ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ ಒಮ್ಮೆಯೂ ಲಾಗಿನ್ ಮಾಡದ ಜಿಮೇಲ್ ಖಾತೆಗಳನ್ನು ಕಾಯಂ ಡಿಲೀಟ್ ಮಾಡಲು ಗೂಗಲ್ ನಿರ್ಧರಿಸಿದೆ. ಇದೇ ವರ್ಷ ಡಿಸೆಂಬರ್ನಲ್ಲಿ ಈ ಪ್ರಕ್ರಿಯೆಯನ್ನು ಅದು ಆರಂಭಿಸಲಿದೆ. ಆದರೆ ಇದು ವೈಯಕ್ತಿಕ ಖಾತೆಗಳಿಗೆ ಮಾತ್ರ ಅನ್ವಯವಾಗಲಿದ್ದು ಸಂಘ- ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಅಥವಾ ಉದ್ಯಮ ಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ ಎಂದು ಗೂಗಲ್ ಸ್ಪಷ್ಟಪಡಿಸಿದೆ.
ಇದಕ್ಕೂ ಮುನ್ನ, ಖಾತೆಯಲ್ಲಿನ ಮಾಹಿತಿ ಸಂಗ್ರಹವನ್ನು ಉಳಿಸಲು ನಿಷ್ಕ್ರಿಯ ಖಾತೆಗಳಲ್ಲಿನ ಕಂಟೆಂಟ್ಗಳನ್ನು ಮಾತ್ರ ಡಿಲೀಟ್ ಮಾಡುವ ನೀತಿಯನ್ನು ಗೂಗಲ್ ಅನುಸರಿಸುತ್ತಿತ್ತು. ಇದೀಗ ಅಂಥ ಖಾತೆಗಳನ್ನೇ ಸಂಪೂರ್ಣವಾಗಿ ಡಿಲೀಟ್ ಮಾಡಲು ಹೊರಟಿದೆ. ಡಿಲೀಟ್ ಮಾಡಿದ ಖಾತೆಗಳ ಇಮೇಲ್ ವಿಳಾಸ, ಜಿಮೇಲ್ ಸಂದೇಶಗಳು, ಘಟನಾವಳಿಗಳ ಕ್ಯಾಲೆಂಡರ್, ಡ್ರೖೆವ್, ಡಾಕ್ಸ್ ಮತ್ತು ಇತರ ವರ್ಕ್ಪ್ಲೇಸ್ ಕಡತಗಳು, ಯೂಟ್ಯೂಬ್ ಮತ್ತು ಗೂಗಲ್ ಫೋಟೋಗಳು ಮುಂದೆ ಲಭ್ಯವಾಗುವುದಿಲ್ಲ.
ಸ್ಕಾ್ಯಮ್ ಕರೆಗಳನ್ನು ಪರಿಶೀಲಿಸಲು ವಾಟ್ಸ್ ಆಪ್ ಸುಮಾರು 36 ಲಕ್ಷ ಖಾತೆಗಳನ್ನು ಬ್ಲಾಕ್ ಮಾಡಿದೆ ಎಂದು ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ವಾಟ್ಸ್ ಆಪ್ ಕರೆಗಳ ಮೂಲಕ. ವಂಚನೆ ಚಟುವಟಿಕೆಗಳಲ್ಲಿ ತೊಡಗಿರುವ ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಆದವರ ಸೇವೆಗಳನ್ನು ನಿಷ್ಕ್ರಿಯಗೊಳಿಸಲು ಮೆಟಾ ಮಾಲೀಕತ್ವದ ಆಪ್ ಸಮ್ಮತಿಸಿದೆ ಎಂದು ಸಚಿವರು ಹೇಳಿದರು. ವಂಚನೆ ಕಾರಣಕ್ಕಾಗಿ 36 ಲಕ್ಷ ಮೊಬೈಲ್ಗಳ ಸಂಪರ್ಕ ಕಡಿತ ಮಾಡಿದ್ದಲ್ಲದೆ ಅವುಗಳ ವಾಟ್ಸ್ ಆಪ್ ಖಾತೆ ಬ್ಲಾಕ್ ಮಾಡಲಾಗಿದೆ ಎಂದರು.