ಲೈಫ್‌ಸ್ಟೈಲ್

ಕಮಲದ ಟೀಯಲ್ಲಿದೆಯಾ ಇಷ್ಟೊಂದು ಪ್ರಯೋಜನಾ? ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ...Lotus Tea

Lotus Tea : ಚಹಾ ಅನ್ನೋದು ಕೇವಲ ಒಂದು ಪಾನೀಯ ಅಲ್ಲ. ಇದು ಅನೇಕರ ಜೀವನದಲ್ಲಿ ಬೆರೆ ಬೆರೆ ಪಾತ್ರ ವಹಿಸಿದೆ. ಬೆಳಗ್ಗೆ ಎದ್ದೊಡನೆ ಒಂದು ಕಪ್ ಬಿಸಿ ಬಿಸಿ ಚಹಾ ಕುಡಿಯುವುದು ಅನೇಕರ ದಿನಚರಿಯಾಗಿಯ ಭಾಗವಾಗಿದೆ. ಚಹಾ ಎಲೆಗಳಿಂದ ತಯಾರಿಸಲ್ಪಡುವ ಈ ಪಾನೀಯದಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಹಲವು ಪೋಷಕಾಂಶಗಳು ಇರುತ್ತದೆ. ಇವು ದೇಹಕ್ಕೆ ಚೈತನ್ಯ ಮತ್ತು ಶಕ್ತಿಯನ್ನು ನೀಡುತ್ತದೆ ಆದರೆ, ಈಗ ಮಾರುಕಟ್ಟೆಯಲ್ಲಿ ಒಂದು ವಿಶಿಷ್ಟ ಪಾನೀಯ ಬರಲು ಸಿದ್ಧವಾಗಿದೆ.

ಹೌದು, ಆರೋಗ್ಯ, ಸೌಂದರ್ಯ ಜತೆಗೆ ಮನಶಾಂತಿಯನ್ನು ನೀಡುವ ಒಂದು ವಿಶಿಷ್ಟ ಪಾನೀಯ ಈಗ ಮಾರುಕಟ್ಟೆಗೆ ಬರಲು ಸಿದ್ಧವಾಗಿದೆ. ಅದು ಯಾವ ಪಾನೀಯ ಅಂದರೆ, ರಾಷ್ಟ್ರ ಪುಷ್ಪವಾದ ಕಲಮದಿಂದ ತಯಾರಿಸಲಾದ ಚಹಾ. ಚಹಾ ಅಂದರೆ ಇದು ಸಾಮಾನ್ಯ ಚಹಾ ಅಂದುಕೊಂಡಬೇಡಿ. ಇದು ಕೇವಲ ಚಹಾ ಅಲ್ಲ, ಔಷಧೀಯ ಗುಣಗಳಿಂದ ತುಂಬಿರುವ ಚಹಾ ಆಗಿದೆ.

ಏನು ಇದರ ವಿಶಿಷ್ಟತೆ ಅಂದರೆ, ನೀವು ಯಾರದೋ ಮಾತಿನಿಂದ ಬಿಪಿ ಹೆಚ್ಚಿಸಿಕೊಂಡರೆ, ನಿಮ್ಮ ರಕ್ತದೊತ್ತಡವನ್ನು ತಕ್ಷಣವೇ ನಿಯಂತ್ರಣ ಮಾಡಿ, ನಿಮ್ಮನ್ನು ಸಮಾಧಾನಪಡಿಸುತ್ತದೆ. ಸೌಂದರ್ಯ ಹೆಚ್ಚಿಸಿಕೊಳ್ಳಲು ಅಥವಾ ಸುಂದರವಾಗಿ ಕಾಣಲು ಪ್ರತಿಯೊಬ್ಬರು ನೂರೆಂಟು ಸಾಹಸವನ್ನು ಮಾಡುತಿರುತ್ತಾರೆ ಆದರೆ, ಈ ಪಾನೀಯ ನಿಮ್ಮ ಚರ್ಮದ ಆರೈಕೆ ಮಾಡಿ ಸೌಂದರ್ಯ ಹೆಚ್ಚಿಸುವುದಷ್ಟೇ ಅಲ್ಲದೆ ಮಾನಸಿಕ ಆರೋಗ್ಯ ಸುಧಾರಣೆ ಮಾಡಿ ಮನಸ್ಸಿಗೆ ನೆಮ್ಮದಿಯನ್ನು ಸಹ ನೀಡುತ್ತದೆ.

ಈ ಪಾನೀಯವು ಈಗ ಸಂಶೋಧನಾ ಪ್ರಯೋಗಾಲದಿಂದ ನಿಮ್ಮ ಚಹಾ ಕಪ್​ಗೆ ಬರುತ್ತಿದೆ. ಸಮಾನ್ಯವಾಗಿ ಚಹಾ ಮಾಡಲು ಟೀ ಪೌಡರ್ ಅನ್ನು ಎಲ್ಲರು ಬಳಸುತ್ತೇವೆ ಆದರೆ, ಈಗ ಟೀ ಪೌಡರ್ ಬದಲಿಗೆ ಕಮಲದ ಎಲೆಗಳನ್ನು ಬಳಸಲಾಗುತ್ತದೆ. ಇದರಲ್ಲಿ ಪ್ರಕೃತಿಯ ಶಕ್ತಿಯಿದೆ. ಕಮಲದಲ್ಲಿ ಇರುವ ಆ್ಯಂಟಿಆಕ್ಸಿಡೆಂಟ್​ಗಳು ದೇಹದ ಹೈಡ್ರೇಷನ್ ಕಾಪಾಡಲು ಸಹಾಯಕವಾಗಲಿದೆ ಎಂದು ಸಂಶೋಧಕರು ಹೇಳಿದ್ದಾರೆ.

ಇದರಲ್ಲಿ ಬಳಕೆಯಾಗಿರುವ ಗಿಡಮೂಲಿಕೆಗಳನ್ನು ಬೋಟಾನಿಕಲ್ ಗಾರ್ಡನ್​ನಿಂದ ಸಂಗ್ರಹಿಸಿ ಪುಡಿ ಮಾಡಿದ್ದು, ಅದನ್ನು ಒಣಗಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಲಾಗಿದೆ. ಈ ಎಲೆಗಳನ್ನು ಮತ್ತು ಹೂವುಗಳನ್ನು ಪುಡಿ ಮಾಡಿ ಟೀ ಬ್ಯಾಗ್ ನಲ್ಲಿ ಪ್ಯಾಕ್ ಮಾಡಲಾಗುತ್ತದೆ. ನಂತರ ಕಮಲದ ಚಹಾ ತಯಾರಿಸಲು ಈ ಬ್ಯಾಗ್ ನ್ನು ಕುದಿಯುವ ನೀರಿನಲ್ಲಿ 1 ರಿಂದ 2 ನಿಮಿಷ ನೆನೆಸಿದರೆ ಸಾಕು. ಸಕ್ಕರೆ ಅಥವಾ ಹಾಲು ಸೇರಿಸುವ ಅಗತ್ಯ ಇಲ್ಲದೆ ಚಹಾ ರೇಡಿ ಆಗುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಜನರು ಚಹಾ ಆಥವಾ ಕಾಫೀ ಕುಡಿಯುತ್ತಾರೆ ಇದರಲ್ಲಿ ಕೆಫೀನ್ ಇರುತ್ತದೆ. ಇದನ್ನು ನಿರಂತರ ಸೇವಿಸಿದರೆ ಆತಂಕ ಹಾಗೂ ಇತರ ಅರೋಗ್ಯ ಸಮಸ್ಯೆಗಳು ಉಂಟಾಗುತ್ತದೆ. ಇದಕ್ಕೆ ಈ ಹೊಸ ಕಮಲದ ಹೂವುಗಳಿಂದ ತಯಾರಿಸಲ್ಪಟ ಪಾನೀಯ ಪರಿಹಾರವನ್ನು ಒದಗಿಸಲಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಹಾಗೆಯೇ ಇದು ಮಧುಮೇಹಿಗಳಿಗೂ ಸ್ನೇಹಿಯಾಗಲಿದೆ. ಏಕೆಂದರೆ ಇದರಲ್ಲಿ ಮಖ್ಯ ಪದಾರ್ಥವಾದ ಕಮಲದ ಜತೆಗೆ ತುಳಸಿ, ಸ್ಟೀವಿಯಾ ಹಾಗೂ ಶಂಕಪುಷ್ಪ ಸೇರಿದಂತೆ ಸುಮಾರು ಎಂಟು ವಿಧದ ಗಿಡಗಳ ಎಲೆಗಳನ್ನು ಹಾಗೂ ಹೂವುಗಳನ್ನು ಇದರಲ್ಲಿ ಬಳಕೆ ಮಾಡಲಾಗಿದೆ. ಸಕ್ಕರೆನಾಶಕ ಎಂದು ಕರೆಯಲ್ಪಡುವ ಸ್ಟೀವಿಯಾ ಮಧುಮೇಹಿಗಳಿಗೂ ಸುರಕ್ಷಿತವಾಗಿದೆ. ಅತ್ಯಾಧುನಿಕ ತಂತ್ರಜ್ಞಾನದಿಂದ ಒಣಗಿಸಿದ ಕಾರಣದಿಂದ ಅದರ ವಾಸನೆ ಹೆಚ್ಚು ಕಾಲ ಉಳಿಯುತ್ತದೆ. ಇದರಲ್ಲಿ ಯಾವುದೇ ರೀತಿಯ ರಾಸಾಯನಿಕ ಪದಾರ್ಥಗಳನ್ನು ಬಳಸಲಾಗಿಲ್ಲಾ ಎಂದು ಸಂಶೋಧಕರು ಹೇಳಿದ್ದಾರೆ. ಆದ್ದರಿಂದ ಹಲವಾರು ರಾಸಾಯನಿಕ ಬಳಕೆಯ ಪಾನೀಯಗಳನ್ನು ಕುಡುಯುವ ಬದಲಿಗೆ ಇಂತಹ ಪಾನೀಯ ಸೇವಿಸಿ ಆರೋಗ್ಯ ಸುಧಾರಿಸಿಕೊಳ್ಳಿ. (ಏಜೆನ್ಸೀಸ್)