ಜಿಲ್ಲೆ

ಮೂತ್ರ ವಿಸರ್ಜನೆಗೆ ಹೋಗಿ ಪ್ರಾಣ ಕಳೆದುಕೊಂಡ ಯುವಕ; ಕ್ಷಣಮಾತ್ರದಲ್ಲಿ ಸ್ಥಳದಲ್ಲೇ ಸಾವು!

ದಾವಣಗೆರೆ: ಸಾವು ಎಲ್ಲಿ ಹೇಗೆ ಬಂದೀತು ಎಂದು ಹೇಳಲು ಯಾರಿಗೂ ಸಾಧ್ಯವಿಲ್ಲ ಎಂಬುದಕ್ಕೆ ಇದೊಂದು ನಿದರ್ಶನ ಎಂದರೂ ತಪ್ಪಾಗಲಾರದು. ಮೂತ್ರ ವಿಸರ್ಜನೆಗೆ ಎಂದು ಹೋಗಿದ್ದ ಯುವಕನೊಬ್ಬ ಪ್ರಾಣ ಕಳೆದುಕೊಂಡ ಶಾಕಿಂಗ್ ನ್ಯೂಸ್​ ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.

ದಾವಣಗೆರೆ ಜಿಲ್ಲೆಯ ಯಲ್ಲಮ್ಮ ನಗರದ ಕುಂದುವಾಡ ರಸ್ತೆಯ ಬಳಿ ಈ ದುರಂತ ಘಟನೆ ಸಂಭವಿಸಿದೆ. ಭರತ್ ಕಾಲನಿ ನಿವಾಸಿ ಮನೋಜ್‌ ಮಜ್ಜಿಗೆ (23) ಎಂಬ ಯುವಕ ಸಾವಿಗೀಡಾಗಿದ್ದಾನೆ. ದಾವಣಗೆರೆಯಲ್ಲಿ ಸುರಿಯುತ್ತಿದ್ದ ತುಂತುರು ಮಳೆಯಲ್ಲಿ ಇಂಥದ್ದೊಂದು ದುರ್ಘಟನೆ ಸಂಭವಿಸಿದೆ.

ಮನೋಜ್​ ನಿನ್ನೆ ರಾತ್ರಿ ರಸ್ತೆ ಬದಿಯಲ್ಲಿ ಮೂತ್ರ ವಿಸರ್ಜನೆಗೆ ಎಂದು ಹೋಗಿದ್ದಾನೆ. ಆಗ ತುಂತುರು ಮಳೆ ಸುರಿಯುತ್ತಿದ್ದುದರಿಂದ ವಿದ್ಯುತ್​ ಕಂಬ ಗ್ರೌಂಡ್​ ಆಗಿ ಆತ ಸ್ಥಳದಲ್ಲೇ ಸಾವಿಗೀಡಾಗಿದ್ದಾನೆ. ಸ್ಥಳಕ್ಕೆ ಧಾವಿಸಿದ ಪೊಲೀಸರು ಕೂಡಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ. ಬಳಿಕ ಶವವವನ್ನು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಸಾಗಿಸಿದ್ದಾರೆ.