ಮೊಟ್ಟೆ ಬಳಸದೇ ಮಾಡಿ ರಾಕಿ ಚಾಕಲೇಟ್​ ಕೇಕ್​!| cake

untitled-design-2025-09-27t171046469-68d7cd6550b0e
Published on

Cake: ಕೇಕ್​ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಇತ್ತೀಚಿನ ದಿನಗಳಲ್ಲಂತೂ ಅನೇಕ ರೀತಿಯ ಬಗೆ-ಬಗೆಯ ಕೇಕ್​ಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ನಿಮಗೇನಾದರೂ ಬೇಕರಿಯಲ್ಲಿ ಸಿಗುವಂತ ರೀತಿಯ ಕೇಕ್​ ಏನಾದರೂ ತಿನ್ನಲು ಬಯಸಿದರೆ ಇಂದೇ ನಿಮ್ಮ ಮನೆಯಲ್ಲಿ ಈ ರೀತಿಯ ರಾಗಿ ಕೇಕ್​ ಮಾಡಿ.

ಬೇಕಾಗುವ ಪದಾರ್ಥಗಳು

* 1 ಕಪ್​ ರಾಗಿ ಹಿಟ್ಟು

* 1 ಕಪ್ ಗೋಧಿ ಹಿಟ್ಟು

* 2 ಚಮಚ ಕೊಕೋ ಪೌಡರ್

* 1 ಕಪ್ ಸಕ್ಕರೆ ಅಥವಾ ಬೆಣ್ಣೆ

* 1/3 ಹಾಲು

* 1/2 ಚಮಚ ವಿನೇಗರ್​

* 1 ಚಮಚ ವೆನಿಲಾ ಎಸೆನ್ಸ್​

* 1 ಚಮಚ ಬೇಕಿಂಗ್ ಪುಡಿ

* ಉಪ್ಪು

* ಕೊಕೋ ಪೌಡರ್

ಮಾಡುವ ವಿಧಾನ

ಮೊದಲು ಒಂದು ಪಾತ್ರೆಯಲ್ಲಿ ರಾಗಿ ಹಿಟ್ಟು, ಗೋದಿ ಹಿಟ್ಟು, ಬೇಕಿಂಗ್​ ಸೋಡಾ, ಬೇಕಿಂಗ್​ ಪೌಡರ್​, ಕೊಕೋ ಪೌಡರ್ ಬೆಣ್ಣೆ ಸೇರಿಸಿ ಮಿಶ್ರಣ ಮಾಡಿಕೊಳ್ಳಿ. ನಂತರ ಅದಕ್ಕೆ ಹಾಲು, ವಿನೇಗರ್​,ಎಣ್ಣೆ ಸೇರಿಸಿ ಚೆನ್ನಾಗಿ ಕಲಸಿರಿ. ನಂತರ ಒಂದು ಕುಕ್ಕರ್​ ಕೆಳಗೆ ಸ್ವಲ್ಪ ಉಪ್ಪು ಹಾಕಿ ಬಿಸಿ ಮಾಡಿ. ನಂತರ ಅದರ ಮೇಲೆ ಪಾತ್ರೆಯನ್ನು ಇಟ್ಟು ಅದಕ್ಕೆ ತಯಾರು ಮಾಡಿರುವಂತಹ ಮಿಶ್ರಣವನ್ನು ಹಾಕಿ 20 ನಿಮಿಷ ಬೇಯಿಸಿ ನಂತರ ಹೊರ ತೆಗೆಯಿರಿ.

ನಂತರ ಹಾಲು, ಸಕ್ಕರೆ, ಬೆಣ್ಣೆ, ವೆನಿಲಾಪುಡಿ ಎಲ್ಲವನ್ನು ಸೇರಿಸಿ ಕುದಿಸಿ ಮಿಶ್ರಣ ಮಾಡಿಕೊಂಡು ಸ್ವಲ್ಪ ತಣ್ಣಗಾದ ನಂತರ ರೆಡಿ ಇರುವ ಕೇಕ್​ಗೆ ಹಚ್ಚಿರಿ ನಂತರ ಸೇವಿಸಿರಿ.(ಏಜೆನ್ಸೀಸ್​)

ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net