ಜಿಲ್ಲೆ

ದೇವಸ್ಥಾನ ಕಾರ್ಯಗಳಲ್ಲಿ ಯುವಜನತೆ ಭಾಗಿ

ಇಂದಿರಾ ಎನ್ ಕೆ

ವಿಜಯವಾಣಿ ಸುದ್ದಿಜಾಲ ಕೊಕ್ಕರ್ಣೆ

ನಮ್ಮ ಮನೆಯವರ ಮೇಲಿನ ಪ್ರೀತಿ, ನಮ್ಮ ಊರಿನ ಅಭಿಮಾನ ಮುಖ್ಯ. ಯುವ ಜನತೆ ದೇವಸ್ಥಾನದ ಕಾರ್ಯಗಳಲ್ಲಿ ಭಾಗಿಯಾಗಿ ಸನ್ಮಾರ್ಗದಲ್ಲಿ ಮುನ್ನಡೆಯಬೇಕು ಎಂದು ಎನ್.ಆರ್.ದಾಮೋದರ ಶರ್ಮ ಬಾರಕೂರು ಹೇಳಿದರು.

ಕಾಡೂರು ಶ್ರೀ ಅಮ್ಮನವರ ದೇವಸ್ಥಾನ ಬ್ರಹ್ಮಕಲಶೋತ್ಸವದಲ್ಲಿ ಧಾರ್ಮಿಕ ಪ್ರವಚನ ನೀಡಿ, ಹಣ, ಸಂಪತ್ತು ನಶ್ವರವಾಗಿದ್ದು, ಸಾಧ್ಯವಾದಷ್ಟು ನೊಂದವರ ಬಾಳಿಗೆ ಬೆಳಕಾಗಬೇಕು. ದೊಡ್ಡ ದೇವಸ್ಥಾನಕ್ಕಿಂತ ದೊಡ್ಡ ಮನಸ್ಸು ನಮ್ಮದಾಗಲಿ ಎಂದರು.

ಸೂರಾಲು ಅರಮನೆಯ ಸಂತೋಷ್ ಕುಮಾರ್ ಸಿ. ಧಾರ್ಮಿಕ ಸಭೆ ಉದ್ಘಾಟಿಸಿದರು. ಗ್ರಾಪಂ ಅಧ್ಯಕ್ಷ ಜಲಂಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ, ಉದ್ಯಮಿ ದಿನೇಶ್ ಹೆಗ್ಡೆ ಮೊಳಹಳ್ಳಿ, ಡಾ.ಪ್ರದೀಪ್ ಕುಮಾರ್ ಶೆಟ್ಟಿ ಕುಂದಾಪುರ, ಕೊಕ್ಕರ್ಣೆ ಸಿಂಡಿಕೇಟ್ ರೈತರ ಸೇವಾ ಸಹಕಾರಿ ಸಂಘ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮೈರ್ಮಾಡಿ, ಜಿಪಂ ಮಾಜಿ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಉದ್ಯಮಿಗಳಾದ ಎಂ.ಎಚ್.ರಘುರಾಮ್ ಮರಕಾಲ, ಗುಣಕರ ಕೆ, ಅಭಯ ಸೇವಾ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷ ಎಂ.ಬಿ.ಉಮೇಶ್ ಶೆಟ್ಟಿ, ತಾಪಂ ಮಾಜಿ ಸದಸ್ಯ ಭುಜಂಗ ಶೆಟ್ಟಿ, ಸದಾಶಿವ ಹೆಗ್ಡೆ ಬೈಲುಮನೆ, ಎನ್.ಕರುಣಾಕರ ಶೆಟ್ಟಿ ಕಜ್ಕೆ, ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಸುರೇಶ್ ಶೆಟ್ಟಿ ತಡಾಲು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮಹೇಶ್ ಹೆಗ್ಡೆ ಮೊಳಹಳ್ಳಿ, ಕೋಶಾಧಿಕಾರಿ ಗಣೇಶ್ ಆಚಾರ್ ಹೆಗ್ಗಡು, ತಾಂತ್ರಿಕ ಸಲಹೆಗಾರ ಆಶಿತ್ ಶೆಟ್ಟಿ ಬೈಲುಮನೆ ಹಲವರು ಉಪಸ್ಥಿತರಿದ್ದರು. ಶೇಖರ ಹೆಗ್ಡೆ ಕೂರಾಡಿ ಸ್ವಾಗತಿಸಿದರು. ಅರುಣ್ ಶೆಟ್ಟಿ ಹೊರ್ಲಾಳಿ, ಓಂಶ್ರೀ ರಾಘವೇಂದ್ರ ನಾಯಕ್ ಕೊಕ್ಕರ್ಣೆ ಕಾರ್ಯಕ್ರಮ ನಿರೂಪಿಸಿದರು.

ಬ್ರಹ್ಮಕಲಶೋತ್ಸವ ಸಂಪನ್ನ

ಕಾಡೂರು ಶ್ರೀ ಅಮ್ಮನವರ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಸಂಪನ್ನಗೊಂಡಿತು. ಬೆಳಗ್ಗೆ ಲಲಿತಾ ಸಹಸ್ರನಾಮ, ಕದಳೀಯಾಗ, ದಾನಗಳು, ಕನ್ನಿಕಾ ಪರಮೇಶ್ವರಿ ಪೂಜೆ, ಮಧ್ಯಾಹ್ನ ಅನ್ನಸಂತರ್ಪಣೆ, ಭಜನೆ, ಸಂಜೆ ರಂಗಪೂಜೆ ನೆರವೇರಿತು. ಸಾವಿರಾರು ಭಕ್ತರು ಭಾಗವಹಿಸಿದರು.