Overthinking : ಕೆಲವರು ಅತಿಯಾಗಿ ಯೋಚಿಸುತ್ತಾರೆ. ಅಂಥವರು ಖಂಡಿತವಾಗಿಯೂ ಈ ವಿಷಯಗಳನ್ನು ತಿಳಿದಿರಲೇಬೇಕು. ಈ ಅತಿಯಾದ ಯೋಚನೆಗಳು ಯಾವುದೇ ಕೆಲಸಗಳನ್ನು ಮಾಡುವುದಕ್ಕೆ ಬಿಡುವುದಿಲ್ಲ. ಅಲ್ಲದೆ, ಸಮಯ ಮತ್ತು ಆರೋಗ್ಯವನ್ನೂ ಹಾಳು ಮಾಡುತ್ತದೆ. ಅತಿಯಾಗಿ ಆಲೋಚನೆ ಮಾಡುವವರು ಗೊಂದಲಕ್ಕೆ ಸಿಲುಕುವುದಲ್ಲದೇ ಎಲ್ಲರನ್ನೂ ಗೊಂದಲಕ್ಕೆ ದೂಡುತ್ತಾರೆ.
ಅಂದಹಾಗೆ ಅತಿಯಾಗಿ ಯೋಚನೆ ಮಾಡುವವರು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಕೆಲವೊಂದು ಭಯದಿಂದಾಗಿ ಕೆಲವರು ಅತಿಯಾಗಿ ಯೋಚಿಸುತ್ತಿದ್ದಾರೆ. ಅದೇ ಭಯಗಳ ಬಗ್ಗೆ ಮತ್ತೆ ಮತ್ತೆ ಯೋಚಿಸುವುದು, ಭಯಾನಕ ಸನ್ನಿವೇಶಗಳನ್ನು ಕಲ್ಪಿಸಿಕೊಳ್ಳುವುದು, ನಕಾರಾತ್ಮಕ ಆಲೋಚನೆಗಳು ಹಾಗೂ ಖಿನ್ನತೆ ಇತ್ಯಾದಿಗಳಿಂದ ತಮ್ಮ ಅಮೂಲ್ಯ ಸಮಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ.
ಅತಿಯಾಗಿ ಯೋಚಿಸುವ ಲಕ್ಷಣಗಳನ್ನು ಗಮನಿಸಿದರೆ, ಸದಾ ಚಡಪಡಿಕೆ, ಅತೀವ ಸಂಕಟ, ಆತಂಕ, ಮಾನಸಿಕ ಆಯಾಸ, ನೆಗಿಟಿವ್ ಆಲೋಚನೆಗಳು, ನಿರ್ಧಾರಗಳನ್ನು ಆಗಾಗ ಪ್ರಶ್ನಿಸುವುದು, ಅನುಮಾನ ಪಡುವುದು, ಯಾವಾಗಲೂ ಮುಜುಗರಕ್ಕೆ ಒಳಗಾಗುವುದು, ಪ್ರಸ್ತುತ ಘಟನೆ ಮತ್ತು ಸಂದರ್ಭವನ್ನು ಬಿಟ್ಟು ಅಂದರೆ, ವಾಸ್ತವವನ್ನು ಅರಿಯದೇ ಬೇರೆ ವಿಚಾರಗಳನ್ನು ಚಿಂತಿಸುವುದು ಅತಿಯಾಗಿ ಯೋಚಿಸುವ ಲಕ್ಷಣಗಳಾಗಿವೆ. ಇದರಿಂದ ಹೊರಬರದಿದ್ದಲ್ಲಿ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಅತಿಯಾಗಿ ಯೋಚನೆ ಮಾಡುವುದರಿಂದ ಅನೇಕ ಜನರು ಕೆಲವು ಚಟಗಳಿಗೆ ವ್ಯಸನಿಯಾಗುತ್ತಾರೆ. ಅತಿಯಾದ ಆಲೋಚನೆಯು ಸಂಬಂಧಗಳನ್ನು ನಾಶಪಡಿಸುತ್ತದೆ. ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಒಟ್ಟಾರೆ ಸುಂದರ ಜೀವನದ ಮೇಲೆ ಕಾರ್ಮೋಡ ಕವಿಯುವಂತೆ ಮಾಡುತ್ತದೆ. ಹೀಗಾಗಿ ಈ ಅತಿಯಾದ ಆಲೋಚನೆಯಿಂದ ಹೊರಬರಲು, ನಕಾರಾತ್ಮಕ ಆಲೋಚನೆಗಳಿಂದ ದೂರವಿರಬೇಕು. ನಿಜವೇ ಆಗಿದ್ದರೆ ಏನಾಗಿಬಿಡುತ್ತದೆ ಎಂಬುದನ್ನು ಅರಗಿಸಿಕೊಳ್ಳಲು ಅಭ್ಯಾಸ ಮಾಡಿಕೊಳ್ಳಿ. ಎಷ್ಟೇ ಚಿಂತೆ ಮಾಡಿದರೂ ಬದಲಾಗದ ಘಟನೆಗಳಲ್ಲಿ ಬದುಕುವ ಬದಲು, ಅದರಿಂದ ಮುನ್ನಡೆಯಬೇಕು. ಯಾವುದನ್ನು ಗಂಭೀರವಾಗಿ ತೆಗೆದುಕೊಳ್ಳಬಾರದು ಮತ್ತು ಆಗುವುದೆಲ್ಲ ಒಳ್ಳೆಯದ್ದಕ್ಕೆ ಹಾಗೂ ಯಾವುದು ಶಾಶ್ವತವಲ್ಲ ಎಂಬ ಮನೋಭಾವ ಬೆಳೆಸಿಕೊಳ್ಳಿ. ಸಹಾನುಭೂತಿ ಮನಸ್ಥಿತಿಯನ್ನು ಹೊಂದಿ. ಇದಿಷ್ಟೇ ಅಲ್ಲದೆ, ಅತಿಯಾದ ಆಲೋಚನೆಯನ್ನು ಹೋಗಲಾಡಿಸಲು ಯೋಗ ಮತ್ತು ವ್ಯಾಯಾಮದಂತಹ ವಿಷಯಗಳ ಮೇಲೆ ಕೇಂದ್ರೀಕರಿಸುವುದನ್ನು ಮರೆಯಬೇಡಿ.
ಇದನ್ನೂ ಓದಿ: ಕೊನೇ ಕ್ಷಣದಲ್ಲಿ ಕಂಗುವಾ ಚಿತ್ರತಂಡಕ್ಕೆ ಶಾಕ್! ಬಿಡುಗಡೆ ಮಾಡದಂತೆ ಕೋರ್ಟ್ ಆದೇಶ, ಕಾರಣ ಹೀಗಿದೆ… Kanguva