ಲೈಫ್‌ಸ್ಟೈಲ್

ಪತ್ರೊಡೆಗೆ ಸಿಕ್ತು ಆರೋಗ್ಯಪೂರ್ಣ ಆಹಾರದ ಪಟ್ಟಿಯಲ್ಲಿ ಸ್ಥಾನ

ಮಂಗಳೂರು: ಕೆಸುವಿನ ಪತ್ರೊಡೆ ಹೆಸರು ಕೇಳಿದ್ರೆ ಸಾಕು ಬಾಯಲ್ಲಿ ನೀರೂರುತ್ತೆ. ಆಷಾಢ ಮಾಸ ಶುರುವಾಗುತ್ತಿದ್ದು, ಕರಾವಳಿ ಭಾಗದಲ್ಲಿ ಮನೆಮನೆಯಲ್ಲೂ ಪತ್ರೊಡೆ ಘಮ ಘಮಿಸಲು ಸಜ್ಜಾಗಿದೆ. ಇಂತಹ ಸುಸಂದರ್ಭದಲ್ಲಿ ಪತ್ರೊಡೆ ಪ್ರಿಯರಿಗೊಂದು ಸಿಹಿ ಸುದ್ದಿ ಇಲ್ಲಿದೆ. ಆಯುಷ್​ ಸಚಿವಾಲಯ ಪ್ರಕಟಿಸಿರುವ ಆಯುಷ್​ ವೈದ್ಯ ಪದ್ಧತಿಯ ಆರೋಗ್ಯಪೂರ್ಣ ಆಹಾರದ ಪಟ್ಟಿಯಲ್ಲಿ ಪತ್ರೊಡೆ ಸ್ಥಾನ ಪಡೆದಿದೆ.

ತುಳುನಾಡಿನ ಬ್ರ್ಯಾಂಡ್​ ಡಿಶ್​ ಎಂದೇ ಜನಪ್ರಿಯವಾಗಿರುವ ಆರೋಗ್ಯದಾಯಕ ತಿಂಡಿ ಕೆಸುವಿನ ಪತ್ರೊಡೆ ಕರ್ನಾಟಕದ ಕರಾವಳಿ ಭಾಗದಲ್ಲೂ ಜನಪ್ರಿಯ. ಆಯುಷ್​ ಸಚಿವಾಲಯ ಪ್ರಕಟಿಸಿರುವ ಆಯುಷ್​ ವೈದ್ಯ ಪದ್ಧತಿಯ ಆರೋಗ್ಯಪೂರ್ಣ ಆಹಾರದ ಪಟ್ಟಿಯಲ್ಲಿ ಪತ್ರೊಡೆ ಸ್ಥಾನ ಪಡೆದಿದೆ. ಆಯುಷ್​ ಇಲಾಖೆ ಇಂತಹ 26 ಸಾಂಪ್ರದಾಯಿಕ ಖಾದ್ಯಗಳಿರುವ ಪುಸ್ತಿಕೆ ಪ್ರಕಟಿಸಿದೆ. ಇದು ಅದರ ವೆಬ್​ಸೈಟಿನಲ್ಲೂ ಇ-ನಮೂನೆಯಲ್ಲಿ ಲಭ್ಯವಿದೆ. ಫೋಟೋಗಳು, ವಿವರಣೆ, ಬೇಕಾದ ಪದಾರ್ಥಗಳು, ತಯಾರಿ ವಿಧಾನ, ಆರೋಗ್ಯಕ್ಕೆ ಇದರಿಂದ ಪ್ರಯೋಜನ ಇತ್ಯಾದಿಗಳು ಅದರಲ್ಲಿವೆ. ಇದನ್ನೂ ಓದಿರಿ ಮರ್ಯಾದೆಗೆ ಅಂಜಿ ವಿಜಯಪುರ ಮೂಲದ ಮೂವರು ಗೋವಾದಲ್ಲಿ ಆತ್ಮಹತ್ಯೆ! ಪ್ರಕರಣ ದಿಕ್ಕುತಪ್ಪಿಲು ಪೊಲೀಸರ ಯತ್ನ

ತುಳುನಾಡಿನಲ್ಲಿ ಪ್ರಸಿದ್ಧವಾದ ಪತ್ರೊಡೆಯನ್ನು ಬೇರೆ ಬೇರೆ ಹೆಸರಿನಲ್ಲಿ ಕೇರಳ, ಗುಜರಾತ್​, ಗೋವಾ, ಹಿಮಾಚಲಪ್ರದೇಶದಲ್ಲೂ ತಯಾರಿಸಲಾಗುತ್ತದೆ. ಕಬ್ಬಿಣದಂಶ ಹೆಚ್ಚಿರುವ ಕೆಸುವಿನ ಎಲೆಗಳು ದೇಹದಲ್ಲಿ ಹಿಮೋಗ್ಲೋಬಿನ್​ ಅಂಶವನ್ನು ಹೆಚ್ಚಿಸುತ್ತವೆ. ದೇಹಕ್ಕೆ ಉಪಯುಕ್ತ ಅಂಶಗಳು ಇದರಲ್ಲಿವೆ. ಫೆನಾಲ್ಸ್​, ಟ್ಯಾನಿನ್​, ಫ್ಲೇವನಾಯ್ಡ್​, ಗೈಕೋಸೈಡ್ಸ್​, ಸ್ಟೆರಾಲ್ಸ್​ ಇತ್ಯಾದಿಗಳು ಉರಿಯೂತ ಉಪಶಮನಕ್ಕೆ ನೆರವಾಗುತ್ತದೆ. ವಿಟಮಿನ್​ ಸಿ ಹಾಗೂ ಬೀಟಾ ಕೆರೊಟಿನ್​ ಕೂಡ ಇದೆ.