Custard apple: ಸೀತಾಫಲ ಒಂದು ಪ್ರೊಟೀನ್ ಸಮೃದ್ಧವಾಗಿರುವಂತಹ ಹಣ್ಣು. ಇದು ಭಾರತದಲ್ಲಿ ಚಳಿಗಾಲದ ಸಮಯದಲ್ಲಿ ಹೆಚ್ಚಾಗಿ ಸಿಗುವಂತಹ ಆಹಾರ. ಇದರ ಸೇವನೆ ದೇಹದ ಆರೋಗ್ಯಕ್ಕೆ ಉತ್ತಮವಾಗಿದೆ. ಆದರೆ, ಮಧುಮೇಹಿಗಳು ಈ ಹಣ್ಣನ್ನು ಸೇವಿಸಬಹುದೇ? ಎಂಬ ಪ್ರಶ್ನೆ ಹಲವಾರು ಜನರಲ್ಲಿ ಕಂಡು ಬರುವ ಒಂದು ಸಮಸ್ಯೆಯಾಗಿದೆ.
ಆದಾಗ್ಯೂ, ಕೆಲವು ಆರೋಗ್ಯ ಸಮಸ್ಯೆ ಇರುವಂತಹ ಜನರು ಈ ಹಣ್ಣನ್ನು ಸೇವಿಸಿದಾಗ ಅವರಲ್ಲಿ ದದ್ದು, ತುರಿಕೆ, ಕಜ್ಜಿಯಂತಹ ಸಮಸ್ಯೆಗಳಿಗೆ ಒಳಪಡುತ್ತಾರೆ. ಇಂತಹ ಸಮಸ್ಯೆ ಇರುವಂತಹವರು ಈ ಹಣ್ಣನ್ನು ಸೇವಿಸಬಾರದು. ಆದರೆ ಮಧುಮೇಹಿಗಳು ಯಾವುದೇ ತೊಂದರೆ ಇಲ್ಲದೆ ಹಣ್ಣನ್ನು ಸೇವಿಸಬಹುದು. ಆದರೆ ಮಿತವಾಗಿ ತಿನ್ನಬೇಕು ಎಂದು ವೈದ್ಯರು ತಿಳಿಸುತ್ತಾರೆ.
ಇದನ್ನೂ ಓದಿ: ಹಿಜಾಬ್ ಧರಿಸಿದ ವಿದ್ಯಾರ್ಥಿನಿ ಶಾಲೆಗೆ ಪ್ರವೇಶಿಸದಂತೆ ತಡೆ! ವಿವಾದ ಬೆನ್ನಲ್ಲೇ 2 ದಿನ ಶಾಲೆಗೆ ರಜೆ..Hijab
ಸೀತಾಫಲದಲ್ಲಿ ಉತ್ತಮ ಪೌಷ್ಟಿಕ ಮೌಲ್ಯವಿದ್ದು, 100 ಗ್ರಾಂ ಫಲದಲ್ಲಿ ಸುಮಾರು 25 ಗ್ರಾಂ ಕಾರ್ಬೊಹೈಡ್ರೇಟ್, 2.4 ಗ್ರಾಂ ಫೈಬರ್, 1.7 ಗ್ರಾಂ ಪ್ರೋಟೀನ್, ವಿಟಮಿನ್ C (36 ಮಿ.ಗ್ರಾ.), ವಿಟಮಿನ್ A, B ಕುಟುಂಬ ಮತ್ತು ಪೊಟ್ಯಾಷಿಯಂ ಇರುತ್ತದೆ. ಹಾಗೆಯೇ ಇದರಲ್ಲಿರುವ ಫೈಬರ್ ಅಂಶವು ರಕ್ತದಲ್ಲಿನ ಗ್ಲೂಕೋಸ್ ಹೀರುಕೊಳ್ಳುವಿಕೆಯನ್ನು ತಡೆಯುತ್ತದೆ. ಇದರಿಂದ ಮಧುಮೇಹ ನಿಯಂತ್ರಿಸಲು ಸಾಧ್ಯವಾಗುತ್ತದೆ.
* ಮಧುಮೇಹಿಗಳು ಸೀತಾಫಲ ಸೇವಿಸುವುದರಿಂದ ಇದು ರಕ್ರದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ.
* ಸೀತಾಫಲವು ಫೈಬರ್ ಜೀರ್ಣಕ್ರಿಯೆಯನ್ನು ಸುಧಾರಿಸಿ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
* ಇದರಲ್ಲಿರುವ ವಿಟಮಿನ್ C ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
* ಡಯಾಬೆಟಿಸ್ ಇರುವಂತವರಿಗೆ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ: ಪೊಲೀಸ್ ಮಾಹಿತಿದಾರನೆಂದು ಬಿಜೆಪಿ ಕಾರ್ಯಕರ್ತನನ್ನು ಹಗ್ಗದಿಂದ ಕತ್ತು ಬಿಗಿದು ಕೊಲೆಗೈದ ನಕ್ಸಲರು| Naxals killed
* ಸೀತಾಫಲದಲ್ಲಿ ಫ್ರಕ್ಟೋಸ್ ಹೆಚ್ಚಾಗಿರುವುದರಿಂದ ರಕ್ತದಲ್ಲಿ ಸಕ್ಕರೆ ಮಟ್ಟ ಹೆಚ್ಚಾಗಬಹುದು.
* ಅತಿಯಾಗಿ ಸೀತಾಫಲ ಸೇವಿಸುವುದರಿಂದ ತೂಕ ಹೆಚ್ಚಿಸಿ ಹೃದಯ ಮತ್ತು ಮೂಳೆಗಳ ಮೇಲೆ ಒತ್ತಡ ಹಾಕುತ್ತದೆ.
* ಮಧುಮೇಹ ಔಷಧ ಸೇವಿಸುವವರು ಇದನ್ನು ಸೇವಿಸುವುದರಿಂದ ಔಷಧದ ಪರಿಣಾಮ ಕಡಿಮೆಯಾಗಬಹುದು.
* ಸೀತಾಫಲದ ಬೀಜಗಳನ್ನು ಸೇವಿಸುವುದರಿಂದ ನರವ್ಯವಸ್ಥೆ ಹಾಗೂ ಮೆದುಳಿನ ಕಾರ್ಯವನ್ನು ತೊಡೆದುಹಾಕಬಹುದು.
* ಸೀತಾಫಲ ತಿಂದ ನಂತರ ನೀರು ಕುಡಿಯುವುದರಿಂದ ಜೀರ್ಣಕ್ರಿಯೆ ಸಮಸ್ಯೆಯನ್ನು ಅನುಭವಿಸಬಹುದು.
ಮಧುಮೇಹ ತಜ್ಞರ ಸಲಹೆಯಂತೆ, ದಿನಕ್ಕೆ ಒಂದು ಸೀತಾಫಲ ತಿನ್ನುವುದು ಒಳ್ಳೆಯದು. ಸೀತಾಫಲ ತಿನ್ನುವ ಮೊದಲು ನಿಮ್ಮ ರಕ್ತದೊತ್ತಡವನ್ನು ಪರಿಶೀಲಿಸಿಕೊಳ್ಳಿ ನಂತರ ಸೇವಿಸಿ.. ಈ ಹಣ್ಣನ್ನು ಗರ್ಭೀಣಿ ಮಧುಮೇಹಿಗಳು ಸೇವಿಸಬೇಡಿ.. (ಏಜೆನ್ಸೀಸ್)ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್" ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ