ಜಿಲ್ಲೆ

ಗ್ರಾಹಕರ ಹಕ್ಕಿನ ಜಾಗೃತಿ ಅವಶ್ಯ: ಹಳೆಯಂಗಡಿಯಲ್ಲಿ ಪ್ರಮೋದ್ ಕುಮಾರ್ ಹೇಳಿಕೆ

ಸೌಮ್ಯ ಆರ್

ಹಳೆಯಂಗಡಿ: ಗ್ರಾಹಕರ ಹಕ್ಕುಗಳನ್ನು ಎಂದಿಗೂ ಕಸಿಯಲು ಸಾಧ್ಯವಿಲ್ಲ. ಜನಸಾಮಾನ್ಯರಿಗೆ ಗ್ರಾಹಕರಾಗಿರುವ ತಮ್ಮ ಹಕ್ಕನ್ನು ತಿಳಿದುಕೊಳ್ಳಲು ಜಾಗೃತಿ ಮೂಡಿಸುವ ಕೆಲಸ ನಡೆಯಬೇಕು ಎಂದು ಪೂನಾ ಭರಮನ್ಸ್ ಕಾರ್ಯನಿರ್ವಹಕ ಇಂಜಿನಿಯರ್ ಪ್ರಮೋದ್ ಕುಮಾರ್ ಹೇಳಿದರು.

ಹಳೆಯಂಗಡಿ ಯೋಗ ಮಂದಿರದಲ್ಲಿ ಭಾರತದ ಕಾನೂನು ನೆರವು ಕೇಂದ್ರ ಮಂಗಳೂರು ಮತ್ತು ವಿಜಯ ಮಾಸ್ಟರ್ ಟ್ರಸ್ಟ್ ಹಳೆಯಂಗಡಿ ಸಹಯೋಗದಲ್ಲಿ ವಿಶ್ವ ಗ್ರಾಹಕರ ಹಕ್ಕುಗಳ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಭಾರತದ ಕಾನೂನು ನೆರವು ಕೇಂದ್ರ ಮಂಗಳೂರಿನ ಅಧಕ್ಷ ಡೇನಿಯಲ್ ದೇವರಾಜ್ ಅಧಕ್ಷತೆ ವಹಿಸಿದ್ದರು. ವಕೀಲ ಎಚ್.ಶ್ರೀಪತಿ ಭಟ್, ಸಮಾಜ ಸೇವಕ ಜಯಶೀಲ ಬಂಗೇರ, ವಿಜಯ ಮಾಸ್ಟರ್ ಟ್ರಸ್ಟಿನ ಟ್ರಸ್ಟಿ ಡಿಕ್ಸನ್ ಸುಜಯ ಉಪಸ್ಥಿತರಿದ್ದರು.

ಭುವನ ಜ್ಯೋತಿ ಇನ್‌ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ ಮೂಡುಬಿದಿರೆ ಡ್ಯಾರಲ್ ಮಿರಾಂಡ ಮಾತನಾಡಿದರು. ಮೇರಿ ಸ್ವಪ್ನ ಸ್ವಾಗತಿಸಿದರು. ಮೂಡುಬಿದಿರೆ ನ್ಯಾಯಾಂಗ ಇಲಾಖೆಯ ಅಕ್ಟರ್ ನಿರೂಪಿಸಿದರು. ಶ್ರವಣ್ ಇಂಜಿನಿಯರ್ ವಂದಿಸಿದರು.