ಜಿಲ್ಲೆ

ಯೋಗೀಶ್ ​ಗೌಡ ಹತ್ಯೆ​: ವಿನಯ್​ ಕುಲಕರ್ಣಿ ಮೇಲಿನ ಸಾಕ್ಷ್ಯನಾಶ ಕೇಸ್ ಬೆಂಗಳೂರಿಗೆ ಶಿಫ್ಟ್​

ಧಾರವಾಡ: ಧಾರವಾಡ ಜಿಲ್ಲಾ ಪಂಚಾಯಿತಿ ಸದಸ್ಯ ಯೋಗೀಶ್ ಗೌಡರ ಹತ್ಯೆ ಹಿನ್ನೆಲೆ ಮಾಜಿ ಸಚಿವ ವಿನಯ್​ ಕುಲಕರ್ಣಿ ಮೇಲಿನ ಸಾಕ್ಷ್ಯನಾಶ ಕೇಸ್ ಅನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್‌ಗೆ ಶಿಫ್ಟ್ ಮಾಡಲಾಗಿದೆ.

ಧಾರವಾಡದ ಜೆಎಂಎಫ್‌ಸಿ ನ್ಯಾಯಾಲಯವು ಸೋಮವಾರ(ಫೆ.15)ಆದೇಶ ಹೊರಡಿಸಿದೆ. ಯೋಗೀಶಗೌಡ ಹತ್ಯೆ ಕೇಸ್​ನಲ್ಲಿ ಕಳೆದ ನವೆಂಬರ್​ನಲ್ಲಿ ಸಿಬಿಐ ಪೊಲೀಸರಿಂದ ವಿನಯ್ ಕುಲಕರ್ಣಿಯನ್ನು ಬಂಧಿಸಲಾಗಿದ್ದು, ಸದ್ಯ ಮಾಜಿ ಸಚಿವರು ಹಿಂಡಲಗಾ ಜೈಲಿನಲ್ಲಿದ್ದಾರೆ.

2016ರ ಜೂನ್ 15ರಂದು ತನ್ನದೇ ಮಾಲೀಕತ್ವದ ಉದಯ್ ಜಿಮ್​ನಲ್ಲಿ ಯೋಗೀಶ್​ ಗೌಡ ಬರ್ಬರವಾಗಿ ಹತ್ಯೆಯಾಗಿದ್ದರು. ಯೋಗೀಶ್ ಗೌಡರ ಕೊಲೆ ಕೇಸ್​ನಲ್ಲಿ ಕೈವಾಡವಿರುವ ಮತ್ತು ಪ್ರಭಾವ ಬಳಸಿ ಕೇಸು ಮುಚ್ಚಿ ಹಾಕಿರುವ ಆರೋಪವನ್ನು ವಿನಯ್​ ಕುಲಕರ್ಣಿ ಎದುರಿಸುತ್ತಿದ್ದಾರೆ.