ನವದೆಹಲಿ: ಕೇವಲ 20,000 ರೂ. ಬಜೆಟ್ನೊಳಗೆ ಖರೀದಿಸಬಹುದಾದ ಭಾರತದ ಟಾಪ್ 5 5G ಆಂಡ್ರಾಯ್ಡ್ 13 ಸ್ಮಾರ್ಟ್ಫೋನ್ಗಳ ಬಗ್ಗೆ ಇಲ್ಲಿದೆ ಮಾಹಿತಿ ಅನುಸರಿಸಿ.
ಇದನ್ನೂ ಓದಿ: 40% ಕಮಿಷನ್ ಸೇರಿದಂತೆ ಬಿಜೆಪಿ ಅವಧಿಯ ಎಲ್ಲ ಭ್ರಷ್ಟಾಚಾರಗಳ ಕುರಿತು ಇಲಾಖಾವಾರು ತನಿಖೆ: ಸಚಿವ ಎಂ.ಸಿ. ಸುಧಾಕರ್
iQoo Z7s 5G: ಭಾರತದ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್ಫೋನ್ (Smartphone) ಬೆಲೆ 18,999 ರೂ.ಗಳು ಇದ್ದು, ಕ್ವಾಲ್ಕಮ್ ಸ್ನಾಪ್ಡ್ರಾಗನ್(Qualcomm Snapdragon) 695 ಪ್ರೊಸಸರ್ ಅನ್ನು ಅಳವಡಿಸಲಾಗಿದೆ. ಈ ಫೋನ್ ಗ್ರಾಹಕರಿಗೆ ಕೈಗೆಟುಕವ ದರದಲ್ಲಿ ಲಭ್ಯವಿದೆ.
ಓಪೋ A78 5G: ಭಾರತದ ಮಾರುಕಟ್ಟೆಯಲ್ಲಿ ಈ ಮಾಡೆಲ್ ಬೆಲೆ 18,410 ರೂ. ಇದ್ದು, 5,000mAh ಬ್ಯಾಟರಿ ಮತ್ತು 13 ಮೆಗಾ ಪಿಕ್ಸಲ್ ಬ್ಯಾಕ್ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ ಕೂಡ ಗ್ರಾಹಕರಿಗೆ ಅಗ್ಗದ ಬೆಲೆಯಲ್ಲಿ ದೊರೆಯುತ್ತದೆ.
ಟೆಕ್ನೋ ಸ್ಪಾರ್ಕ್ 10 5G: ಈ ಫೋನ್‌ನ ಬೆಲೆ ಕೇವಲ 15,000 ರೂ. ಇದ್ದು, ಕಡಿಮೆ ದರದಲ್ಲಿ ಸ್ಮಾರ್ಟ್ಫೋನ್ ಖರೀದಿ ಮಾಡಲು ಯೋಚಿಸುತ್ತಿರುವವರಿಗೆ ಈ ಫೋನ್ ಹೇಳಿ ಮಾಡಿಸಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ A14 5G: ಸ್ಯಾಮ್ಸಂಗ್(Samsung) ಸ್ಮಾರ್ಟ್ಪೋನ್ಗಳಲ್ಲಿ ವಿವಿಧ ದರದಲ್ಲಿ ಲಭ್ಯವಿರುವ ಫೋನ್ಗಳ ಪೈಕಿ ಗ್ಯಾಲಕ್ಸಿ A14 5G 18,999 ರೂ. ಬೆಲೆಗೆ ಲಭ್ಯವಿದೆ. ಇದರಲ್ಲಿ ಟ್ರಿಪಲ್ ಬ್ಯಾಕ್ ಕ್ಯಾಮೆರಾ ಸೆಟಪ್ ಇದ್ದು, 5000mAh ಬ್ಯಾಟರಿಯನ್ನು ಅಳವಡಿಸಲಾಗಿದೆ.
ರಿಯಲ್ ಮಿ 10 ಪ್ರೋ 5G: ಈ ಸ್ಮಾರ್ಟ್ಫೋನ್ನಲ್ಲಿ ಕ್ವಾಲ್ಕಮ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್ ಅಳವಡಿಸಲಾಗಿದ್ದು, ಮಾರುಕಟ್ಟೆಯಲ್ಲಿ ಗ್ರಾಹಕರಿಗೆ ಕೇವಲ 13,990 ರೂ.ಗೆ ದೊರೆಯುತ್ತದೆ.