Health Tips: ನಾವು ಅರಿಶಿಣ ಪುಡಿಯನ್ನು ಅಡುಗೆ ಮನೆಯಲ್ಲಿ ಮಾತ್ರ ಬಳಸುತ್ತೇವೆ. ಆದರೆ ಕೆಲವು ಸಂದರ್ಭದಲ್ಲಿ ಇದು ಔಷಧಿಯಾಗಿ ಪರಿಗಣನೆಯಾಗುತ್ತದೆ. ರೋಗನಿರೋಧಕ ಶಕ್ತಿಯನ್ನುಬಲಪಡಿಸುವುದು ಹಾಗೂ ಉರಿಯೂತವನ್ನು ಕಡಿಮೆ ಮಡುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಅರಿಶಿಣವನ್ನು ಹಾಲಿನೊಂದಿಗೆ ಬೆರಸಿ ಕುಡಿಯುವುದರಿಂದ ಆರೋಗ್ಯದಲ್ಲಿ ಅನೇಕ ಪ್ರಯೋಜನಗಳು ಉಂಟಾಗುತ್ತವೆ. ಹಾಗಿದ್ದರೆ ಈ ಹಾಲಿನಿಂದ ಆಗುವ ಪ್ರಯೋಜನಗಳೇನು? ತಿಳಿಯೋಣ ಬನ್ನಿ..
ಪ್ರತಿರಾತ್ರಿ ಹಾಲಿನೊಂದಿಗೆ ಅರಿಶಿಣವನ್ನು ಸೇರಿಸಿ ಕುಡಿಯುವುದರಿಂದ ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದು ಆ್ಯಂಟಿಬಯೋಟಿಕ್ ಅಂಶಗಳನ್ನು ಒಳಗೊಂಡಿರುತ್ತದೆ.
ಅರಿಶಿಣದ ಹಾಲು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ನೈಸರ್ಗಿಕವಾದ ಬ್ಯಾಕ್ಟೀರಿಯಾ, ಶಿಲೀಂಧ್ರ ವಿರೋಧಿ ಲಕ್ಷಣಗಳನ್ನು ಹೊಂದಿರುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಾಗುವ ರೋಗ ನಿರೋಧಕ ಶಕ್ತಿಯನ್ನು ತಡೆಯಹುದು.
ಅರಿಶಿಣದ ಹಾಲನ್ನು ಪ್ರತಿ ನಿತ್ಯ ರಾತ್ರಿ ಸೇವಿಸುವುದರಿಂದ ಆಂತರಿಕ ಉರಿಯೂತವನ್ನು ಕಡಿಮೆ ಮಾಡಿ, ಸಂಧಿವಾತ ಕಡಿಮೆಯಾಗುತ್ತದೆ.
ಪ್ರತಿನಿತ್ಯ ಹಾಲಿಗೆ ಅರಿಶಿನ ಪುಡಿಯನ್ನು ಸೇರಿಸಿ ಕುಡಿಯುವುದರಿಂದ ಚರ್ಮದ ಕಾಂತಿ ಹೆಚ್ಚಾಗುತ್ತದೆ. ಹಾಗೆ ನಿಮ್ಮ ಚರ್ಮ ಮೃದುವಾಗಿರಲು ಸಹಾಯ ಮಾಡುತ್ತದೆ.
ಅರಿಶಿಣದಲ್ಲಿರುವ ಕರ್ಕ್ಯುಮಿನ್ನಿಂದಾಗಿ ಮೆದುಳಿನಲ್ಲಿ ಕಾರ್ಯ ನಿರ್ವಹಿಸಲು ಸಹಾಯವಾಗುತ್ತದೆ. ಇನ್ನು ನರಮಂಡಲದ ಕಾರ್ಯ ನಿರ್ವಹಿಸುವಲ್ಲಿ ಈ ಹಾಲು ಸಹಾಯ ಮಾಡುತ್ತದೆ. (ಏಜೆನ್ಸೀಸ್)