Water Heater : ದೇಶದೆಲ್ಲೆಡೆ ಕೊರೆಯುವ ಚಳಿ ಇದೆ. ಬೆಳಗ್ಗೆ ಎದ್ದೇಳುವುದಕ್ಕೂ ತುಂಬಾ ಕಷ್ಟವಾಗುತ್ತಿದೆ. ಇಡೀ ದಿನ ಚಳಿಯ ಎಫೆಕ್ಟ್ ಇದ್ದು, ತಣ್ಣೀರು ಮುಟ್ಟುವುದಕ್ಕೂ ಚಿಂತಿಸುವಂತಾಗಿದೆ. ಅದಕ್ಕಾಗಿಯೇ ಅನೇಕರು ಬೆಳಿಗ್ಗೆ ಎದ್ದು ಬಿಸಿನೀರಿನಲ್ಲಿ ಸ್ನಾನ ಮಾಡಲು ಇಷ್ಟಪಡುತ್ತಾರೆ.
ಹಳ್ಳಿಗಳಲ್ಲಿ ಸೌದೆ ಒಲೆಯಲ್ಲಿ ನೀರು ಕಾಯಿಸಿ ಸ್ನಾನ ಮಾಡುತ್ತಾರೆ. ಆದರೆ, ನಗರ ಪ್ರದೇಶಗಳಲ್ಲಿ ವಾಸ ಮಾಡುವ ಜನರು ಬಿಸಿ ನೀರಿಗಾಗಿ ಗ್ಯಾಸ್ ಸ್ಟೌವ್ಗಳು ಹಾಗೂ ಹೀಟರ್ಗಳನ್ನು ಬಳಕೆ ಮಾಡುತ್ತಾರೆ. ಎಲೆಕ್ಟ್ರಿಕ್ ವಾಟರ್ ಹೀಟರ್ಗಳನ್ನು ಬಳಸುವುದರಿಂದ ವಿದ್ಯುತ್ ವೆಚ್ಚವು ಸ್ವಲ್ಪ ಹೆಚ್ಚಾಗುತ್ತದೆ. ಮನೆಯಲ್ಲಿ ಹೆಚ್ಚಿನ ವೆಚ್ಚದಲ್ಲಿ ಗೀಸರ್ ಅಥವಾ ಸೋಲಾರ್ ವಾಟರ್ ಹೀಟರ್ ಖರೀದಿಸಲು ಸಾಧ್ಯವಾಗದ ಜನರು ಸ್ನಾನಕ್ಕಾಗಿ ನೀರನ್ನು ಕಾಯಿಸಲು ಇಂತಹ ವಿಧಾನಗಳನ್ನು ಬಳಸುತ್ತಾರೆ.
ಮಾರುಕಟ್ಟೆಯಲ್ಲಿ ಅಗ್ಗದ ದರದಲ್ಲಿ ದೊರೆಯುವ ವಾಟರ್ ಹೀಟರ್ಗಳನ್ನು ಎಚ್ಚರಿಕೆಯಿಂದ ಬಳಸಬೇಕು. ಸ್ವಲ್ಪ ಯಾಮಾರಿದರೂ ಕೆಲವೊಮ್ಮೆ ಸಾವಿಗೆ ಕಾರಣವಾಗಬಹುದು.
* ಬಾತ್ರೂಮ್ನಲ್ಲಿ ವಾಟರ್ ಹೀಟರ್ಗಳನ್ನು ಬಳಸಬಾರದು. ಏಕೆಂದರೆ ತೇವಯುತ ಪ್ರದೇಶದಲ್ಲಿ ಬಳಸಿದರೆ ವಿದ್ಯುತ್ ಅಪಘಾತದ ಅಪಾಯವಿದೆ.
* ತಂತಿ ಸಂಪೂರ್ಣವಾಗಿ ನೀರಿನಲ್ಲಿ ಮುಳುಗಿದ ನಂತರ ವಾಟರ್ ಹೀಟರ್ ಅನ್ನು ಆನ್ ಮಾಡಬೇಕು. ಯಾವುದೇ ಕಾರಣಕ್ಕೂ ನೀರು ಬಿಸಿಯಾಗಿದೆಯೇ ಎಂದು ಪರೀಕ್ಷಿಸಲು ನಿಮ್ಮ ಬೆರಳನ್ನು ನೀರಿನಲ್ಲಿ ಇಡಬೇಡಿ. ಆ ರೀತಿ ಮಾಡುವುದರಿಂದ ವಿದ್ಯುತ್ ಶಾಕ್ ಉಂಟಾಗಬಹುದು. ಅದೃಷ್ಟ ಕೆಟ್ಟರೆ ಪ್ರಾಣಕ್ಕೂ ಸಂಚಕಾರ ಬರಬಹುದು.
* ವಾಟರ್ ಹೀಟರ್ ಅನ್ನು ಆಫ್ ಮಾಡಿದ ನಂತರ 10 ನಿಮಿಷಗಳನ್ನು ಬಿಟ್ಟು ಹೀಟರ್ ರಾಡ್ ಅನ್ನು ನೀರಿನಿಂದ ತೆಗೆಯಬೇಕು.
* ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ವಾಟರ್ ಹೀಟರ್ ಅನ್ನು ಎಂದಿಗೂ ಬಳಸಬೇಡಿ. ಏಕೆಂದರೆ, ಇದು ಸ್ಫೋಟದ ಅಪಾಯವನ್ನು ಹೆಚ್ಚಿಸುತ್ತದೆ.
* ಕಬ್ಬಿಣದ ಬಕೆಟ್‌ಗಳಲ್ಲಿ ಹೀಟರ್ ಅನ್ನು ಬಳಸಬೇಡಿ. ಬದಲಾಗಿ, ಉಕ್ಕು, ಅಲ್ಯೂಮಿನಿಯಂ ಅಥವಾ ಇತರ ಲೋಹದ ಪಾತ್ರೆಗಳನ್ನು ಬಳಸಿ.