ಕುಂದಾಪುರದ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ಗ್ರಾಮೀಣ ಕ್ರೀಡಾಕೂಟವನ್ನು ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಉದ್ಘಾಟಿಸಿದರು. ಕಲಾಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ, ಹಟ್ಟಿಯಂಗಡಿ ಲೋಕನಾಥೇಶ್ವರ ದೇವಸ್ಥಾನ ಧರ್ಮದರ್ಶಿ ಸನತ್‌ಕುಮಾರ್ ರೈ ಮೊದಲಾದವರಿದ್ದರು. 
ಜಿಲ್ಲೆ

ಬಾಲ್ಯದ ನೆನಪಿಗೆ ಗ್ರಾಮೀಣ ಸೊಗಡಿನ ಆಟ: ಶಾಸಕ ಕೊಡ್ಗಿ ಶ್ಲಾಘನೆ

ಸೌಮ್ಯ ಆರ್

ಗಂಗೊಳ್ಳಿ: ಕುಂದಾಪ್ರ ಕನ್ನಡದ ಹೆಸರಿನಲ್ಲಿ ಕಲಾಕ್ಷೇತ್ರ ಸಂಸ್ಥೆ ಗ್ರಾಮೀಣ ಸೊಗಡಿನ ಆಟಗಳ ಕಂಪನ್ನು ನೆನಪಿನಲ್ಲಿ ಉಳಿಯುವಂತೆ ಮಾಡುವ ಪ್ರಯತ್ನಕ್ಕೆ ಕೈ ಹಾಕಿರುವುದು ಶ್ಲಾಘನೀಯ ಎಂದು ಶಾಸಕ ಕಿರಣ್ ಕುಮಾರ್ ಕೊಡ್ಗಿ ಹೇಳಿದರು.

ಕುಂದಾಪುರದ ಬೋರ್ಡ್ ಹೈಸ್ಕೂಲ್ ಮೈದಾನದಲ್ಲಿ ವಿಶ್ವ ಕುಂದಾಪ್ರ ಕನ್ನಡ ದಿನ ಅಂಗವಾಗಿ ಕಲಾಕ್ಷೇತ್ರ ಕುಂದಾಪುರ ಟ್ರಸ್ಟ್ ನೇತೃತ್ವದಲ್ಲಿ ಭಾನುವಾರ ಗ್ರಾಮೀಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು.

ಕಲಾಕ್ಷೇತ್ರ ಟ್ರಸ್ಟ್ ಅಧ್ಯಕ್ಷ ಬಿ.ಕಿಶೋರ್ ಕುಮಾರ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ತಹಸೀಲ್ದಾರ್ ಶೋಭಾಲಕ್ಷ್ಮೀ, ಹಟ್ಟಿಯಂಗಡಿ ಲೋಕನಾಥೇಶ್ವರ ದೇವಸ್ಥಾನ ಧರ್ಮದರ್ಶಿ ಸನತ್‌ಕುಮಾರ್ ರೈ, ಸರ್ಕಾರಿ ಜೂನಿಯರ್ ಕಾಲೇಜು ಪ್ರಾಂಶುಪಾಲ ಬಿ.ಜಿ.ರಾಮಕೃಷ್ಣ, ಉಪಪ್ರಾಂಶುಪಾಲ ಕಿರಣ್ ಹೆಗ್ಡೆ, ರಾಘವೇಂದ್ರ ಕುಂದರ್ ಬ್ರಹ್ಮಾವರ, ರಮೇಶ್ ಕುಂದರ್, ಲಯನ್ಸ್ ಕ್ಲಬ್ ಉಪಗವರ್ನರ್ ರಾಜೀವ್ ಕೋಟ್ಯಾನ್, ತಾಲೂಕು ಯುವಜನಸೇವಾ ಕ್ರೀಡಾಧಿಕಾರಿ ಕುಸುಮಾಕರ ಶೆಟ್ಟಿ, ಸರ್ಕಾರಿ ಜೂನಿಯರ್ ಕಾಲೇಜು ಉಪನ್ಯಾಸಕ ಉದಯ ಕುಮಾರ್ ಶೆಟ್ಟಿ ಕಾಳಾವರ, ಕ್ರೀಡಾಪಟು ಪ್ರದೀಪ್‌ಚಂದ್ರ ಶೆಟ್ಟಿ ಉಪಸ್ಥಿತರಿದ್ದರು. ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ ಬೀಜಾಡಿ ಕಾರ್ಯಕ್ರಮ ನಿರ್ವಹಿಸಿ, ಕಲಾಕ್ಷೇತ್ರ ಟ್ರಸ್ಟ್ ರಾಜೇಶ್ ಕಾವೇರಿ ವಂದಿಸಿದರು.

ಉಪ್ಪುಮುಡಿ, ಮನುಷ್ಯರ ಕಂಬಳ

ಮಹಿಳೆಯರಿಗೆ, ಪುರುಷರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ, ತ್ರೋಬಾಲ್, ಚಿನ್ನಿದಾಂಡು, ಬೆನ್ಚೆಂಡು, ಗೋಣಿ ಚೀಲ ಓಟ, ಟಯರ್ ಓಟ, ಉಪ್ಪುಮೂಟೆ, ಗೂಟ ಸುತ್ತಿ ಓಟ, ಉಪ್ಪುಮುಡಿ, ಮನುಷ್ಯರ ಕಂಬಳ, ಲಗೋರಿ, ಚಂಡಾನ್ ಚಂಡು, ಡೊಂಕಾಲು, ಚೆನ್ನೆಮಣೆ, ಗುಡ್ನ, ಗೋಲಿ ಆಟ ನಡೆಯಿತು. ಇದರಲ್ಲಿ ಬ್ರಹ್ಮಾವರ, ಕುಂದಾಪುರ, ಬೆಬಂದೂರು, ಹೆಬ್ರಿ ತಾಲೂಕುಗಳ ಕುಂದಾಪ್ರ ಕನ್ನಡಿಗರಿಗೆ ಸ್ಪರ್ಧೆ ನಡೆಯಿತು.