More

    ಬಡವರ ಅಕ್ಕಿಗೆ ‘ಕತ್ತ’ರಿ ಹಾಕೋಕೆ ಹೋದ ಸಚಿವ ಕತ್ತಿಗೆ ಸಿಎಂ ಯಡಿಯೂರಪ್ಪ ಕ್ಲಾಸ್​

    ಬೆಂಗಳೂರು: ಬೈಕ್‌, ಫ್ರಿಡ್ಜ್‌, ಟಿವಿ ಇದ್ದವರಿಗೆ ಬಿಪಿಎಲ್‌ ಕಾರ್ಡ್‌ ರದ್ದಾಗಲಿದೆ ಎಂದ ಮರುದಿನವೇ ಆ ಹೇಳಿಕೆಯನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸಚಿವ ಉಮೇಶ್ ಕತ್ತಿ ವಾಪಸ್​ ಪಡೆದಿದ್ದಾರೆ.

    ಎರಡೂವರೆ ಸಾವಿರ ಹಣ ಕೊಟ್ರೆ ಟಿವಿ ಸಿಗುತ್ತೆ. ಜನರಿಗೆ ಟಿವಿ, ಬೈಕ್ ಬೇಸಿಕ್ ಅವಶ್ಯಕತೆ. ಇವುಗಳು ಇಲ್ಲವಾದರೆ ನಾವೇ ಜನರಿಗೆ ಕೊಡಬೇಕಾದ ಪರಿಸ್ಥಿತಿ ಇದೆ. ಅಂತಹದ್ದರಲ್ಲಿ ಇಂತಹ ನಿರ್ಧಾರ ಸರಿಯಲ್ಲ ಎಂದು ಉಮೇಶ್‌ ಕತ್ತಿ ವಿರುದ್ಧ ಸ್ವಪಕ್ಷ ಮತ್ತು ವಿಪಕ್ಷಗಳು ಆಕ್ರೋಶ ಹೊರಹಾಕಿದ ಬೆನ್ನಲ್ಲೇ ಸಿಎಂ ಯಡಿಯೂರಪ್ಪ ಅವರು ಕತ್ತಿಗೆ ಕರೆ ಮಾಡಿದರು. ಯಾಕೆ ಈ ರೀತಿ ಹೇಳಿಕೆ ಕೊಡ್ತೀರಾ? ಸರ್ಕಾರಕ್ಕೆ ಮುಜುಗರ ತರುವ ಕೆಲಸ ಮಾಡಬೇಡಿ. ಅನಗತ್ಯವಾಗಿ‌ ವಿಪಕ್ಷನಾಯಕರಿಗೆ ಅಸ್ತ್ರ ಆದರೆ, ಸರ್ಕಾರ ಮತ್ತು ಪಕ್ಷ ಡ್ಯಾಮೇಜ್ ತರಬೇಡಿ ಎಂದು ಕ್ಲಾಸ್​ ತೆಗೆದುಕೊಂಡಿದ್ದಾರೆ. ಇದನ್ನೂ ಓದಿರಿ ಬಿಪಿಎಲ್​ ಕಾರ್ಡ್​ದಾರರೇ, ಅನ್ನಭಾಗ್ಯ ಯೋಜನೆ ಸ್ವರೂಪ ಬದಲಾಗ್ತಿದೆ.. ಇನ್ಮುಂದೆ 2 ಕೆಜಿ ಅಕ್ಕಿ ಕೊಡ್ತಾರೆ…

    ಇದರ ಬೆನ್ನಲ್ಲೇ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಉಮೇಶ್​ ಕತ್ತಿ, ನಾನು ಸಚಿವನಾದ ಬಳಿಕ ಯಾವುದೇ ತಿದ್ದುಪಡಿ ಮಾಡಿಲ್ಲ. ಬಿಪಿಎಲ್ ಮಾನದಂಡಗಳಲ್ಲಿ ಬದಲಾವಣೆ ಇಲ್ಲ. ಈ ಹಿಂದೆ ಇದ್ದ ಮಾನದಂಡಗಳನ್ನೇ ಮುಂದುವರಿಸಲಾಗುತ್ತದೆ ಎಂದಿದ್ದಾರೆ.

    ಬಿಪಿಎಲ್ ಕಾರ್ಡ್ ಕುರಿತಂತೆ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ವಿಷಯಕ್ಕೆ ಸಂಬಂಧಿಸಿದಂತೆ ಸಮೀಕರಣ ನೀಡುತ್ತಿದ್ದೇನೆ. ಸರ್ಕಾರದ ಆದೇಶಗಳ ಮೂಲಕ ಬಿಪಿಎಲ್ ಕುಟುಂಬಗಳನ್ನು ಸಾರ್ವಜನಿಕ ಪಡಿತರ ವ್ಯವಸ್ಥೆಗೆ ಒಳಪಡಿಸುವ ಉದ್ದೇಶದಿಂದ ಈಗಾಗಲೇ ಹಿಂದಿನ ಸರ್ಕಾರಗಳು ಆದೇಶಗಳನ್ನು ಹೊರಡಿಸಿರುತ್ತವೆ. ಪ್ರಸ್ತುತ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರವಾಗಲೀ ಅಥವಾ ನಾನು ಸಚಿವನಾಗಿ ಅಧಿಕಾರ ವಹಿಸಿಕೊಂಡ ನಂತರವಾಗಲಿ ಈ ಆದೇಶಗಳಲ್ಲಿ ಯಾವುದೇ ತಿದ್ದುಪಡಿ ಮಾಡಿರುವುದಿಲ್ಲ ಎಂದು ಹೇಳುವ ಮೂಲಕ ಬಿಪಿಎಲ್ ಕಾರ್ಡುದಾರರ ಮಾನದಂಡ ಬದಲಾವಣೆ ಸಂಬಂಧ ಭುಗಿಲೆದ್ದಿದ್ದ ವಿವಾದಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.

    ಉಮೇಶ್​ ಕತ್ತಿಗೆ ಹಿಗ್ಗಾಮುಗ್ಗಾ ತರಾಟೆ! ಟಿವಿ, ಬೈಕ್‌, ಫ್ರಿಡ್ಜ್‌ ಉಳ್ಳವರು ಓದಲೇಬೇಕಾದ ಸುದ್ದಿ ಇದು

    ಬೇಡ ಬೇಡ ಅಂದ್ರೂ ಸಾವಿನ ಮನೆಯ ಕದ ತಟ್ಟಿದ 15ರ ಬಾಲಕ! ಕಳೆದ ವಾರವೇ ಪೊಲೀಸರು ಎಚ್ಚರಿಸಿದ್ದರು

    ಮಗಳ ಮದ್ವೆ ಸ್ಪೆಷಲ್: ಕ್ಷೇತ್ರದ ಜನ್ರಿಗೆ ದುಬಾರಿ ಗಿಫ್ಟ್​ ಕೊಟ್ಟ ಡಿಕೆಶಿ! ಪ್ರತಿ ಮನೆ-ಮನೆಗೂ ತಲುಪಿಸಿದ್ರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts