Health tips; ಇತ್ತೀಚಿನ ಕಾಲದಲ್ಲಿ ಹಲವು ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತಿವೆ. ಇಂತಹ ಸಂದರ್ಭಗಳಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಅದರಂತೆ ನಮ್ಮ ದೇಹದಲ್ಲಿರುವ ಮೂತ್ರಪಿಂಡಗಳು ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ನಮ್ಮ ದೇಹದಲ್ಲಿನ ಮೂತ್ರಪಿಂಡದ ಆರೋಗ್ಯವನ್ನು ಕಾಪಾಪಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿರುತ್ತದೆ.
ಇದನ್ನೂ ಓದಿ:ಪಪ್ಪಾಯ ಹಣ್ಣು ಮಾತ್ರವಲ್ಲ ಎಲೆಯಲ್ಲೂ ಅಡಗಿದೆ ಆರೋಗ್ಯಕಾರಿ ಪ್ರಯೋಜನ! ಈ ಕಾಯಿಲೆಗಳಿಗೆ ರಾಮಬಾಣ | Papaya Leaf
ಅಂದಹಾಗೆ ಮೂತ್ರಪಿಂಡ ವೈಫಲ್ಯದ ಸಮಯದಲ್ಲಿ ಕೆಲ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಈ ಲಕ್ಷಣಗಳಿಗೆ ನೀವು ಗಮನ ಕೊಡದಿದ್ದರೆ, ನಿಮ್ಮ ಮೂತ್ರಪಿಂಡಗಳು ವಿಫಲಗೊಳ್ಳುವ ಸಾಧ್ಯತೆಯಿದೆ ಎಂದು ವೈದ್ಯಕೀಯ ತಜ್ಞರು ಎಚ್ಚರಿಸುತ್ತಾರೆ. ನಿಮ್ಮ ದೇಹದಲ್ಲಿ ಅಂತಹ ಲಕ್ಷಣಗಳು ಕಂಡುಬಂದರೆ, ನೀವು ತಡಮಾಡದೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಕೊಳ್ಳಬೇಕು. ಮೂತ್ರಪಿಂಡಗಳು ವಿಫಲಗೊಳ್ಳಲು ಪ್ರಾರಂಭಿಸಿದಾಗ ದೇಹದ ಯಾವ ಭಾಗಗಳಲ್ಲಿ ನಿಮಗೆ ನೋವು ಕಾಣಿಸಿಕೊಳ್ಳುತ್ತದೆ ಹಾಗೂ ಅದರ ಮುನ್ಸೂಚನೆಯ ಲಕ್ಷಣಗಳೇನು ಎಂಬುದನ್ನು ತಿಳಿಯೋಣ.
3)ನಿಮ್ಮ ಪಕ್ಕೆಲುಬುಗಳ ಕೆಳಗೆ ನೋವು ಅನುಭವಿಸಿದರೆ, ಜಾಗರೂಕರಾಗಿರಬೇಕು. ಆಗಾಗ್ಗೆ ಜನರು ವಾಕರಿಕೆ ಮತ್ತು ವಾಂತಿಯಂತಹ ಲಕ್ಷಣಗಳನ್ನು ಅತ್ಯಲ್ಪವೆಂದು ನಿರ್ಲಕ್ಷಿಸುತ್ತಾರೆ. ನೀವು ಅಂತಹ ಲಕ್ಷಣಗಳನ್ನು ಪದೇ ಪದೇ ಅನುಭವಿಸಿದರೆ, ನಿಮ್ಮ ಮೂತ್ರಪಿಂಡದ ಆರೋಗ್ಯವು ಹದಗೆಡುತ್ತಿದೆ ಎಂದರ್ಥ.
2)ಮೂತ್ರಪಿಂಡ ವೈಫಲ್ಯ ನಿಮ್ಮ ಆರೋಗ್ಯದ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು.
1)ಪಾದಗಳು ಮತ್ತು ಕಾಲುಗಳ ಊತ, ವಾಕರಿಕೆ, ವಾಂತಿ, ಹಸಿವಿನ ಕೊರತೆ, ಆಯಾಸ, ನಿದ್ರಾಹೀನತೆ, ಸ್ನಾಯು ನೋವು ಮತ್ತು ಸೆಳೆತ, ಮೂತ್ರ ವಿಸರ್ಜನೆ ಕಡಿಮೆಯಾಗುವುದು ಅಥವಾ ಆಗಾಗ್ಗೆ ಮೂತ್ರ ವಿಸರ್ಜನೆ ಸಂಭವಿಸುತ್ತಿದ್ದರೆ ಅದು ಮೂತ್ರಪಿಂಡ ವೈಫಲ್ಯದ ಮುನ್ಸೂಚನೆಯಾಗಿದೆ.
(ಏಜೆನ್ಸೀಸ್)
ಈ ಎಲ್ಲಾ ಲಕ್ಷಣಗಳು ಕಂಡುಬಂದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು. ಇಲ್ಲದಿದ್ದರೆ ನಂತರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
5)ಪಾದಗಳಲ್ಲಿ ಊತ ಕಾಣಿಸಿಕೊಳ್ಳುವುದು ಕೂಡ ಮೂತ್ರಪಿಂಡ ವೈಫಲ್ಯದ ಸಂಕೇತವಾಗಿದೆ. ಮೂತ್ರಪಿಂಡ ವೈಫಲ್ಯದಿಂದಲೂ ಮೆದುಳಿನ ಮಂಜು ಉಂಟಾಗಬಹುದು ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
4)ಬೆನ್ನಿನ ಕೆಳಭಾಗದಲ್ಲಿ ನೋವು ಕಾಣಿಸಿಕೊಳ್ಳುವುದರಿಂದ ಅದು ಮೂತ್ರಪಿಂಡ ವೈಫಲ್ಯವನ್ನು ಸೂಚಿಸುತ್ತದೆ. ಜೊತೆಗೆ, ನಿಮ್ಮ ಹೊಟ್ಟೆ ಅಥವಾ ಸೊಂಟದಲ್ಲಿ ನೋವು ಇದ್ದರೆ, ಮೂತ್ರಪಿಂಡದಲ್ಲಿ ಕಲ್ಲು ಇದ್ದಾಗ, ಹೊಟ್ಟೆ ಅಥವಾ ಸೊಂಟದಲ್ಲಿಯೂ ನೋವು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು ಹಾಗೂ ಪಠ್ಯಗಳಿಂದ ಸಂಗ್ರಹಿಸಲಾಗಿದೆ.