ಮಹಿಳೆ ಶಿಕ್ಷಿತಳಾದರೆ ದೇಶ ಸದೃಢ

edu
Published on

ಕುಂದಾಪುರ: ಸ್ತ್ರೀ ಮನೆಯ, ಕುಟುಂಬ, ಸಮಾಜದ ಅಲಂಕಾರ. ಮಹಿಳೆ ಶಿಕ್ಷಣ ಪಡೆದರೆ ದೇಶ ಸದೃಢಗೊಳ್ಳುತ್ತದೆ ಎಂದು ಕುಂದಾಪುರ ಹೋಲಿ ರೋಜರಿ ಚರ್ಚ್‌ನ ಪ್ರಧಾನ ಧರ್ಮಗುರು, ಸ್ತ್ರೀ ಸಂಘಟನೆ ಆಧ್ಯಾತ್ಮಿಕ ನಿರ್ದೇಶಕ ಪಾವ್ಲ್ ರೇಗೊ ಹೇಳಿದರು.

ರೋಜರಿ ಚರ್ಚ್‌ನ ಕೆಥೊಲಿಕ್ ಸ್ತ್ರೀ ಸಂಘಟನೆ ಮುಂದಾಳತ್ವದಲ್ಲಿ ಚರ್ಚ್ ಸಭಾಭವನದಲ್ಲಿ ಸ್ವಸಹಾಯ ಗುಂಪುಗಳ ಸಹಕಾರದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದರು.

ಸಂತ ಮೇರಿ ಪಿಯು ಕಾಲೇಜು ಪ್ರಾಧ್ಯಾಪಕಿ ಶರ್ಮಿಳಾ ಮಿನೇಜಸ್ ಸ್ತ್ರೀ ಸಬಲೀಕರಣ ಬಗ್ಗೆ ಮಾತನಾಡಿದರು. ಸಂತ ಜೋಸೆಫ್ ಕಾನ್ವೆಂಟಿನ ಮುಖ್ಯಸ್ಥೆ ಸುಪ್ರಿಯಾ, ಸಂಘಟನೆ ಸಚೇತಕಿ ಫ್ಲೆವಿ, ಪಾಲನಾ ಮಂಡಳಿ ಉಪಾಧ್ಯಕ್ಷೆ ಶಾಲೆಟ್ ರೆಬೆಲ್ಲೊ, ಕಾರ್ಯದರ್ಶಿ ಆಶಾ ಕರ್ವಾಲ್ಲೊ, ಆಯೋಗಗಳ ಸಂಚಾಲಕಿ ಪ್ರೇಮಾ ಡಿಕುನ್ಹಾ, ಕುಂದಾಪುರ ವಲಯ ಕೆಥೊಲಿಕ್ ಸಂಘಟನೆ ಅಧ್ಯಕ್ಷೆ ಪ್ರೀತಿ ಫರ್ನಾಂಡಿಸ್ ಉಪಸ್ಥಿತರಿದ್ದರು. ಸ್ತ್ರೀ ಸಂಘಟನೆ ಅಧ್ಯಕ್ಷೆ ಜೂಲಿಯೆಟ್ ಪಾಯ್ಸ ಸ್ವಾಗತಿಸಿದರು. ಸುನೀತಾ ಡಿಲೀಮಾ ಮತ್ತು ವಿನಯಾ ಡಿಕೋಸ್ತಾ ಕಾರ್ಯಕ್ರಮ ನಿರೂಪಿದರು. ಸಹಕಾರ್ಯದರ್ಶಿ ವಿಕ್ಟೋರಿಯಾ ಡಿಸೋಜ ಪರಿಚಯಿಸಿದರು. ಕಾರ್ಯದರ್ಶಿ ಫೆಲ್ಸಿಯಾನ ಡಿಸೋಜ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net