ಬೆಂಗಳೂರು: ಅನೈತಿಕ ಸಂಬಂಧ ಇಟ್ಟುಕೊಂಡಿದ್ದವನ ಜತೆ ಸೇರಿ ಮಹಿಳೆಯೊಬ್ಬಳು ಪತಿಯ ಹತ್ಯೆಗೆ ಸಂಚು ರೂಪಿಸಿ, ಸುಫಾರಿ ಕೊಟ್ಟು ಕೊಲೆ ಮಾಡಿಸಿ ಸಿಕ್ಕಿಬಿದ್ದಿರುವ ಆತಂಕಕಾರಿ ಘಟನೆ ನಡೆದಿದೆ.
ಹೆಗ್ಗನಹಳ್ಳಿ ನಿವಾಸಿ ಗಾಯತ್ರಿ ಬಂಧಿತ ಆರೋಪಿ. ಸತೀಶ್ ಎಂಬುವನ ಜತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಗಾಯತ್ರಿ, ತಮ್ಮ ಸಂಬಂಧಕ್ಕೆ ಗಂಡ ಬಸವರಾಜು ಅಡ್ಡಿ ಆಗ್ತಿದ್ದಾನೆ ಅನ್ನುವ ಕಾರಣಕ್ಕೆ ಸತೀಶ್ ಜತೆ ಸೇರಿ ಸಂಚು ರೂಪಿಸಿ ಕೊಲೆ ಮಾಡಿದ್ದಾಳೆ.
ಬಸವರಾಜು ಜುಲೈ 17ರ ರಾತ್ರಿ ಆಟೋದಲ್ಲಿ ಹೋಗ್ತಿದ್ದ. ಈ ವೇಳೆ ದರೋಡೆ ಮಾಡುವ ಸೋಗಿನಲ್ಲಿ 3 ಬೈಕ್ಗಳಲ್ಲಿ ಬಂದ 7 ದುಷ್ಕರ್ಮಿಗಳು ಬಸವರಾಜು ಮತ್ತು ಆಟೋ ಚಾಲಕನ ಮೊಬೈಲ್ ಕಿತ್ಕೊಂಡು, ಬಳಿಕ ಬಸವರಾಜುಗೆ ಚಾಕು ಇರಿದು ಪರಾರಿಯಾಗಿದ್ದರು.
ಈ ಬಗ್ಗೆ ಮಾದನಾಯಕನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೀಗ ಪೊಲೀಸರಿಂದ 6 ಮಂದಿ ಆರೋಪಿಗಳ ಬಂಧನವಾಗಿದೆ. ಬಂಧಿತರನ್ನು ಗಾಯತ್ರಿ, ಇರ್ಫಾನ್, ಸದ್ದಾಂ, ನಯಾಜ್, ಕಲೀಂ ಹಾಗೂ ರಾಮ್ ಪ್ರಶಾಂತ್ ಎಂದು ಗುರುತಿಸಲಾಗಿದೆ. (ದಿಗ್ವಿಜಯ ನ್ಯೂಸ್)