮಾಡುತ್ತದೆ. ಇದರಿಂದ ಹಲವು ಪ್ರಯೋಜನಗಳಿವೆ. ಈ ಗಟ್ಟಿಯಾದ ಪಿಷ್ಟವು ಬೇಗನೆ ಒಡೆಯುವುದಿಲ್ಲ. ಇದು ರಕ್ತದಲ್ಲಿನ ಗ್ಲೂಕೋಸ್ ಅನ್ನು ಹೆಚ್ಚಿಸುವುದಿಲ್ಲ.
ಸಂಕೀರ್ಣವಾದ ಪಿಷ್ಟವು ಸಣ್ಣ ಕರುಳಿನಲ್ಲಿ ಜೀರ್ಣವಾಗದೆ ದೊಡ್ಡ ಕರುಳಿಗೆ ಹೋಗುತ್ತದೆ. ಅಲ್ಲಿ ಅದು ವಿಭಜನೆಯಾಗಿ ಹುದುಗುತ್ತದೆ. ಇದು ಒಳ್ಳೆಯ ಬ್ಯಾಕ್ಟೀರಿಯಾಗಳಿಗೆ ಆಹಾರವಾಗುತ್ತದೆ. ಇದರಲ್ಲಿ ಕ್ಯಾಲೋರಿಗಳು ಕೂಡ ತುಂಬಾನೇ ಕಡಿಮೆ.
ಪಿಷ್ಟವು ಪ್ರತಿ ಗ್ರಾಂಗೆ 4 ಕ್ಯಾಲೋರಿಗಳನ್ನು ಹೊಂದಿದ್ದರೆ, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು 2.5 ಕ್ಯಾಲೋರಿಗಳನ್ನು ಹೊಂದಿರುತ್ತವೆ. ನೀವು ಸ್ವಲ್ಪ ತಿಂದರೂ ಸಹ, ಇದು ದೀರ್ಘಕಾಲದವರೆಗೆ ಹಸಿವನ್ನು ನಿಯಂತ್ರಿಸುತ್ತದೆ. ಇದು ತೂಕ ಇಳಿಸಿಕೊಳ್ಳಲು ಮತ್ತು ತೂಕವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್‌ಗೆ ಪ್ರತಿಕ್ರಿಯಿಸುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ಇದಿಷ್ಟೇ ಅಲ್ಲದೆ, ಜೀವಕೋಶಗಳು ಗ್ಲೂಕೋಸ್ ಅನ್ನು ಉತ್ತಮವಾಗಿ ಹೀರಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದರ ಪರಿಣಾಮವಾಗಿ, ಮಧುಮೇಹ ಮತ್ತು ಹೃದ್ರೋಗದಂತಹ ಅಪಾಯಗಳು ಕಡಿಮೆಯಾಗುತ್ತವೆ. ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮಲವನ್ನು ಮೃದುಗೊಳಿಸುತ್ತವೆ ಮತ್ತು ಮಲಬದ್ಧತೆಯನ್ನು ಸಹ ತಡೆಯುತ್ತವೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.