frog | ನಾವೆಲ್ಲರೂ ಕಪ್ಪೆಗಳನ್ನ ನೋಡಿರುತ್ತೇವೆ. ಅದರಲ್ಲೂ ರಾತ್ರಿ ಸಮಯದಲ್ಲಿ ಈ ಕಪ್ಪೆಗಳು ಹೆಚ್ಚಾಗಿ ನಮ್ಮ ಮನೆಯ ಮುಂಭಾಗ ಕಣ್ಣಿಗೆ ಕಾಣಿಸಿಕೊಳ್ಳುತ್ತವೆ. ಅಂದಹಾಗೆ ಮನೆಯ ಸುತ್ತಲೂ ಯಾವುದಾದರೂ ಪ್ರಾಣಿ ಓಡಾಡುವುದನ್ನು ನೋಡುವುದು ಅಥವಾ ಮನೆಯೊಳಗೆ ಯಾವುದಾದರೂ ಪ್ರಾಣಿ ಪ್ರವೇಶ ಮಾಡಿದರೆ, ಹಿಂದೂ ಧರ್ಮದಲ್ಲಿ ಅದನ್ನು ಶುಭವೆಂದು ಪರಿಗಣಿಸಲಾಗಿದೆ. ಹಾಗಾದ್ರೆ ನಮ್ಮ ಕಣ್ಣಿಗೆ ಕಪ್ಪೆಗಳು ಕಾಣಿಸಿಕೊಳ್ಳುವುದರಿಂದ ಶುಭವಾಗುತ್ತಾ ಅಥವಾ ಅದರಿಂದ ಏನಾದರೂ ಅಶುಭವಾಗುತ್ತಾ ಎಂಬುದನ್ನು ತಿಳಿಯೋಣ.

ಇದನ್ನೂ ಓದಿ: ಹಳದಿ ಹಲ್ಲುಗಳಿಂದ ಬಳಲುತ್ತಿದ್ದೀರಾ; ನಿಮ್ಮ ಹಲ್ಲುಗಳು ವಜ್ರದಂತೆ ಹೊಳೆಯಲು ಈ ಮನೆ ಮದ್ದನ್ನು ಟ್ರೈ ಮಾಡಿ| Basil
ಜ್ಯೋತಿಷ್ಯ ಶಾಸ್ತ್ರ ಹೇಳೋದೇನು?
ಕಪ್ಪೆಯನ್ನು ನೋಡುವುದು ಜೀವನದಲ್ಲಿ ಕೆಲವು ದೊಡ್ಡ ಬದಲಾವಣೆಗಳನ್ನು ಸೂಚಿಸುತ್ತದೆ ಎಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ. ಕಪ್ಪೆಯನ್ನು ಮನೆಯ ಹೊರಗೆ ಅಥವಾ ಒಳಗೆ ನೋಡುವುದಕ್ಕೂ ತುಂಬಾ ವ್ಯತ್ಯಾಸಗಳಿವೆ. ಹಾಗಿದ್ದರೆ ಈ ಎರಡರಲ್ಲಿ ಯಾವುದು ಶುಭ ಎಂಬುದನ್ನು ತಿಳಿದುಕೊಳ್ಳೋಣ.
ಕಪ್ಪೆಗಳು ಸಂತೋಷ ಮತ್ತು ಅದೃಷ್ಟದ ಸಂಕೇತವೆಂದು ನಂಬಲಾಗಿದೆ. ನೀವು ಯಾವುದೇ ಸಮಯದಲ್ಲಿ ಕಪ್ಪೆಗಳನ್ನು ನೋಡಬಹುದು. ಆದರೆ ಮಳೆಗಾಲದಲ್ಲಿ ಮನೆಯ ಹೊರಗೆ ಹೆಚ್ಚಿನ ಸಂಖ್ಯೆಯ ಕಪ್ಪೆಗಳು ಕಾಣಿಸಿಕೊಳ್ಳುತ್ತವೆ. ಆದರೆ ನೀವು ಇದ್ದಕ್ಕಿದ್ದಂತೆ ಮನೆಯ ಹೊರಗೆ ಕಪ್ಪೆಗಳನ್ನು ನೋಡಿದರೆ, ನಿಮ್ಮ ಜೀವನದಲ್ಲಿ ಕೆಲವು ಸಕಾರಾತ್ಮಕ ಬದಲಾವಣೆಗಳು ಸಂಭವಿಸುತ್ತವೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಪತ್ನಿ ಉಷಾ, ಮಕ್ಕಳೊಂದಿಗೆ ಭಾರತಕ್ಕೆ ಆಗಮಿಸಿದ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್| Vice President
ನಿಮ್ಮ ಮನೆಯ ಮುಖ್ಯ ದ್ವಾರದಲ್ಲಿ ಕಪ್ಪೆಯನ್ನು ನೋಡಿದರೆ ಅಥವಾ ನೀವು ಎಲ್ಲೋ ಹೋಗುತ್ತಿರುವಾಗ ಕಪ್ಪೆ ನಿಮ್ಮ ಮುಂದೆ ಹಾರಿ ನಿಮ್ಮ ಹಾದಿಯನ್ನು ದಾಟಿದರೆ, ನಿಮ್ಮ ಜೀವನದಲ್ಲಿ ಸಮೃದ್ಧಿ ಬರುತ್ತದೆ ಎಂದು ನಂಬಲಾಗಿದೆ. ಮನೆಯ ಗೇಟಿನ ಮುಂದೆ ಕಪ್ಪೆಯನ್ನು ನೋಡುವುದು ಉತ್ತಮ ಆರೋಗ್ಯದ ಸಂಕೇತ ಎನ್ನಲಾಗಿದೆ.
ಮನೆಯೊಳಗೆ ಹಾಗೂ ಮನೆಯ ಹೊರಗೆ ಕಪ್ಪೆಗಳನ್ನು ನೋಡುವುದು ಆರೋಗ್ಯದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಕಪ್ಪೆ ಮನೆಗೆ ಪ್ರವೇಶಿಸುವುದನ್ನು ಸಂತೋಷ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಕಪ್ಪೆ ನಿಮ್ಮ ಮನೆಗೆ ಪ್ರವೇಶಿಸಿದರೆ ಅದು ನಿಮ್ಮ ಮನೆಗೆ ಸಂಪತ್ತಿನ ಬಾಗಿಲು ತೆರೆಯಲಿದೆ ಎಂಬುದನ್ನು ಸೂಚಿಸುತ್ತದೆ.
(ಏಜೆನ್ಸೀಸ್)
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
ಹಳದಿ ಹಲ್ಲುಗಳಿಂದ ಬಳಲುತ್ತಿದ್ದೀರಾ; ನಿಮ್ಮ ಹಲ್ಲುಗಳು ವಜ್ರದಂತೆ ಹೊಳೆಯಲು ಈ ಮನೆ ಮದ್ದನ್ನು ಟ್ರೈ ಮಾಡಿ| Basil