ಜಿಲ್ಲೆ

ಬಸ್​ನಲ್ಲಿ ಮಲಗಿದ್ದಲ್ಲೇ ಪ್ರಾಣಬಿಟ್ಟ ಯುವಕ! ಮಾರ್ಗಮಧ್ಯೆ ಏನಾಯ್ತು?

arunakunigal

ಬಾಗಲಕೋಟೆ: ಊರಿಗೆ ಹೊರಟಿದ್ದ ಪ್ರಯಾಣಿಕರೊಬ್ಬರು ಬಸ್​ನಲ್ಲೇ ಮೃತಪಟ್ಟಿದ್ದಾನೆ.

ಇಳಕಲ್ ತಾಲೂಕಿನ ಕರಡಿ ಗ್ರಾಮದ ಸುನೀಲ ಹನಮಗೌಡ ಪಾಟೀಲ(25) ಮೃತ. ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಈತ ಗುರುವಾರ ಮಂಗಳೂರು-ಕರಡಿ ಮಾರ್ಗದ ಸಾರಿಗೆ ಬಸ್​ನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದ. ಇದನ್ನೂ ಓದಿರಿ ಪರಸ್ತ್ರೀ ಜತೆ ಮೂರು ಮಕ್ಕಳ ತಂದೆಗೆ ಲವ್ವಿಡವ್ವಿ! ರೆಡ್​ಹ್ಯಾಂಡ್​ ಆಗಿ ಸಿಕ್ಕಿಬಿದ್ದವರ ಕಥೆ ಏನಾಯ್ತು?

ಇಳಕಲ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದಾಗ ಯುವಕ ಮೃತಪಟ್ಟಿರುವುದು ಗೊತ್ತಾಗಿದೆ. ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಪಸ್​ ಊರಿಗೆ ಹೋಗುತ್ತಿದ್ದ ಎನ್ನಲಾಗಿದೆ. ಹೆತ್ತವರ ಮಡಿಲು ಸೇರುವ ಮುನ್ನವೇ ಮಾರ್ಗದಲ್ಲೇ ಜವರಾಯ ಯುವಕನ ಪ್ರಾಣ ಹೊತ್ತೊಯ್ದಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.

ಸ್ಥಳಕ್ಕೆ ಭೇಟಿ ನೀಡಿದ ಇಳಕಲ್ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.