

weight gain dessert : ಇಂದಿನ ದಿನಗಳಲ್ಲಿ ಹಲವಾರು ಜನ ತೂಕ ಹೆಚ್ಚಿಸಿಕೊಳ್ಳಲು ಹಲವಾರು ರೀತಿಯಲ್ಲಿ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಜಿಮ್, ಮಾತ್ರೆಗಳು, ಆರೋಗ್ಯ ತಪಾಸಣೆ ಹಾಗೂ ಇನ್ನಿತರವುಗಳ ಮೊರೆ ಹೋಗುತ್ತಿದ್ದಾರೆ. ಆದರೂ ಫಲಿತಾಂಶದಲ್ಲಿ ಯಾವುದೇ ಬದಲಾವಣೆ ಇಲ್ಲದೆ, ನಿರಾಸೆ ವ್ಯಕ್ತಪಡಿಸುತ್ತಾರೆ. ಹಾಗಾಗಿ ತೂಕ ಹೆಚ್ಚಿಸುಕೊಳ್ಳಲು ಪ್ರಯತ್ನಿಸುವವರು ಈ ರೀತಿಯ ಆಹಾರ ಸೇವಿಸಿ ಇದು ತೂಕ ಹೆಚ್ಚಿಸಲು ಬಹಳಷ್ಟು ಸಹಾಯ ಮಾಡುತ್ತದೆ.
* 3 ಆಲೂಗಡ್ಡೆ
* 1/2 ಚಮಚ ಖಾರದ ಪುಡಿ
* ರುಚಿಗೆ ಉಪ್ಪು
* ಕೊತ್ತುಂಬರಿ ಸೊಪ್ಪು
* 1/2 ಚಮಚ ದನಿಯಾ ಪುಡಿ
* ಗೋಧಿ ಹಿಟ್ಟು
ಮೊದಲು ಗೋಧಿ ಹಿಟ್ಟನ್ನು ಕಲಸಿ ಚಪಾತಿ ಲಟ್ಟಿಸಿಕೊಂಡು ಪಕ್ಕದಲ್ಲಿಡಿ. ನಂತರ ಒಂದು ಪಾತ್ರೆಗೆ ಬೇಯಿಸಿದ ಆಲೂಗಡ್ಡೆ, ಖಾರದಪುಡಿ, ಉಪ್ಪು, ದನಿಯಾ ಪುಡಿ,ಕೊತ್ತುಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಉಂಡೆಗಳಾಗಿ ಮಾಡಿಟ್ಟುಕೊಳ್ಳಿ. ಇದಾದ ಬಳಿಕ ಉದ್ದಿಟ್ಟುಕೊಂಡಿರುವ ಚಪಾತಿಗೆ ಈ ಮಿಶ್ರಣವನ್ನು ಸೇರಿಸಿ ಮಡಚಿ ನಂತರ ಅದನ್ನು ಚಪಾತಿ ಹದಕ್ಕೆ ಉದ್ದಿಕೊಳ್ಳಿ. ನಂತರ, ಒಲೆಯ ಮೇಲೆ ತವ ಇಟ್ಟು ಬೇಯಿಸಿ ಸವಿಯಿರಿ...
(ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ