ಲೈಫ್‌ಸ್ಟೈಲ್

ಚಿಯಾ ಸೀಡ್ಸ್​ ರಹಸ್ಯ: ದಿನನಿತ್ಯ ಸೇವನೆಯಿಂದ ಇಷ್ಟೆಲ್ಲಾ ಉಪಯೋಗವಿದೆ! | Health tips

Health tips: ಚಿಯಾ ಸೀಡ್ಸ್ ಎಂಬುದು ಮೆಕ್ಸಿಕೋ ಮೂಲದ ಸಸ್ಯದ ಬೀಜಗಳು. ಈ ಹಿಂದೆ ಅಜ್ಟೆಕ್ ಮತ್ತು ಮಾಯನ್ ಸಂಸ್ಕೃತಿಗಳಲ್ಲಿ ಆಹಾರವಾಗಿ ಬಳಸಲ್ಪಟ್ಟಿದ್ದವು. ಆದರೆ, ಇಂದು ಸೂಪರ್​ಫುಡ್​ ಆಗಿ ಮಾರ್ಪಟ್ಟಿವೆ. ಈ ಚಿಯಾ ಸೀಡ್ಸ್​ನಲ್ಲಿ ಪ್ರೊಟೀನ್​, ಒಮೆಗಾ, ಫೈಬರ್​ನಂತಹ ಪೌಷ್ಟಿಕ ಗುಣಗಳಿರುತ್ತವೆ. ಇನ್ನು ಈ ಸೀಡ್ಸ್​ನಲ್ಲಿ ಹೈ-ಫೈಬರ್ ಮೂಲವಾಗಿದ್ದು, ದೇಹದಲ್ಲಿ ಫೈಬರ್ ಅಗತ್ಯದಲ್ಲಿ ಶೇ. 42 ರಷ್ಟು ಪೂರೈಸುತ್ತದೆ. ಇದು ಒಮೆಗಾ-3 ಫ್ಯಾಟಿ ಆಸಿಡ್‌ಗಳು ಹೃದಯ ಆರೋಗ್ಯವನ್ನು ಕಾಪಾಡುವಲ್ಲಿ ಸಹಾಯ ಮಾಡುತ್ತದೆ

ಆರೋಗ್ಯದಲ್ಲಿ ಚಿಯಾ ಸೀಡ್ಸ್​ ಪಾತ್ರ

1. ತೂಕ ನಿರ್ವಹಣೆ

ಚಿಯಾ ಸೀಡ್ಸ್​ನಲ್ಲಿ ಪೌಷ್ಟಿಕಾಂಶಗಳು ಹೆಚ್ಚಾಗಿ ಇದ್ದು, ಇವು ತೂಕ ಕಡಿಮೆ ಮಾಡಲು ಸಹಾಯಮಾಡುತ್ತದೆ. ಪ್ರತಿನಿತ್ಯ ಸ್ವಲ್ಪ ಹೊತ್ತು ನೀರಿನಲ್ಲಿ ನೆನಸಿಟ್ಟು ಚಿಯಾ ಸೀಡ್ಸ್​ಗಳನ್ನು ಪಾನೀಯ ಅಥವಾ ಆಹಾರದಲ್ಲಿ ಮಿಶ್ರಣ ಮಾಡಿ ಸೇವಿಸುವುದರಿಂದ ಇವು ಕ್ರಮೇಣ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.

2. ಹೃದಯ ಆರೋಗ್ಯ

ಚಿಯಾ ಸೀಡ್ಸ್​ನಲ್ಲಿ ಒಮೆಗಾ-3 ನಂತಹ ಪೌಷ್ಟಿಕಾಂಶಗಳಿದ್ದು, ಇವು ಕೊಲೆಸ್ಟ್ರಾಲ್​ನ್ನು ಕಡಿಮೆ ಮಾಡಿ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಹಾಗೆಯೇ ಇದು ಹೃದಯದ ಆರೋಗ್ಯದಲ್ಲಿ ಎಥೇಚ್ಛವಾಗಿ ಪರಿಣಾಮ ಬೀರುವಲ್ಲಿ ಸಹಾಯ ಮಾಡುತ್ತದೆ. ಇದರಲ್ಲಿರುವ ಪಾಲಿಯುನ್‌ಸ್ಯಾಚುರೇಟೆಡ್ ಫ್ಯಾಟಿ ಆಸಿಡ್‌ಗಳು ಕಾರ್ಡಿಯೋವಾಸ್ಕ್ಯುಲರ್ ಆರೋಗ್ಯವನ್ನು ಸುಧಾರಿಸುತ್ತವೆ.

3. ಜೀರ್ಣಕ್ರಿಯೆ ಸುಧಾರಣೆಯಲ್ಲಿ ಪಾತ್ರ

ಚಿಯಾ ಸೀಡ್ಸ್‌ಗಳಲ್ಲಿ ಹೆಚ್ಚಿನ ಫೈಬರ್ ಇರುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸುತ್ತವೆ. ಅವು ಮಲವನ್ನು ಮೃದುಗೊಳಿಸಿ, ಕುಗ್ಗುವಿಕೆಯನ್ನು ತಡೆಯುತ್ತವೆ. ಹಾಗೆಯೇ ಬ್ಯಾಕ್ಟೀರಿಯಾಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ. ಇದು IBS ಸಮಸ್ಯೆಯಲ್ಲಿ ಉರಿಯ ದೇಹ ಕಡಿಮೆ ಮಾಡುತ್ತದೆ.

4. ರಕ್ತದಲ್ಲಿರುವ ಸಕ್ಕರೆ ನಿಯಂತ್ರಣ

ಚಿಯಾ ಸೀಡ್ಸ್‌ಗಳಲ್ಲಿ ಹೆಚ್ಚಿನ ಫೈಬರ್ ಇರುವುದರಿಂದ ಇದು ರಕ್ತದಲ್ಲಿರುವ ಸಕ್ಕರೆ ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದು ಇನ್ಸುಲಿನ್ ಸಂವೇದನೀಯತೆಯನ್ನು ಹೆಚ್ಚಿಸಿ, ಡಯಾಬೆಟಿಸ್ ರೋಗಿಗಳಿಗೆ ಸಹಾಯ ಮಾಡುತ್ತವೆ. ಹಾಗೆಯೇ ಚಿಯಾ ಸೀಡ್ಸ್​ನಲ್ಲಿ ಮ್ಯಾಗ್ನೀಷಿಯಂ ಸಮೃದ್ಧವಾಗಿರುವುದರಿಂದ ಹೆಚ್ಚಾದ ಸಕ್ಕರೆಯನ್ನು ಸ್ಥಿರತೆಗೆ ತರುವಲ್ಲಿ ಗಣನೀಯ ಪಾತ್ರ ವಹಿಸುತ್ತದೆ.

5. ಆಂಟಿಆಕ್ಸಿಡೆಂಟ್ ರಕ್ಷಣೆ

ಚಿಯಾ ಸೀಡ್ಸ್‌ಗಳಲ್ಲಿ ಕ್ವರ್ಸೆಟಿನ್ ಮತ್ತು ಕೈಮರಿಕ್ ಆಸಿಡ್‌ನಂತಹ ಆಂಟಿಆಕ್ಸಿಡೆಂಟ್‌ಗಳು ಫ್ರೀ ರ್ಯಾಡಿಕಲ್‌ಗಳನ್ನು ನಿಯಂತ್ರಿಸುತ್ತವೆ. ಇದು ದೇಹದಲ್ಲಾಗುವ ಉರಿಯನ್ನು ಕಡಿಮೆಗೊಳಿಸಿ, ಕ್ಯಾನ್ಸರ್​, ಹೃದಯರೋಗಗಳಂತಹ ಸಮಸ್ಯೆಗಳನ್ನು ತಡೆಯುತ್ತದೆ. ಪ್ರತಿದಿನ ಒಂದು ಲೀಟರ್​ ನೀರಿಗೆ 1 ಚಮಚ ಚಿಯಾ ಸೀಡ್ಸ್​ ಸೇರಿಸಿ ಕುಡಿಯಿರಿ..

ಆಹಾರದಲ್ಲಿ ಬಳಸುವುದು ಹೇಗೆ?

ಚಿಯಾ ಸೀಡ್ಸ್‌ನ್ನು ಸ್ಮೂತಿಗಳು, ಪುಡಿಂಗ್, ಸಲಾಡ್, ಓಟ್‌ಮೀಲ್​ನಲ್ಲಿ ಸೇರಿಸಬಹುದು. ಮೊದಲು ನೀರಿನಲ್ಲಿ 10 ನಿಮಿಷ ನೆನಸಿ ನಂತರ ಅವುಗಳನ್ನು ಸೇವಿಸಿರಿ. ಅತಿಯಾದ ಸೇವನೆಯಿಂದ ಹೊಟ್ಟೆಯ ತೊಂದರೆ ಅಥವಾ ರಕ್ತದೊತ್ತಡದಲ್ಲಿ ಬದಲಾವಣೆ ಉಂಟಾಗಬಹುದು. ಗರ್ಭಿಣಿಯರು ಅಥವಾ ಔಷಧ ಸೇವಿಸುವವರು ಡಾಕ್ಟರ್ ಸಲಹೆ ಪಡೆಯಿರಿ. (ಏಜೆನ್ಸೀಸ್​)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ