ಬಂಟ್ವಾಳ: ಮತ ಯಾವುದೇ ಇರಲಿ ಮನುಷ್ಯ ಒಳ್ಳೆಯವನಾಗಿರಬೇಕು ಎಂಬ ಅಮರ ತತ್ವಗಳನ್ನು ಅನುಷ್ಠಾನಗೊಳಿಸಿ, ವಿಶ್ವ ಮಾನವ ಧರ್ಮದ ಹರಿಕಾರರಾಗಿ ಅವತರಿಸಿದ ಬ್ರಹ್ಮಶ್ರೀ ನಾರಾಯಣಗುರುಗಳು ಎಲ್ಲರಿಗೂ ಪ್ರಾತಃ ಸ್ಮರಣೀಯರು ಎಂದು ಧನುಷ್ ಮಧ್ವ ಹೇಳಿದರು.
ಯುವವಾಹಿನಿ ಬಂಟ್ವಾಳ ಘಟಕ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಬಿ.ಸಿ.ರೋಡ್ ಮನೆಯಲ್ಲಿ ಗುರುತತ್ವವಾಹಿನಿ 41 ಮಾಲಿಕೆಯಲ್ಲಿ ಗುರು ಸಂದೇಶ ನೀಡಿದರು.
ಯುವವಾಹಿನಿ ಬಂಟ್ವಾಳ ಘಟಕ ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ, ಕೋಶಾಧಿಕಾರಿ ಗೀತಾ ಜಗದೀಶ್, ನಿರ್ದೇಶಕರಾದ ಮಹೇಶ್ ಬೊಳ್ಳಾಯಿ, ಕಿರಣ್ ಪೂಂಜರಕೋಡಿ, ಸಂಘಟನಾ ಕಾರ್ಯದರ್ಶಿ ಉದಯ್ ಮೇನಾಡ್, ಹರಿಣಾಕ್ಷಿ ನವೀಶ್, ಮಾಜಿ ಅಧ್ಯಕ್ಷರಾದ ನಾಗೇಶ್ ಪೊನ್ನೋಡಿ, ಪ್ರೇಮನಾಥ್ ಕರ್ಕೇರ, ಶಿವಾನಂದ ಎಂ., ರಾಜೇಶ್ ಸುವರ್ಣ, ಹರೀಶ್ ಎಸ್.ಕೊಟ್ಯಾನ್, ಸದಸ್ಯರಾದ ನಾಗೇಶ್ ಏಲಬೆ, ಹರೀಶ್ ಅಜೆಕಲ, ವಿಘ್ನೇಶ್ ಬೊಳ್ಳಾಯಿ, ಯಶೋಧರ ಕಡಂಬಲ್ಕೆ, ಯತೀಶ್ ಬೊಳ್ಳಾಯಿ, ಸುಲತಾ ಸಾಲ್ಯಾನ್, ಸುನೀತಾ ನಿತಿನ್, ಸಚಿನ್ ಕೊಡ್ಮಾಣ್, ಅಜಯ್ ನರಿಕೊಂಬು, ಹರೀಶ್ ಅಜೆಕಲ, ರಾಜೇಶ್ ಪೂಂಜರಕೋಡಿ, ಜಗದೀಶ್ ಕಲ್ಲಡ್ಕ, ಪ್ರಶಾಂತ್ ಏರಮಲೆ ಮತ್ತಿತರರಿದ್ದರು.
ಭಜನಾ ಸಂಕೀರ್ತನೆ ನಡೆಯಿತು. ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ವಂದಿಸಿದರು.