ಲೈಫ್‌ಸ್ಟೈಲ್

ನೀವು ಪಿತ್ತದ ಸಮಸ್ಯೆಯಿಂದ ಬಳಲುತ್ತಿದ್ದೀರಾ? ಹಾಗಿದ್ದರೆ ಈ ಮನೆಮದ್ದು ಬಳಸಿ! | Home remidies

Home remidies: ಇಂದಿನ ದಿನಗಳಲ್ಲಿ ಹಲವಾರು ಜನರು ಅನೇಕ ಕಾಯಿಲೆಯಿಂದ ಒಳಪಟ್ಟಿರುತ್ತಾರೆ. ಹಾಗೆಯೇ ಕೆಲವರಲ್ಲಿ ಪಿತ್ತದ ಸಮಸ್ಯೆಗಳು ಆಗ್ಗಾಗೆ ಕಾಣಿಸಿಕೊಳ್ಳುತ್ತವೆ. ಇದು ದೇಹದಲ್ಲಿ ಉಷ್ಣತೆ, ಆಮ್ಲಜನಕತೆ, ತಲೆನೋವು, ಗ್ಯಾಸ್ಟ್ರಿಕ್​ನಂತಹ ಸಮಸ್ಯೆಗಳನ್ನು ಅನುಭವಿಸುವಂತೆ ಮಾಡುತ್ತವೆ. ಪಿತ್ತವು ನಿಮ್ಮಲ್ಲಿ ಪ್ರಾರಂಭದಲ್ಲಿದ್ದರೆ ಈ ರೀತಿಯ ಮನೆಮದ್ದು ಬಳಸಿ...

1. ಅಲೋವೆ ವೆರಾ ಜೆಲ್

ಅಲೊವೆರಾ ನೈಸರ್ಗಿಕವಾಗಿರುವಂತಹ ಔಷಧಿಯಾಗಿದ್ದು, ಇದು ನಿಮ್ಮ ದೇಹದಲ್ಲಾಗಿರುವ ಪಿತ್ತವನ್ನು ತಂಪುಗೊಳಿಸುವ ಔಷಧಿ ಗುಣಗಳನ್ನು ಹೊಂದಿದೆ. 2 ಚಮಚ ಅಲೊವೆರಾ ಜೆಲ್​ಗೆ ಸ್ವಲ್ಪ ನೀರನ್ನು ಮಿಶ್ರಣ ಮಾಡಿ ದಿನಕ್ಕೆ ಒಮ್ಮೆ ಕುಡಿಯಿರಿ ಇದು ಪಿತ್ತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಕೊತ್ತುಂಬರಿ ನೀರು

ಕೊತ್ತುಂಬರಿ ಬೀಜಗಳು ಪಿತ್ತವನ್ನು ತಂಪುಪಡಿಸುವ ಗುಣಗಳನ್ನು ಹೊಂದಿದೆ. ಇದು ದೇಹದಲ್ಲಾಗುವ ಉರಿಯನ್ನು ಕಡಿಮೆ ಮಾಡುತ್ತದೆ. 1 ಚಮಚ ಕೊತ್ತುಂಬರಿ ಬೀಜಗಳನ್ನು ರಾತ್ರಿ ನೀರಿನಲ್ಲಿ ನೆನಸಿಡಿ. ಬೆಳಿಗ್ಗೆ ಅದನ್ನು ಮಿಕ್ಸಿ ಮಾಡಿ ದಿನಕ್ಕೆ 2 ಬಾರಿ ಕುಡಿಯಿರಿ ಇದು ದೇಹದಲ್ಲಿನ ಟಾಕ್ಸಿನ್​ ಗುಣಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

3. ಪುದೀನಾ ರಸ

ಪುದೀನಾವು ತಂಪು ಗುಣಗಳು ಹೊಂದಿದೆ. ಆದರಿಂದ ಸ್ವಚ್ಛವಾದಂತಹ ಪುದಿನಾ ಎಲೆಗಳನ್ನು ತೊಳೆದು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಮಿಶ್ರಣ ಮಾಡಿ ತಿನ್ನಿ. ಇದು ದೇಹದಲ್ಲಿನ ಉಷ್ಣತೆಯನ್ನು ಕಡಿಮೆ ಮಾಡಿ, ಪಿತ್ತವನ್ನು ಕಡಿಮೆ ಮಾಡುತ್ತದೆ.

4. ಶೀತಲಿ ಪ್ರಾಣಾಯಾಮ

ಶೀತಲಿ ಪ್ರಾಣಯಾಮ ಒಂದು ಆರೋಗ್ಯಕರ ಯೋಗವಾಗಿದ್ದು, ಇದನ್ನು ದಿನನಿತ್ಯ ಮಾಡುವುದರಿಂದ ನಿಮ್ಮ ದೇಹದಲ್ಲಾಗುವ ಪಿತ್ತದ ಸಮಸ್ಯೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ದಿನಕ್ಕೆ 5-10 ನಿಮಿಷಗಳ ಕಾಲ ಇದನ್ನು ಮಾಡಿ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

5. ಮಜ್ಜಿಗೆ

ಮಜ್ಜಿಗೆಯು ಪಿತ್ತವನ್ನು ಸಮತೋಲನಗೊಳಿಸಲು ಉಪಯೋಗವಾಗುತ್ತದೆ. ಆದರಿಂದ ಒಂದು ಲೋಟ ಮಜ್ಜಿಗೆಗೆ ಜೀರಿಗೆ, ಶುಂಠಿ ಹಾಕಿ ಕುಡಿಯಿರಿ. ಇದು ದೇಹದಲ್ಲಾಗುವ ದಹನವನ್ನು ಸುಧಾರಿಸಿ ಆಮ್ಲತೆಯನ್ನು ಕಡಿಮೆ ಮಾಡುತ್ತದೆ. (ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ