Watermelon | ಈ ಬೇಸಿಗೆಯಲ್ಲಿ ಎಲ್ಲರೂ ಕಲ್ಲಂಗಡಿ ಹಣ್ಣನ್ನು ತಿನ್ನಲು ಇಷ್ಟಪಡುತ್ತಾರೆ. ಏಕೆಂದರೆ, ಈ ಸಂದರ್ಭದಲ್ಲಿ ಕಲ್ಲಂಗಡಿ ಹಣ್ಣು ಹೆಚ್ಚಾಗಿ ಸಿಗುತ್ತದೆ. ಅಲ್ಲದೆ ಇದರಲ್ಲಿ ನೀರಿನ ಅಂಶ ಜಾಸ್ತಿ ಇರುವುದರಿಂದ ಬೇಸಿಗೆಯ ಬಳಲಿಕೆಯನ್ನು ನಿವಾರಿಸಿಕೊಳ್ಳಲು ಕಲ್ಲಂಗಡಿ ಹಣ್ಣಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಭಾರಿ ಬೇಡಿಕೆ ಇದೆ. ಇನ್ನೂ ಈ ಕಲ್ಲಂಗಡಿ ತಿಂದ ಬಳಿಕ ಜನರು ಕೆಲವು ಆಹಾರ ಪದಾರ್ಥಗಳನ್ನ ಸೇವಿಸುವುದನ್ನು ತಪ್ಪಿಸಬೇಕು. ಹಾಗಾದರೆ ಕಲ್ಲಂಗಡಿ ತಿಂದ ನಂತರ ಯಾವ ವಸ್ತುಗಳನ್ನು ಸೇವಿಸಬಾರದು ಮತ್ತು ಏಕೆ ಎಂಬುದನ್ನು ತಜ್ಞರಿಂದ ತಿಳಿದುಕೊಳ್ಳೋಣ.
ಇದನ್ನೂ ಓದಿ: ಬಿಸಿಲಿನ ಶಾಖಕ್ಕೆ ನಿಮ್ಮ ಮುಖ ಕಪ್ಪಾಗಿದೆಯೇ; ಹೀಗೆ ಮೊಸರಿನಿಂದ ಫೇಸ್ ವಾಶ್ ಮಾಡಿ; ನಂತರ ರಿಸಲ್ಟ್ ನೋಡಿ| Face wash
2) ತುಂಬಾ ತಣ್ಣನೆಯ ಕಲ್ಲಂಗಡಿ ಹಣ್ಣನ್ನು ಸೇವಿಸಬಾರದು. ಯಾಕೆಂದರೆ ಅತೀ ತಂಪಾಗಿರುವ ಹಣ್ಣನ್ನು ತಿನ್ನುವುದರಿಂದ ಜೀರ್ಣಕ್ರಿಯೆಯ ಮೇಲೆ ಪರಿಣಾಮ ಉಂಟಾಗುತ್ತದೆ. ಕಲ್ಲಂಗಡಿ ಹಣ್ಣನ್ನು ತುಂಬಾ ತಣ್ಣಗೆ ತಿಂದರೆ, ಅದು ಹೊಟ್ಟೆ ಉಬ್ಬರ ಮತ್ತು ಇತರ ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುವ ಸಾಧ್ಯತೆ ಇರುತ್ತದೆ.
1) ಕಲ್ಲಂಗಡಿ ಹಣ್ಣು ತಿಂದ ತಕ್ಷಣ ನೀರು ಕುಡಿಯುವುದನ್ನು ತಪ್ಪಿಸಬೇಕು. ಇದನ್ನು ತಿಂದ ತಕ್ಷಣ ನೀರು ಕುಡಿದರೆ, ಹೊಟ್ಟೆಯಲ್ಲಿ ಆಮ್ಲೀಯತೆಯ ಸಮಸ್ಯೆ ಉಂಟಾಗುತ್ತದೆ. ಹಣ್ಣು ತಿಂದ ಕನಿಷ್ಠ ಅರ್ಧ ಗಂಟೆಯ ನಂತರ ನೀರು ಕುಡಿಯುವುದು ಉತ್ತಮ ಎಂದು ಹೇಳಲಾಗಿದೆ.
3) ಅದೇ ರೀತಿ ಮೊಟ್ಟೆಗಳಂತಹ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿರುವ ಆಹಾರಗಳನ್ನು ಕಲ್ಲಂಗಡಿಯೊಂದಿಗೆ ತಿನ್ನಬಾರದು. ಏಕೆಂದರೆ ಅವುಗಳ ಸೇವನೆಯು ಹೊಟ್ಟೆ ಊತ ಮತ್ತು ಮಲಬದ್ಧತೆಗೆ ಕಾರಣವಾಗಬಹುದು.
ಇದನ್ನೂ ಓದಿ: ನಿಮ್ಮ ಮನೆಯ ಬಾಗಿಲಲ್ಲಿ ಕಪ್ಪೆಯನ್ನು ನೋಡಿದರೆ ಒಳ್ಳೆಯದೋ? ಕೆಟ್ಟದ್ದೋ? ಜ್ಯೋತಿಷ್ಯ ಶಾಸ್ತ್ರ ಹೇಳೋದೇನು |frog
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳಿಂದ ಹಾಗೂ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
(ಏಜೆನ್ಸೀಸ್)
6) ಕರಿದ ಆಹಾರವನ್ನು ತಿಂದ ತಕ್ಷಣ ಕಲ್ಲಂಗಡಿ ತಿನ್ನುವುದರಿಂದ ಹೃದಯ ಮತ್ತು ರಕ್ತನಾಳಗಳಿಗೆ ಸಂಬಂಧಿಸಿದ ಸಮಸ್ಯೆಗಳ ಅಪಾಯ ಹೆಚ್ಚಾಗುವ ಸಾಧ್ಯತೆ ಇರುತ್ತದೆ ಎಂದು ಹೇಳಲಾಗಿದೆ.
5) ಕಲ್ಲಂಗಡಿ ತಿಂದ ನಂತರ ಪ್ರೋಟೀನ್ ಅಧಿಕವಾಗಿರುವ ಆಹಾರಗಳನ್ನು ತಿನ್ನಬಾರದು. ಉದಾಹರಣೆಗೆ ಬೀನ್ಸ್, ಮೊಸರು ಮತ್ತು ಕಾಳುಗಳನ್ನು ಕಲ್ಲಂಗಡಿ ಜೊತೆ ಸೇವಿಸಬಾರದು. ಏಕೆಂದರೆ ಇದು ಜೀರ್ಣಕ್ರಿಯೆಯ ಸಮಸ್ಯೆಗಳನ್ನು ಉಂಟುಮಾಡಬಹುದು.
4) ಕಲ್ಲಂಗಡಿ ತಿಂದ ನಂತರ ಹಾಲು ಕುಡಿಯುವುದು ಸಹ ಹಾನಿಕಾರಕವಾಗಿದೆ. ಏಕೆಂದರೆ ಕಲ್ಲಂಗಡಿಯಲ್ಲಿರುವ ವಿಟಮಿನ್ 'ಸಿ' ಮತ್ತು ಹಾಲಿನಲ್ಲಿರುವ ಪ್ರೋಟೀನ್ ಹೊಟ್ಟೆ ಉಬ್ಬರಕ್ಕೆ ಕಾರಣವಾಗಬಹುದು.